ಗೋಣಿಕೊಪ್ಪಲು, ಅ. 24: ಹಳ್ಳಿಗಟ್ಟು ಕೂರ್ಗ್ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿಗಳು ಗ್ಲೈರೋ ಕಾಪ್ಟರ್ ಎಂಬ ಗಾಳಿಯಲ್ಲಿ ಹಾರಾಡುವ ಯಂತ್ರದ ಆವಿಷ್ಕಾರದ ಮೂಲಕ ಸಂಚಲನ ಮೂಡಿಸಿದ್ದಾರೆ.2016 ರ ಮೆಕಾನಿಕಲ್ ವಿದ್ಯಾರ್ಥಿಗಳಾದ ವಿ. ವಿ. ಲಿತಿನ್, ವಿ. ಕೆ. ಗಣೇಶ್ ನೇತೃತ್ವದಲ್ಲಿ ದೇಶದಲ್ಲಿ ಇದೇ ಮೊದಲ ಬಾರಿಗೆ ಹಾರಲು ಸಿದ್ಧವಾಗಿರುವ ಗೈರೋ ಕಾಪ್ಟರ್‍ರನ್ನು 24 ತಿಂಗಳಲ್ಲಿ ಪೂರೈಸಿದ್ದಾರೆ. ಗ್ರೀಕ್ ಭಾಷೆಯ ಪದದಿಂದ ಈ ಯಂತ್ರಕ್ಕೆ ಹೆಸರನ್ನು ಇಡಲಾಗಿದೆ. ಅಟೋ ಗೈರೋ ಎಂದರೆ ಸ್ವಯಂ ತಿರುಗುವಿಕೆಗೆ ಎಂಬ ಅರ್ಥ ಗ್ರೀಕ್ ಪದದಲ್ಲಿದೆ. ವಿದ್ಯುತ್ ಅಥವಾ ಪೆಟ್ರೋಲ್ ಬಳಕೆಯಿಲ್ಲದೆ ಇದರ ಮೇಲಿರುವ ಬ್ಲೇಡ್‍ಗಳು ಮೇಲಕ್ಕೆ ಕೊಂಡೊಯ್ಯು ವಂತಹ ಮತ್ತು ಇಂಜಿನ್ ಚಾಲಿತ ಪ್ರೋಪೆಲರ್ ಇದನ್ನು ಮುಂದಕ್ಕೆ ಹೊಯ್ಯುವಂತ ಯಂತ್ರ ಇದಾಗಿದೆ. ಇಂಜಿನ್ ಪೆಟ್ರೋಲ್ ಮೂಲಕ ಚಲಾಯಿಸಲಾಗುತ್ತದೆ.

ಅಟೋ ಗೈರೋನ ಮೇಲಿರುವ ಬ್ಲೇಡ್‍ಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಗಾಳಿ ದೊರಕಿದಲ್ಲಿ ಪ್ರದಕ್ಷಿಣವಾಗಿ ತಿರುಗಲು ಸಾಧ್ಯವಾಗುತ್ತದೆ. ಇದರಿಂದ ಯಂತ್ರ ಮೇಲೆ ಹಾರಾಡಲು ಪ್ರಾರಂಬಿಸುತ್ತದೆ. ಆರಂಭಿಕ

(ಮೊದಲ ಪುಟದಿಂದ) ಹಂತದಲ್ಲಿ 50 ರಿಂದ 60 ಅಡಿಗಳಷ್ಟು ಎತ್ತರ ಹಾರುವ ಈ ಕಾಪ್ಟ್‍ರನ್ನು ಯಾವ ಸಾಮಥ್ರ್ಯಕ್ಕೆ ಅನುಗುಣವಾಗಿ ಮೇಲ್ದರ್ಜೆಗೇರಿಸಲು ಅವಕಾಶವಿದೆ.

ಅಟೋ ಗೈರೋ ಜಿಸಿ 350 ನಿರ್ಧಿಷ್ಟತೆ ಉದ್ದ 3 ಮೀ, ಅಗಲ 1.8 ಮೀ, ಎತ್ತರ 2.3 ಮೀ, ತೂಕ 115 ಕೆ.ಜಿ, ಬ್ಲೇಡ್‍ನ ಉದ್ದ 7 ಮೀ, 2 ಶ್ಟೋಕ್ ಪೆಟ್ರೋಲ್, 2 ಸಿಲಿಂಡರ್‍ನ ಯಮಹಾ ಯಾಡಿ 350 ಇಂಜಿನ್ ಹೊಂದಿದೆ.

ರೂ. 2.50 ಲಕ್ಷದಲ್ಲಿ ತಯಾರಿಸಿರುವ ಗೈರೋ ಕಾಪ್ಟರ್ ಬಿಡಿಭಾಗಗಳನ್ನು ಮಂಗಳೂರು, ಬೆಂಗಳೂರು, ಚೆನೈ, ಕೊಚ್ಚಿನ್, ಕ್ಯಾನನೂರ್‍ನಿಂದ ತರಿಸಲಾಗಿದೆ.

1983 ರಲ್ಲಿ ಮೊದಲ ಗೈರೋ ಕಾಪ್ಟರ್‍ರನ್ನು ಬೆಂಗಳೂರಿನ ಭಾರತೀಯ ವಿಜಾÐನ ಸಂಸ್ಥೆ ಪ್ರೋಫೆಸರ್ ರುಸ್ತುಂ ಡಾಮಿನಿಅಕ್ಟ್ ತಯಾರಿಸಿದ್ದು ಇದು ಅಮೇರಿಕನ್ ಬೆನ್ಸಸನ್ ಗೈರೋ ಕಾಪ್ಟರ್‍ನ ಮಾದರಿಯಾಗಿದೆ. ಇದು ಭಾರತದಲ್ಲಿ ಮೊದಲ ಬಾರಿಗೆ ಹಾರಡಿದ 133 ಕೆ.ಜಿಯ ಗೈರೋ ಕಾಪ್ಟರ್.

ವಿಶೇಷವೆಂದರೆ ಸಂಪೂರ್ಣ ಕೈಯಿಂದಲೇ ತಯಾರಿಸಿದ ಏಕೈಕ ಭಾರತೀಯ ಹಾರುವ ಇಂಜಿನ್ ಇದಾಗಿದೆ. ಕೇವಲ 4 ತಲೆಯ ಸ್ಪಾನರ್‍ಗಳಿಂದ ಇದನ್ನು ಜೋಡಿಸಬಹುದ್ದಾಗಿದ್ದು, ಕೆಲವು ನಿಮಿಷಗಳಲ್ಲಿ ಇದನ್ನು ಕಳಚಿ ಬೇರೆಡೆಗೆ ಕೊಂಡೊಯ್ಯಬಹುದು. ಸಾಮಾನ್ಯ ಮೋಟರ್ ವೆಹಿಕಲ್‍ಗಿಂತ ಕಡಿಮೆ ತೂಕದಾಗಿದೆ.

ಗೈರೋ ಕಾಪ್ಟರ್ 60 ರಿಂದ 70 ಕೆ.ಜಿ ವ್ಯಕ್ತಿಯನ್ನು ಕೊಂಡ್ಯೊಯುವ ಸಾಮಥ್ರ್ಯ ಹೊಂದಿದ್ದು, ಇದು ಮೇಲೆ ಹಾರಲು 1 ಕಿ.ಮೀ. ಉದ್ದದ ರನ್ ವೇ ಅವಶ್ಯಕತೆ ಇರುವದರಿಂದ ಮುಂದಿನ ದಿನಗಳಲ್ಲಿ ಇದನ್ನು ಕೇರಳದ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ಹಾರಾಟ ನಡೆಸಲು ಚಿಂತಿಸಲಾಗಿದೆ. ಈ ಹಿಂದೆ ತಮಿಳುನಾಡು ಹಾಗೂ ಕೇರಳದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಇದನ್ನು ತಯಾರಿಸಲು ಪ್ರಯತ್ನಿಸಿದರಾದರೂ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ.

ಪ್ರಾಂಶುಪಾಲ ಮಹಬಲೇಶ್ವರಪ್ಪ, ಮೆಕಾನಿಕಲ್ ವಿಭಾಗದ ಮುಖ್ಯಸ್ಥ ಕೊಟ್ರಮಾಡ ಸುಬ್ಬಯ್ಯ, ಗೈಡ್ ಬೊಟ್ಟಂಗಡ ಕಿಶನ್ ಕರುಂಬಯ್ಯ, ಪ್ರಯೋಗಾಲಯ ಸಹಾಯಕ ವಿಜೇಶ್, ಹಾಗೂ ತಾಂತ್ರಿಕ ಸಲಹೆಗಾರರಾದ ಕೊಲ್ಲಿಮಾಡ ರಾಜಿ ಹಾಗೂ ಮಾಪಂಗಡ ಮುತ್ತಣ್ಣ ಇವರುಗಳು ವಿದ್ಯಾರ್ಥಿಗಳ ಉತ್ಸಾಹಕ್ಕೆ ಬೆಂಬಲವಾಗಿ ನಿಲ್ಲುವ ಮೂಲಕ ಹಾರಾಟಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.