ಮಡಿಕೇರಿ, ಅ. 25: ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಬೋಯಿಕೇರಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರದ ಟರ್ಫ್ ಹಾಕಿ ಮೈದಾನದಲ್ಲಿ ಏರ್ಪಡಿಸಲಾಗಿರುವ ರಾಜ್ಯಮಟ್ಟದ ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಬಾಲಕ-ಬಾಲಕಿಯರ ಹಾಕಿ ಪಂದ್ಯಾವಳಿಗೆ ಚಾಲನೆ ದೊರೆತಿದೆ.ಲೀಗ್ ಹಂತದ ಹಾಕಿ ಪಂದ್ಯಾವಳಿಯಲ್ಲಿ ಇಂದು ಪ್ರೌಢಶಾಲಾ ವಿಭಾಗದ 17 ವರ್ಷದೊಳಗಿನ ಬಾಲಕಿಯರ ಪಂದ್ಯಾವಳಿ ನಡೆಯಿತು.ಬಾಲಕಿಯರ ವಿಭಾಗದ ಪಂದ್ಯಾವಳಿಯಲ್ಲಿ ಕೂಡಿಗೆ ಸ್ಪೋಟ್ರ್ಸ್ ಹಾಸ್ಟೆಲ್ ತಂಡ ಕಲಬುರ್ಗಿ ತಂಡವನ್ನು 9-0 ಗೋಲುಗಳಿಂದ, ಮೈಸೂರು ತಂಡ ಬೆಂಗಳೂರು ತಂಡವನ್ನು 14-0 ಗೋಲಿನಿಂದ, ಕೂಡಿಗೆ ತಂಡ ಬೆಂಗಳೂರು ತಂಡವನ್ನು 8-1 ಗೋಲಿನಿಂದ, ಮೈಸೂರು ತಂಡ ಬೆಳಗಾವಿ ತಂಡವನ್ನು 20-0 ಗೋಲಿನಿಂದ ಸೋಲಿಸಿದವು.

ಬಾಲಕರ ವಿಭಾಗದಲ್ಲಿ ಇಂಡಿಯನ್ ಹೈಸ್ಕೂಲ್ ಬೆಂಗಳೂರು ತಂಡವು ಕಲಬುರ್ಗಿ ತಂಡವನ್ನು

5-1 ಗೋಲಿನಿಂದ, ಕೂಡಿಗೆ ತಂಡವು ಬೆಳಗಾವಿ ತಂಡವನ್ನು 18-0 ಗೋಲಿನಿಂದ,

ರಾಜ್ಯಮಟ್ಟದ ಹಾಕಿ ಪಂದ್ಯಾವಳಿಗೆ ಚಾಲನೆ

(ಮೊದಲ ಪುಟದಿಂದ) ಕೂಡಿಗೆ ತಂಡವು ಕಲಬುರ್ಗಿ ತಂಡವನ್ನು 11-0 ಗೋಲಿನಿಂದ, ಇಂಡಿಯನ್ ಹೈಸ್ಕೂಲ್ ತಂಡವು ಬೆಂಗಳೂರು ತಂಡವನ್ನು 5-2 ಗೋಲಿನಿಂದ, ಮೈಸೂರು ತಂಡವು ಬೆಳಗಾವಿ ತಂಡವನ್ನು 14-0 ಗೋಲಿನಿಂದ ಸೋಲಿಸಿ ಮುನ್ನಡೆ ಕಾಯ್ದುಕೊಂಡವು.

ತಾ. 26 ರಂದು (ಇಂದು) ಪ್ರಾಥಮಿಕ ಹಂತದ ಪಂದ್ಯಾವಳಿ ನಡೆಯಲಿದೆ.