ಮಡಿಕೇರಿ, ಅ. 25: ಕೊಡಗು ಸೇರಿದಂತೆ ಹಲವೆಡೆ ವಿದೇಶಿ ಮೂಲದ ಕರಿಮೆಣಸು ವಹಿವಾಟು ಸಂಬಂಧಿತ ವಿವಿಧ ಬೆಳೆಗಾರ ಸಂಘಟನೆಗಳು ಒಗ್ಗೂಡಿ ಸಭೆ ನಡೆಸಿದ್ದು ಕರಿಮೆಣಸು ಆಮದಿಗೆ ಸಂಬಂಧಿಸಿದಂತೆ ವಿರೋಧ ವ್ಯಕ್ತಪಡಿಸುವ ಆನ್ ಲೈನ್ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.

ಕುಶಾಲನಗರದಲ್ಲಿ ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಸಹಯೋಗದಲ್ಲಿ ಸಭೆ ನಡೆಸಿದ ಕರ್ನಾಟಕ ಬೆಳೆಗಾರರ ಒಕ್ಕೂಟ, ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಸಂಘಟನೆಗಳ ಪದಾಧಿಕಾರಿಗಳು ಪ್ರಸ್ತುತ ಕರಿಮೆಣಸು ಆಮದಿನಿಂದಾಗಿ ಭಾರತೀಯ ಕಾಳುಮೆಣಸಿಗೆ ಬೆಲೆ ಮತ್ತು ಬೇಡಿಕೆ ಗಣನೀಯವಾಗಿ ಇಳಿಮುಖವಾಗಿರುವ ಬಗ್ಗೆ ಚರ್ಚೆ ನಡೆಸಿದರು. ಈಗಾಗಲೇ ಈ ವಿಚಾರದಲ್ಲಿ ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಡಾ. ಚಂಗಪ್ಪ ವಾಣಿಜ್ಯ ಸಚಿವರನ್ನು ಸಂಪರ್ಕಿಸಿದ್ದು, ವಿಚಾರದ ಬಗ್ಗೆ ತಿಳಿಸಿರುವ ಬಗ್ಗೆಯೂ ಸಭೆಯಲ್ಲಿ ಮಾಹಿತಿ ನೀಡಲಾಯಿತು .

ಸಭೆಯಲ್ಲಿ ಕೆಲವು ಬೆಳೆÀಗಾರರು ಇಳಿಮುಖವಾಗುತ್ತಿರುವ ಧಾರಣೆಗೆ ಕಾರಣವನ್ನು ಹುಡುಕುತ್ತಿರುವ ಸಂದರ್ಭ ಈಗಿನ ವ್ಯಾಪಾರಸ್ಥರ ಹಲವು ಹುನ್ನಾರಗಳು ಬೆಳಕಿಗೆ ಬಂದವು. ಈಗಾಗಲೇ ರಫ್ತು ಮತ್ತು ಮರು ರಫ್ತು ವಹಿವಾಟಿಗೆ ಸಂಬಂಧಿಸಿ ದಂತೆ ಭಾರತ ಸರ್ಕಾರದ ಕೆಲವು ಸವಲತ್ತುಗಳನ್ನು ದುರುಪಯೋಗ ಪಡಿಸಿಕೊಂಡು ಹೆಚ್ಚಿನ ಲಾಭವನ್ನು ಗಳಿಸುವ ಹುನ್ನಾರದಲ್ಲಿ ರಫ್ತು ವಹಿವಾಟುದಾರರಿದ್ದಾರೆ ಎಂಬದು ವ್ಯಕ್ತವಾಯಿತು. ಈ ರೀತಿಯ ವಹಿವಾಟಿನಿಂದಾಗಿ ಭಾರತದ ಕರಿಮೆಣಸಿನ ಮೌಲ್ಯ ಇಳಿಮುಖ ವಾಗೊಳ್ಳುತ್ತಿದೆ ಎಂದೂ ಅನೇಕ ಬೆಳೆಗಾರರು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ರಫ್ತು ಮತ್ತು ಮರುರಫ್ತು ವಿಚಾರವಾಗಿ ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್‍ನ ಸದಸ್ಯ ಪ್ರದೀಪ್ ಪೂವಯ್ಯ ಸಭೆಯಲ್ಲಿ ಮಾಹಿತಿ ನೀಡಿ, ಈಗಾಗಲೇ ನಮ್ಮಲ್ಲಿನ ದಾಖಲೆಗಳ ಪ್ರಕಾರ ಆಗಸ್ಟ್ ಮಾಸದಲ್ಲಿ ಭಾರತದ ಒಂದು ಬಂದರಿನಿಂದ ಇಂಡೊ ನೇಶ್ಯಿಯಾ, ಶ್ರೀಲಂಕಾ, ವಿಯೆಟ್ನಾಂ ನಿಂದ 240 ಟನ್ ಕರಿಮೆಣಸು ರಫ್ತುಗೊಂಡಿದ್ದು ತಿಳಿದುಬಂದಿದ್ದು ಇದೇ ರೀತಿ ಭಾರತದ ಅದೆಷ್ಟೋ ಬಂದರಿಗೆ ಸಹಸ್ರಾರು ಟನ್ ಕಾಳುಮೆಣಸು ರಫ್ತಾಗಿರ ಪ್ರಮಾಣ ಊಹೆಗೂ ನಿಲುಕದ್ದಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ರಫ್ತಾದ 240 ಟನ್ ಪೈಕಿ 14 ಟನ್ ಇಂಡೋನೇಶ್ಯಿಯದಿಂದಲೂ, 91 ಟನ್ ಶ್ರೀಲಂಕಾದಿಂದಲೂ, 135 ಟನ್ ವಿಯೆಟ್ನಾಂನಿಂದ ಬಂದಿದೆ ಎಂದೂ ಪ್ರಮೋದ್ ಪೂವಯ್ಯ ತಿಳಿಸಿದರು. ಆಮದು ಶುಲ್ಕವಾಗಿ ಇಂಡೊನೇಶ್ಯಿಯಾ ದೇಶದ ಕರಿಮೆಣಸಿಗೆ ಅಂದಾಜು ಶೇ. 37.4, ಶ್ರೀಲಂಕಾದಿಂದ ಆಮದಾದ ಕರಿಮೆಣಸಿಗೆ ಅಂದಾಜು ಶೇ.5 ರಿಂದ ಶೇ. 13.7 ರಷ್ಟು ಶುಲ್ಕ ವಿಧಿಸಲಾಗಿದೆ. ಅಂತೆಯೇ ವಿಯೆಟ್ನಾನಿಂದ ಆಮದಾದ ಕರಿಮೆಣಸಿಗೆ ಅಂದಾಜು ಶೇ. 63.4 ಶುಲ್ಕ ವಿಧಿಸಿದ್ದಾರೆ ಎಂದೂ ಅವರು ಮಾಹಿತಿ ನೀಡಿದರು. ಪ್ರಸ್ತುತ ವಿಯೆಟ್ನಾಂನ ಕರಿಮೆಣಸಿಗೆ ಆಗಸ್ಟ್ ನಲ್ಲಿ 275 ರೂ.ಗಳಿದ್ದು, ಅದಕ್ಕೆ ಆಮದು ಶುಲ್ಕ ಸೇರಿಸಿದರೆ 423 ರೂ.ಗಳಷ್ಟಾಗಲಿದೆ. ಅಲ್ಲದೇ, ಪ್ರಸ್ತುತ ತೆರಿಗೆ ವಿಧಿಸಲ್ಪಟ್ಟ ಜಿಎಸ್ ಟಿ ಮತ್ತು ಸಾರಿಗೆ ಶುಲ್ಕ ಸೇರಿಸಿ ಭಾರತದಲ್ಲಿಯೇ ವಿಯೆಟ್ನಾಂನ ಕರಿಮೆಣಸು ಮಾರಾಟ ಮಾಡಿದ್ದಲ್ಲಿ ಆ ವ್ಯಾಪಾರಸ್ಥನಿಗೆ ಮೂಲಬೆಲೆ 500 ರೂ. ಗಳಷ್ಟೇ ಆಗುತ್ತದೆ ಎಂದು ಪ್ರಮೋದ್ ತಿಳಿಸಿದರು. ಆಗಸ್ಟ್ ತಿಂಗಳಿನಲ್ಲಿ ಪೇಟೆ ಧಾರಣೆಯು 423 ಕ್ಕಿಂತಲೂ ಕಡಿಮೆಯಿದ್ದ ಪರಿಸ್ಥಿತಿಯಲ್ಲಿ ವರ್ತಕರು ಯಾವ ರೀತಿಯಲ್ಲಿ ಲಾಭ ಗಳಿಸಲು ಸಾಧ್ಯವಿದೆ ಎಂದೂ ಅವರು ಪ್ರಶ್ನಿಸಿದರು.

ಅಲ್ಲದೇ, ಶ್ರೀಲಂಕಾ ದೇಶದಲ್ಲಿ ವಾರ್ಷಿಕ ಕರಿಮೆಣಸು ಉತ್ಪತ್ತಿ ಪ್ರಮಾಣ 3 ಸಾವಿರ ಟನ್ ಗಳಷ್ಟಿದ್ದು, ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕರಿಮೆಣಸು ರಫ್ತಾಗುತ್ತಿದೆ. ಆಮದು ತೆರಿಗೆ ಶ್ರೀಲಂಕಾದಿಂದ ರಫ್ತಾದ ಕರಿಮೆಣಸಿಗೆ ಕಡಿಮೆ ಇರುವದ ರಿಂದಾಗಿ ಇತರ ದೇಶಗಳ ಕರಿಮೆಣಸು ಶ್ರೀಲಂಕಾದ ಮೂಲಕ ಭಾರತಕ್ಕೆ ಸಲೀಸಾಗಿ ರಫ್ತಾಗುತ್ತಿದೆ. ಇದಕ್ಕೂ ಕಡಿವಾಣ ಹಾಕಬೇಕೆಂದು ಪ್ರದೀಪ್ ಪೂವಯ್ಯ ಅಭಿಪ್ರಾಯಪಟ್ಟರು.

ಭಾರತದ ಪ್ರಸ್ತುತ ಹಲವು ರಫ್ತುದಾರರು ವಿಯೆಟ್ನಾಂನಿಂದ ಆಮದು ಮಾಡಿಕೊಂಡಿರುವ ಕರಿಮೆಣಸನ್ನು ಮರುರಫ್ತು ಮಾಡುತ್ತಿರುವ ಮಾಹಿತಿಗಳ ದಾಖಲೆಗಳು ಲಭ್ಯವಾಗಿದೆ. ಪ್ರಸ್ತುತ, ವರ್ತಕರು ಮರುರಫ್ತು ಮಾಡಲು ಸಂಬಾರ ಮಂಡಳಿಯಿಂದ ಶಿಫಾರಸ್ಸು ಮತ್ತು ಅನುಮತಿ ಪತ್ರವನ್ನು ಕಡ್ಡಾಯವಾಗಿ ಪಡೆಯುವದು ಅಗತ್ಯವಾಗಿದ್ದು, ಭಾರತದಿಂದ ಆಮದಾದ ಯಾವದೇ ವಸ್ತು ಮೌಲ್ಯವರ್ಧನೆಗೊಳಗಾಗದೇ ರಪ್ತು ಮಾಡುವ ಅವಕಾಶವಿರುವದಿಲ್ಲ. ಇದನ್ನು ಚೆನ್ನಾಗಿ ಮನಗಂಡಿರುವ ವರ್ತಕರು ರೀ ಪೆÇ್ರಸೆಸ್ಡ್ ಮತ್ತು ಸ್ಟೆರಿಲೈಸ್ಡ್ ಕರಿಮೆಣಸು ಎಂದು ಶಿಫಾರಸ್ಸು ಪತ್ರವನ್ನು ಸಂಬಾರ ಮಂಡಳಿಯಿಂದ ಪಡೆದು ಕರಿಮೆಣಸನ್ನು ರಫ್ತು ಮಾಡುತ್ತಿದ್ದಾರೆ ಎಂದೂ ಪ್ರದೀಪ್ ತಿಳಿಸಿದರು.

ರಿಪೆÇ್ರಸೆಸ್ಡ್ ಮತ್ತು ಸ್ಟೆರಿಲೈಸ್ಡ್ ಕರಿಮೆಣಸು ಮೌಲ್ಯವರ್ಧನೆಗೆ ಒಳಪಟ್ಟಿದೆ ಎಂದು ಹೇಳುತ್ತಿರುವದು ಸರಿಯಲ್ಲ. ಈ ಕೂಡಲೇ ಸಂಬಾರ ಮಂಡಳಿ ರಿಪೆÇ್ರಸೆಡ್ಡ್ ಮತ್ತು ಸ್ಟೆರಿಲೈಸ್ಡ್ ಎಂದು ಯಾರಾದರೂ ವರ್ತಕರು ಬಂದು ಮರುರಫ್ತು ಮಾಡುವ ಪ್ರಸ್ತಾವನೆಯಿಟ್ಟಲ್ಲಿ ಅದನ್ನು ಸರಸಾಗಾಟಾಗಿ ತಿರಸ್ಕರಿಸಬೇಕೆಂದೂ ಬೆಳೆಗಾರರ ಪರವಾಗಿ ಪ್ರದೀಪ್ ಒತ್ತಾಯಿಸಿದರು.

ಭಾರತಕ್ಕೆ ರಫ್ತು ಮತ್ತು ಮರು ರಫ್ತಾಗುವ ಕರಿಮೆಣಸಿನ ಮೇಲೆ ವಿಧಿಸಿರುವ ಆಮದು ಶುಲ್ಕವನ್ನು ಸರ್ಕಾರವು ಸಂಪೂರ್ಣವಾಗಿ ಹಿಂದಿರುಗಿಸುವದೂ ಅಲ್ಲದೇ ರಫ್ತುದಾರರಿಗೆ ಮರು ರಫ್ತಾದ ಹಣದ ಮೇಲೆ ಇಂತಿಷ್ಟು ಸಹಾಯಧನವನ್ನು ಕೂಡ ಪಾವತಿಸಲಾಗುತ್ತಿದೆ. ಈಗಾಗಲೇ ತಿಳಿದುಬಂದಂತೆ ವಿಯೆಟ್ನಾಂ ದೇಶದ ಕರಿಮೆಣಸು ಬೆಲೆ 285 ರೂ.ಗಳಿದ್ದ ಸಮಯದಲ್ಲಿ ಭಾರತದ ಕರಿಮೆಣಸಿನ ಬೆಲೆ 415 ರೂ.ಗಳಷ್ಟಿತ್ತು. ಇವೆರಡರ ವ್ಯತ್ಯಾಸದ ಮೌಲ್ಯ ಮತ್ತು ಆಮದು ಸಹಾಯಧನ ಎರಡೂ ಸೇರಿದ್ದಲ್ಲಿ ಸರಿಸುಮಾರು 150 ರೂ.ಗಳಷ್ಟು ನಿವ್ವಳ ಲಾಭವನ್ನು ಓರ್ವ ವ್ಯಾಪಾರಸ್ಥ 1 ಕೆ.ಜಿ. ಕರಿಮೆಣಸಿಗೆ ಗಳಿಸುತ್ತಿದ್ದಾನೆ ಎಂದೂ ಪ್ರದೀಪ್ ವಿವರಿಸಿದರು.

ಕರ್ನಾಟಕ ಬೆಳೆಗಾರರ ನಿಯೋಗದ ಮೂಲಕ ಶೀಘ್ರದಲ್ಲಿಯೇ ದೇಶದ ವಾಣಿಜ್ಯ ಸಚಿವರು, ರೆವಿನ್ಯೂ ಮತ್ತು ಇಂಟಲಿಜೆನ್ಸ್ ಇಲಾಖೆ, ಸಂಬಾರ ಮಂಡಳಿ, ಕಸ್ಟಮ್ಸ್ ಇಲಾಖೆಗಳ ಎಲ್ಲಾ ಪ್ರಮುಖರಿಗೆ ಸಂಪೂರ್ಣ ಮಾಹಿತಿಗಳನ್ನು ಸೂಕ್ತ ದಾಖಲೆಗಳೊಂದಿಗೆ ನೀಡುವ ತೀರ್ಮಾನವನ್ನೂ ಸಭೆಯಲ್ಲಿ ಕೈಗೊಳ್ಳಲಾಯಿತು.

ವಿಯೆಟ್ನಾಂನಿಂದ ಭಾರತಕ್ಕೆ ತಲುಪುತ್ತಿರುವ ಕಾಳುಮೆಣಸಿನಿಂದಾಗಿ ಸ್ಥಳೀಯ ಬೆಳೆಗಾರರಿಗೆ ಆರ್ಥಿಕ ನಷ್ಟದೊಂದಿಗೆ ತಾವು ಶ್ರಮ ವಹಿಸಿ ಬೆಳೆದ ಕಾಳುಮೆಣಸಿಗೆ ಬೇಡಿಕೆಯೂ ದೊರಕದಂತಾಗಿದೆ. ಇದು ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮ ಉಂಟು ಮಾಡುವದು ಖಂಡಿತ. ಹೀಗಾಗಿ ಬೆಳೆಗಾರ ಸಂಘಟನೆಗಳೆಲ್ಲಾ ಒಗ್ಗೂಡಿ ಸಮಸ್ಯೆಗೆ ಪರಿಹಾರವನ್ನು ತ್ವರಿತವಾಗಿ ಕಂಡುಕೊಳ್ಳಬೇಕಾಗಿದೆ ಎಂದೂ ವಿವಿಧ ಬೆಳೆಗಾರರ ಸಂಘಟನೆಯ ಪದಾಧಿಕಾರಿಗಳು ಅಭಿಪ್ರಾಯಪಟ್ಟರು.

ಸಂಬಾರ ಮಂಡಳಿಯ ಅದಿಕಾರಿ ಗಳು ಬೆಳೆಗಾರರಿಗೆ ಬೆಂಬಲವಾಗಿರುವ ಬದಲಿಗೆ ವ್ಯಾಪಾರಸ್ಥರುÀ ಮುಲಾಜಿ ಗೊಳಗಾಗುತ್ತಿದ್ದಾರೆ ಎಂಬ ಅಸಮಾಧಾನವೂ ಸಭೆಯಲ್ಲಿ ವ್ಯಕ್ತವಾಯಿತು.