ಗೋಣಿಕೊಪ್ಪಲು, ಅ. 23: ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಟರ್ಫ್ ಮೈದಾನದಲ್ಲಿ ಹಾಕಿಕೂರ್ಗ್ ವತಿಯಿಂದ ನಡೆಯುತ್ತಿರುವ ಎ. ಡಿವಿಷನ್ ಹಾಕಿ ಲೀಗ್‍ನ 5ನೇ ದಿನದ ಪಂದ್ಯದಲ್ಲಿ ಗೆಲವು ದಾಖಲಾಗಿದ್ದು, 1 ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿದೆ.

ಟವರ್ಸ್ ತಂಡ ಬಾಡಗ ಎಸ್‍ಆರ್‍ಸಿ ವಿರುದ್ಧ 6-0 ಗೋಲುಗಳ ಜಯ ಸಾಧಿಸಿತು. ಸುದೀಶ್ 14 ಹಾಗೂ 48 ನೇ ನಿಮಿಷದಲ್ಲಿ 2 ಗೋಲು, ಪೆಮ್ಮಯ್ಯ (2ನೇ ನಿಮಿಷ), ಬೋಸ್ (22), ದರ್ಶನ್ (29), ಮೋಹಿತ್ (41), ಗೋಲು ಬಾರಿಸಿದರು.

ಹಾತೂರು ತಂಡವು ಕೂಡಿಗೆ ಸ್ಪೋಟ್ರ್ಸ್ ಕ್ಲಬ್ ವಿರುದ್ಧ 6-3 ಗೋಲುಗಳ ಅಂತರದಿಂದ ಜಯ ಸಾಧಿಸಿತು. ಹಾತೂರು ಪರ ಗಣಪತಿ 30 ಹಾಗೂ 59ನೇ ನಿಮಿಷಗಳಲ್ಲಿ 2 ಗೋಲು, ಸೋಮಣ್ಣ 26, 48 ಹಾಗೂ 55ನೇ ನಿಮಿಷಗಳಲ್ಲಿ 3 ಗೋಲು, ಉಳಿದಂತೆ 18ರಲ್ಲಿ ಧೀರಜ್ 1 ಗೋಲು, ಕೂಡಿಗೆ ಪರ 19ರಲ್ಲಿ ಚೇತನ್, 41 ಹಾಗೂ 45ರಲ್ಲಿ ಗಣೇಶ್ 2 ಗೋಲು ಬಾರಿಸಿದರು.

ಮೂರ್ನಾಡ್ ಎಂಆರ್‍ಎಫ್ ಹಾಗೂ ಪೊದ್ದ್‍ಮಾನಿ ತಂಡಗಳ ನಡುವಿನ ಪಂದ್ಯ 1-1 ಗೋಲುಗಳ ರೋಚಕ ಡ್ರಾದಲ್ಲಿ ಅಂತ್ಯವಾಯಿತು. ಪಂದ್ಯದ ಪ್ರಥಮಾರ್ಧದಲ್ಲಿ ಉಭಯ ತಂಡಗಳು ಗೋಲು ದಾಖಲಿಸಲು ಪರದಾಡಿದವು. 45ರಲ್ಲಿ ಮೂರ್ನಾಡು ತಂಡದ ಯಶ್ವಿನ್, 48ರಲ್ಲಿ ಪೊದ್ದ್‍ಮಾನಿ ಪರ ಮಾಚಯ್ಯ ಗೋಲು ಹೊಡೆದರು.

ಕೊಡವ ಸಮಾಜ ಒಕ್ಕೂಟಗಳ ಸಮಾಜದಿಂದ ಬಾಳುಗೋಡುವಿನಲ್ಲಿ ನಡೆಯಲಿರುವ ಕೊಡವ ಸಮಾಜಗಳ ಅಂತರ್ ಹಾಕಿ ಟೂರ್ನಿ ನಡೆಯುವದರಿಂದ ಎ. ಡಿವಿಷನ್ ಹಾಕಿಯ ಕೊನೆಯ ಲೀಗ್ ಹಂತದ ಪಂದ್ಯ ಅಕ್ಟೋಬರ್ 29 ರಂದು ನಡೆಯಲಿದೆ. ಅಲ್ಲಿವರೆಗೆ ಟೂರ್ನಿಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಹಾಕಿಕೂರ್ಗ್ ಪ್ರಕಟಣೆ ತಿಳಿಸಿದೆ.