ವೀರಾಜಪೇಟೆ ಅ:24: ಕಡಂಗ, ತೋಮರ, ಕೆದಮುಳ್ಳೂರು, ಪಾಲಂಗಾಲ ಹಾಗೂ ಕರಡ ಗ್ರಾಮಗಳ ವಿವಿಧೆಡೆಗಳಿಂದ ಶತಮಾನಗಳಿಂದ ಮಲೆತಿರಿಕೆ ಬೆಟ್ಟದ ದೇವಸ್ಥಾನಕ್ಕೆ ನಡೆದುಕೊಂಡು ಹೋಗುತ್ತಿದ್ದ ಸಾರ್ವಜನಿಕ ರಸ್ತೆಗೆ ಅಡ್ಡ ಬೇಲಿ ಹಾಕಿ ತಡೆ ಒಡ್ಡಿದ ದೂರಿನ ಮೇರೆ ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜ್, ರೆವಿನ್ಯೂ ಇನ್ಸ್‍ಪೆಕ್ಟರ್ ಹಾಗೂ ಸಿಬ್ಬಂದಿ ಇಂದು ಐದು ಗ್ರಾಮಸ್ಥರ ಸಮ್ಮುಖದಲ್ಲಿ ಸ್ಥಳ ಪರಿಶೀಲನೆ ನಡೆಸಿ ತುರ್ತಾಗಿ ಕ್ರಮ ಕೈಗೊಳ್ಳಲಾಗುವದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.ಕಳೆದ ಏಳು ದಿನಗಳಿಂದ ಈ ಸಾರ್ವಜನಿಕ ರಸ್ತೆಗೆ ಮಲೆತಿರಿಕೆ ಬೆಟ್ಟದ ಒತ್ತಿನಲ್ಲಿರುವ ಭೂ ಮಾಲೀಕರುಗಳಾದ ಕೆ.ಗಣೇಶ್ ಗಣಪತಿ ಹಾಗೂ ಸಿ.ಗಣೇಶ್ ಎಂಬವರು ದೇವಾಲಯಕ್ಕೆ ಸುಮಾರು 2ಕಿ.ಮಿ ಅಂತರದಲ್ಲಿ ಪಟ್ಟಿಯಾಣೆ ಮೊಟ್ಟೆ ಕಲ್ಲು ಎಂಬಲ್ಲಿ ಬೇಲಿ ಹಾಕಿ ಯಾರು ಅತ್ತಿತ್ತ ಕಾಲ್ನಡಿಗೆಯಲ್ಲಿ ದಾಟದಂತೆ ರಸ್ತೆ ಮಧ್ಯ ಚರಂಡಿ ತೆಗೆದು ಸಾರ್ವಜನಿಕ ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ. ಇದರಿಂದ ಅಕ್ಕ ಪಕ್ಕದ ಗ್ರಾಮಸ್ತರಿಗೆ ಅಲ್ಲದೆ ಬೆಟ್ಟದ ಮೇಲಿನ ಖಾಯಂ ನಿವಾಸಿಗಳಾದ ಬಿ.ಎಸ್.ನಾರಾಯಣ, ಜನಾರ್ಧನ್, ಶಿವಕುಮಾರ್, ಗುರುರಾಜ್, ಬಿ.ಡಿ.ಗಣಪತಿ, ಸುಬ್ಬಯ್ಯ, ಫಯಾಜ್, ಫೈಜಲ್

ಹುಸೇನಾರ್ ಸೇರಿದಂತೆ ಅನೇಕ ನಿವಾಸಿಗಳು

(ಮೊದಲ ಪುಟದಿಂದ) ದೇವಾಲಯದ ಭಕ್ತಾಧಿಗಳು ಹಾಗೂ ಜಾಗದ ನೆರೆ ಕೆರೆಯ ಗ್ರಾಮಸ್ತರ ಮನವಿಯನ್ನು ಹಾಗೂ ಜಾಗವನ್ನು ಖುದ್ದು ಪರಿಶೀಲಿಸಿದ ಗೋವಿಂದರಾಜ್ ಅವರು ಈ ವಿಷಯವನ್ನು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದು ಸೂಕ್ತ ಪರಿಹಾರ ಕಲ್ಪಿಸಲಾಗುವದು ಎಂದು ರಸ್ತೆ ಬಂದ್ ವಿರುದ್ಧ ರೊಚ್ಚಿಗೆದ್ದಿದ್ದ ಗ್ರಾಮಸ್ಥರನ್ನು ಸಮಧಾನಗೊಳಿಸಿದರು.

ಇದೇ ಸಂದರ್ಭದಲ್ಲಿ ಸ್ಥಳದಲ್ಲಿಯೇ ಹಾಜರಿದ್ದ ಕೆದಮುಳ್ಳೂರು ಗ್ರಾಮ ಪಂಚಾಯಿತಿ ಸದಸ್ಯ ಅರುಣ್ ಕಾರ್ಯಪ್ಪ ಮಾತನಾಡಿ 1957ರಿಂದಲೂ ಇಲ್ಲಿಯ ತನಕ ಈ ರಸ್ತೆಯ ದಾಖಲೆ ಗ್ರಾಮ ಪಂಚಾಯಿತಿಯಲ್ಲಿದ್ದು 1995ರಲ್ಲಿ ಪಂಚಾಯಿತಿ ಇದೇ ರಸ್ತೆ ಅಭಿವೃದ್ಧಿಗಾಗಿ ರೂ 20,000 ಮಂಜೂರು ಮಾಡಿದ್ದು ಆಗ ಕಾಲು ದಾರಿಯ ರಸ್ತೆಯನ್ನು ಮಣ್ಣು ರಸ್ತೆಯಾಗಿ ಮಾರ್ಪಡಿ¸ Àಲಾಯಿತು. ಈ ರಸ್ತೆಯ ಉಸ್ತುವಾರಿ ಜವಾಬ್ದಾರಿ ಪಂಚಾಯಿತಿ ಮೇಲಿದೆ.

ಕರಿನೆರವಂಡ ಪೂಣಚ್ಚ ಮಾತನಾಡಿ ಮಲೆತಿರಿಕೆಬೆಟ್ಟದ ದೇವರ ಉತ್ಸವದಲ್ಲಿ ವಿವಿಧೆಡೆಗಳ ಗ್ರಾಮಗಳಿಂದ ಬರುವ ಹಾಗೂ ಶತಮಾನಗಳ ಹಿಂದಿನ ಸಂಸ್ಕøತಿ ಆಚಾರ ವಿಚಾರವನ್ನು ಬಿಂಬಿಸುವ ಸಾಂಪ್ರದಾಯಿಕ ಎತ್ತು ಪೋರಾಟದ ಪದ್ದತಿಯಲ್ಲಿ ದೇವರ ನೈವೇದ್ಯಕ್ಕಾಗಿ ನಡಿಗೆಯ ಮೂಲಕ ಗೋವುಗಳಲ್ಲಿ ಬರುವ ನೈವೇದ್ಯಕ್ಕಾಗಿ ಬರುವ ಅಕ್ಕಿ ದೇವಾಲಯಕ್ಕೆ ಇದೇ ದಾರಿಯಲ್ಲಿ ತಲಪುತ್ತಿದೆ. ಈ ಸಾರ್ವಜನಿಕ ರಸ್ತೆಯನ್ನು ಬಂದ್ ಮಾಡುವದು ಅಪರಾಧ. ಈ ರಸ್ತೆ ಜಾಗ ಯಾರಿಗೂ ಸಂಬಂಧಿಸಿಲ್ಲ, ರಸ್ತೆ ಬಂದ್‍ಗೆ ಭೂ ಮಾಲೀಕರು ಮುಂದಾದರೆ ತೀವ್ರ ಹೋರಾಟ ಎದುರಿಸಬೇಕಾಗಿದೆ ಎಂದು ಹೇಳಿದರು.

ವೀರಾಜಪೇಟೆಯಿಂದ ಕರಡಕ್ಕೆ ತೆರಳುವ ಪಾಲಂಗಾಲ ಬಳಿಯ ಸಂಪರ್ಕ ಮಣ್ಣು ರಸ್ತೆಯಿಂದ ಮಲೆತಿರಿಕೆಬೆಟ್ಟದ ದೇವಸ್ಥಾನಕ್ಕೆ 4ಕಿ.ಮೀ. ಅಂತರವಿದೆ. ರಸ್ತೆ ಬಂದ್ ಮಾಡಿರುವ ಪಟ್ಟಿಯಾಣೆ ಕಲ್ಲು ಮೊಟ್ಟೆಯ ಪ್ರದೇಶದಿಂದ, ದೇವಸ್ಥಾನಕ್ಕೆ ಕೇವಲ ಎರಡು ಕಿ.ಮೀ ಕ್ರಮಿಸಬೇಕಾಗಿದೆ.

ತಹಶೀಲ್ದಾರ್ ಅವರು ಪಟ್ಟಿಯಾಣೆ ಕಲ್ಲು ಮೊಟ್ಟೆ ಪ್ರದೇಶದ ಬೇಲಿಯ ಜಾಗಕ್ಕೆ ಭೇಟಿ ನೀಡುವ ಸಮಯದಲ್ಲಿ ಗ್ರಾಮದ ವಿವಿಧ ಸಂಘಟನೆಗಳ ಪ್ರಮುಖರು, ನಿವಾಸಿಗಳು, ಗ್ರಾಮಸ್ತರುಗಳು, ಗ್ರಾಮ ಪಂಚಾಯಿತಿ ಸದಸ್ಯ ಪರಮೇಶ್ವರ್, ಉದಯ್ ಮುತ್ತಪ್ಪ, ಪೂವಣ್ಣ, ಚೀಯಣ್ಣ ಗೌಡಧಾರೆ ಬಿದ್ದಪ್ಪ ಮತ್ತಿತರರು ಹಾಜರಿದ್ದರು.