ಮಡಿಕೇರಿ, ಅ. 24: ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಮನೆ ಮನೆ ಕಡೆಗೆ ಕಾಂಗ್ರೆಸ್ ನಡಿಗೆ ಕಾರ್ಯಕ್ರಮದ ಮೂಲಕ ಜನರನ್ನು ಭೇಟಿಯಾಗುತ್ತಿರುವ ದೃಶ್ಯವೊಂದನ್ನು ಸೆರೆ ಹಿಡಿದು ತಮ್ಮ ವಿರುದ್ಧ ತೇಜೋವಧೆಯ ಬರಹದೊಂದಿಗೆ ವಾಟ್ಸ್ ಅಪ್ ಜಾಲತಾಣದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷರಾದ ಟಿ.ಪಿ. ರಮೇಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪೆÀÇಲೀಸರಿಗೆ ದೂರು ಸಲ್ಲಿಸಿ, ಅಪಪ್ರಚಾರ ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವದಾಗಿ ಅವರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಕಾಂಗ್ರೆಸ್ ಅಧ್ಯಕ್ಷರ ನೆÉೀತೃತ್ವದಲ್ಲಿ ಕಳೆದ ಭಾನುವಾರ ನಗರದ ಎವಿ ಶಾಲೆಯಿಂದ ಆರಂಭ ಗೊಂಡ ಕಾಂಗ್ರೆಸ್ ನಡಿಗೆ ಕಾರ್ಯ ಕ್ರಮದಲ್ಲಿ ತಾನು ಪಾಲ್ಗೊಂಡಿದ್ದೆ. ಈ ಸಂದರ್ಭ ತ್ಯಾಗರಾಜ ಕಾಲೋನಿ ಬಳಿ ಹಿಂದೆ ನಗರಸಭಾ ಸದಸ್ಯರಾಗಿದ್ದ ಜೆಡಿಎಸ್ ಸದಸ್ಯೆಯೊಬ್ಬರ ಮನೆಗೆ ತೆರಳಿ, ಗೌರವಪೂರ್ವಕವಾಗಿ ಅವರಿಗೆ ಕಾಂಗ್ರೆಸ್ ಸಾಧನೆಯ ಕರಪತ್ರವನ್ನು ನೀಡಿ ಪಕ್ಷಕ್ಕೆ ಬೆಂಬಲವನ್ನು ನೀಡಿ ಎಂದು ಕೋರಿ ಹಿಂತೆರಳಲಾಗಿತ್ತು.

ಈ ಸಂದರ್ಭ ತಾನು ಪಕ್ಷದ ಪ್ರಮುಖರ ಸಹಿತ ಮಹಿಳೆಯೊಂದಿ ಗಿರುವ ದೃಶ್ಯವೊಂದನ್ನು ವಾಟ್ಸ್ ಅಪ್‍ಗೆ ‘ಕೈ ಹಿಡಿದು ಕಾಂಗ್ರೆಸ್ ನಡಿಗೆಗೆ ಚಾಲನೆ’ ಎನ್ನುವ ಬರಹದೊಂದಿಗೆ ಹಾಕುವ ಮೂಲಕ ನನ್ನ ಹೆಸರಿಗೆ ಕಳಂಕ ತಂದು ತೇಜೋವಧೆ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ತನ್ನ ರಾಜಕೀಯ ಜೀವನದಲ್ಲಿ ಮೂರು ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದು, ಲಕ್ಷಾಂತರ ಮಂದಿಯನ್ನು ಆತ್ಮೀಯವಾಗಿ ಭೇಟಿಯಾಗಿ ಅವರ ಕಾಲು ಹಿಡಿದು, ಗೌರವ ಪೂರ್ವಕವಾಗಿ ಕೈಗಳನ್ನು ಹಿಡಿದು ಪಕ್ಷಕ್ಕಾಗಿ ಮತಯಾಚನೆ ಮಾಡಿದ್ದೇನೆ. ಆದರೆ ಇದೀಗ ಉದ್ದೇಶ ಪÀÇರ್ವಕವಾಗಿ ಕಳಂಕ ತರಲು ಯತ್ನಿಸಲಾಗುತ್ತಿದೆ ಎಂದು ರಮೇಶ್ ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಜಿಲ್ಲಾ ಪೊಲೀಸರ ಮೂಲಕ ಸೈಬರ್ ಕ್ರೈಂಗೆ ದೂರು ದಾಖಲಿಸಲಿದ್ದೇನೆ. ವಾಟ್ಸ್ ಅಪ್ ಮೂಲಕ ಅವಹೇಳನಕಾರಿ ಬರಹದೊಂದಿಗೆ ದೃಶ್ಯ ಕಳುಹಿಸಿದ್ದು ಯಾರೆಂದು ಕಂಡು ಕೊಳ್ಳುವ ಮೂಲಕ ಕಾನೂನು ಹೋರಾಟ ನಡೆಸುವದಾಗಿ ತಿಳಿಸಿದರು.

ಈ ಹಿಂದೆ ನಡೆದ ಒಂದು ಘಟನೆ ಸಾರ್ವಜನಿಕ ವಲಯದಲ್ಲಿ ತಪ್ಪೆಂದು ಬಿಂಬಿತವಾದ ಸಂದರ್ಭವೆ ತಾನು ಸಾರ್ವಜನಿಕವಾಗಿ ಕ್ಷಮೆಯನ್ನು ಕೋರಿ ತನ್ನ ಸ್ಥಾನಕ್ಕೆ ರಾಜೀನಾಮೆ ಯನ್ನು ಸಲ್ಲಿಸಿದ್ದೇನೆ. ಪಕ್ಷದ ವರಿಷ್ಠರು ನನ್ನನ್ನು ಇರಿಸಿಕೊಳ್ಳಲಿ, ಇಲ್ಲವೆ ಕಳುಹಿಸಲಿ ಎಂದು ಸ್ಪಷ್ಟಪಡಿಸಿದರು.

ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಕೆ.ಯು. ಅಬ್ದುಲ್ ರಜಾಕ್ ಮಾತನಾಡಿ, ಮನೆ ಮನೆ ಕಡೆಗೆ ಕಾಂಗ್ರೆಸ್ ನಡಿಗೆ ಕಾರ್ಯಕ್ರಮವನ್ನು ನಗರ ಕಾಂಗ್ರೆಸ್‍ನಿಂದ ಕಳೆದ ಎರಡು ವಾರಗಳಿಂದ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಕಳಂಕ ತರುವ ಉದ್ದೇಶದಿಂದ ರಮೇಶ್ ಅವರ ಗೌರವಕ್ಕೆ ಚ್ಯುತಿ ತರುವ ಪ್ರಯತ್ನ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮೂಡ ಅಧ್ಯಕ್ಷ ಎ.ಸಿ.ಚುಮ್ಮಿ ದೇವಯ್ಯ ಮಾತನಾಡಿ, ರಮೇಶ್ ಅವರನ್ನು ಅವಹೇಳನ ಮಾಡುವ ನಿಟ್ಟಿನಲ್ಲಿ ವಾಟ್ಸ್ ಅಪ್‍ನಲ್ಲಿ ಕೆಟ್ಟ ಬರಹ ಮತ್ತು ದೃಶ್ಯ ಹಾಕಿರುವದನ್ನು ಖಂಡಿಸಿದರು. ಇದು ವಿಕೃತ ಮನಸ್ಸಿನವರು ಮಾಡಿರುವ ತೋಜೋವಧೆಯ ಪ್ರಯತ್ನವೆಂದು ಟೀಕಿಸಿದರು.

ಇಂದಿರಾ ಜನ್ಮ ಶತಾಬ್ಧಿ

ಬೆಂಗಳೂರಿನಲ್ಲಿ ಕೊಡಗು ಜಿಲ್ಲೆ ಸೇರಿದಂತೆ 7 ಜಿಲ್ಲೆಗಳ ಪಕ್ಷದ ನಾಯಕರು, ಬ್ಲಾಕ್ ಹಾಗೂ ವಿವಿಧ ಘಟಕಗಳ ಅಧ್ಯಕ್ಷರ ಸಭೆಯನ್ನು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ನಡೆಸಿದ್ದಾರೆ. ನವೆಂಬರ್ 19 ರಂದು ಇಂದಿರಾಗಾಂಧಿ ಜನ್ಮ ಶತಾಬ್ಧಿ ಕಾರ್ಯಕ್ರಮವನ್ನು ಚಿಕ್ಕಮಗಳೂರಿನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಡಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಇದೇ ಸಂದರ್ಭ ಟಿ.ಪಿ. ರಮೇಶ್ ತಿಳಿಸಿದರು.

ಗೋಷ್ಠಿಯಲ್ಲಿ ನಗರಸಭಾ ಸದಸ್ಯರಾದ ಪ್ರಕಾಶ್ ಆಚಾರ್ಯ ಉಪಸ್ಥಿತರಿದ್ದರು.