ಮಡಿಕೇರಿ, ಅ. 24: ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಸ.ಮಾ.ಪ್ರಾ. ಶಾಲೆ ಇವುಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರದ ಟರ್ಫ್ ಹಾಕಿ ಮೈದಾನದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದಲ್ಲಿ ಕೊಡಗು ತಂಡ ಹಾಗೂ ಬಾಲಕಿಯರ ವಿಭಾಗದಲ್ಲಿ ಹಾಸನ ತಂಡಗಳು ಚಾಂಪಿಯನ್ ಆಗಿ ಹೊರಹೊಮ್ಮಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿವೆ.ಇಂದು ನಡೆದ 17 ವರ್ಷದೊಳಗಿನ ಬಾಲಕರ ಪಂದ್ಯಾವಳಿಯಲ್ಲಿ ಕೊಡಗು ತಂಡ ಹಾಸನ ತಂಡವನ್ನು 7-0 ಗೋಲುಗಳ ಅಂತರದಿಂದ ಸೋಲಿಸಿತು. ಕೊಡಗು ತಂಡದ ಪರ ಗೌತಂ 2, ಅಖಿಲ್ ಪೆಮ್ಮಯ್ಯ 1, ಪೂವಣ್ಣ 3 ಹಾಗೂ ವಿವೇಕ್ 1 ಗೋಲು ಗಳಿಸಿ ವಿಜಯದ ರೂವಾರಿಗಳಾದರು.

14 ವರ್ಷದೊಳಗಿನ ಬಾಲಕರ ಪಂದ್ಯಾವಳಿಯಲ್ಲಿ ಕೊಡಗು ತಂಡ ಹಾಸನ ತಂಡವನ್ನು 5-1 ಗೋಲುಗಳ ಅಂತರದಿಂದ ಮಣಿಸಿತು. ಕೊಡಗು ತಂಡ ಪರ ಶಿವಂತ್ 3, ಆಕಾಶ್ ಬಿದ್ದಪ್ಪ 2 ಗೋಲು ಬಾರಿಸಿದರೆ, ಹಾಸನದ ಪರ ನಕುಲ್ ಮಲ್ನಾಡ್ 1 ಗೋಲು ಗಳಿಸಿದರು.

17 ವರ್ಷದೊಳಗಿನ ಬಾಲಕಿಯರ ಪಂದ್ಯಾವಳಿಯಲ್ಲಿ ಹಾಸನ ತಂಡ ಕೊಡಗು ತಂಡವನ್ನು 2-0 ಗೋಲುಗಳಿಂದ ಮಣಿಸಿತು. ಹಾಸನ ತಂಡದ ಪರ ಚಂದನ ಹಾಗೂ ಸ್ನೇಹ ಗೋಲು ಗಳಿಸಿದರು.

14 ವರ್ಷದೊಳಗಿನ ಪಂದ್ಯಾವಳಿಯಲ್ಲಿ ಹಾಸನ ತಂಡ ಕೊಡಗು

(ಮೊದಲ ಪುಟದಿಂದ) ತಂಡವನ್ನು 3-2 ಗೋಲುಗಳಿಂದ ಮಣಿಸಿತು. ಹಾಸನ ಪರ ದೇಚಮ್ಮ 2 ಗೋಲುಗಳಿಸಿ ಗಮನ ಸೆಳೆದರು.

ಉತ್ತಮ ಆಟಗಾರ್ತಿಯಾಗಿ ಕೊಡಗು ತಂಡದ ದೇಚಮ್ಮ, ಹಾಸನ ತಂಡದ ಚಂದನ, ಆಟಗಾರರಾಗಿ ಕೊಡಗು ತಂಡದ ಆಕಾಶ್ ಬಿದ್ದಪ್ಪ, ಅಖಿಲ್ ತಮ್ಮಯ್ಯ ವೈಯಕ್ತಿಕ ಪ್ರಶಸ್ತಿ ಪಡೆದುಕೊಂಡರು.

ಕೊಡಗು ತಂಡದ ಅಂತೋಣಿ ಯಾವದೇ ರಕ್ಷಣಾ ಕವಚಗಳನ್ನು ಧರಿಸದೆ ಗೋಲ್ ಕೀಪರ್ ಆಗಿ, ಆಟಗಾರನಾಗಿ ಗಮನ ಸೆಳೆದರು.