*ಗೋಣಿಕೊಪ್ಪಲು, ಅ. 24: ನವೆಂಬರ್ 18, 19 ರಂದು ಪೊನ್ನಂಪೇಟೆ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುವ ಕೊಡಗು ಜಿಲ್ಲಾ 12 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್ ಸಾಗರ್ ಲೋಕಾರ್ಪಣೆಗೊಳಿಸಿದರು. ಪೆÇನ್ನಂಪೇಟೆ ತಾ.ಪಂ. ಸಾಮಥ್ರ್ಯ ಸೌಧ ಸಭಾಂಗಣದಲ್ಲಿ ನಡೆದ ಸಮ್ಮೇಳನದ ಮೂರನೇ ಪೂರ್ವಭಾವಿ ಸಭೆಯಲ್ಲಿ ಲಾಂಛನ ಬಿಡುಗಡೆ ಮಾಡಲಾಯಿತು. ಸಭೆಯಲ್ಲಿ ಸಮ್ಮೇಳನದ ಎರಡು ದಿನಗಳು ನಡೆಯಬೇಕಾದ ಕಾರ್ಯ ವೈಖರಿಗಳ ಬಗ್ಗೆ ಚರ್ಚಿಸಲಾಯಿತು. 6 ದ್ವಾರಗಳು ಹಾಗೂ ಮುಖ್ಯ ದ್ವಾರ ವೇದಿಕೆಗಳಿಗೆ ಸಾಹಿತ್ಯ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡ ಮಹನೀಯರ ಹೆಸರು ಇಡಲು ಚರ್ಚಿಸಲಾಯಿತು. ಆಹಾರ ವ್ಯವಸ್ಥೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಗೋಷ್ಠಿಗಳು ವೇದಿಕೆ ನಿರ್ಮಾಣದ ಬಗ್ಗೆ ಸಲಹೆ ಸೂಚನೆಗಳನ್ನು ಪಡೆಯಲಾಯಿತು. 18ರಂದು ನಡೆಯುವ ಮೆರವಣಿಗೆಗೆ ಜಿಲ್ಲಾ ವ್ಯಾಪ್ತಿಯ ಸಂಘ ಸಂಸ್ಥೆಗಳು, ಶಾಲಾ-ಕಾಲೇಜುಗಳು ಭಾಗವಹಿಸು ವಂತೆ ಈ ಸಂದರ್ಭ ಕರೆ ನೀಡಲಾಯಿತು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮುಲ್ಲೇಂಗಡ ಮಧೋಶ್ ಪೂವಯ್ಯ, ಪ್ರಧಾನ ಕಾರ್ಯದರ್ಶಿ ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ, ಕಾರ್ಯದರ್ಶಿ ರೇಖಾ ಶ್ರೀಧರ್, ಜಿಲ್ಲಾ ನಿರ್ದೇಶಕರುಗಳಾದ ಶ್ರೀಧರ್ ನೆಲ್ಲಿತ್ತಾಯ, ಕೆ.ಆರ್. ಬಾಲಕೃಷ್ಣ ರೈ, ನಾಗರಾಜ್ ಶೆಟ್ಟಿ, ಹಣಕಾಸು ಸಮಿತಿ ಅಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಆಹಾರ ಸಮಿತಿ ಅಧ್ಯಕ್ಷ ಮಂಜು, ಮೆರವಣಿಗೆ ಸಮಿತಿ ಅಧ್ಯಕ್ಷ ಶ್ರೀಜಾ ಸಾಜಿ ಅಚ್ಚುತ್ತನ್, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಕಿರಣ್ ಫಡ್ನೇಕರ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕಾಳಿಮಾಡ ಡಾ. ಶಿವಪ್ಪ, ಸಂಚಾಲಕರಾದ ಚೇಂದಂಡ ಸುಮಿ ಸುಬ್ಬಯ್ಯ, ರತಿ ಅಚ್ಚಪ್ಪ, ಸ್ಮರಣ ಸಂಚಿಕೆ ಸಂಚಾಲಕರಾದ ದಂಬೆಕೊಡಿ ಸುಶೀಲಾ, ತಾ.ಪಂ. ಸದಸ್ಯೆ ಆಶಾ ಜೇಮ್ಸ್, ತಾ.ಪಂ. ಮಾಜಿ ಸದಸ್ಯ ಸಾಜಿ ಅಚ್ಚುತ್ತನ್, ಕೋಳೆರ ದಯಾ, ಪೆÇನ್ನಂಪೇಟೆ ಹೋಬಳಿ ಅಧ್ಯಕ್ಷ ಡಾ. ಚಂದ್ರಶೇಖರ್, ಆರೋಗ್ಯ ಸಮಿತಿ ಅಧ್ಯಕ್ಷರಾದ ಡಾ. ಯತಿರಾಜ್, ಸಂಚಾಲಕರಾದ ಡಾ. ರಮೇಶ್ ಹಾಜರಿದ್ದರು.