ಕುಶಾಲನಗರ, ಅ. 25: ಕುಶಾಲನಗರ ಕೇಂದ್ರವಾಗಿರಿಸಿ ಕೊಂಡು ಕಾವೇರಿ ತಾಲೂಕು ರಚನೆಗೆ ಆಗ್ರಹಿಸಿ ಇಲ್ಲಿನ ಕಾರು ನಿಲ್ದಾಣದ ಶ್ರೀ ಗುಂಡೂರಾವ್ ಸತ್ಯಾಗ್ರಹ ವೇದಿಕೆಯಲ್ಲಿ ನಡೆಯುತ್ತಿರುವ ಸರಣಿ ಪ್ರತಿಭಟನೆ 11 ದಿನಗಳನ್ನು ಪೂರೈಸಿತು.

ಪ್ರಮುಖ ಪ್ರವಾಸಿತಾಣ ಕಾವೇರಿ ನಿಸರ್ಗಧಾಮದಲ್ಲಿರುವ ನಿಸರ್ಗಧಾಮ ಟೂರಿಸ್ಟ್ ಸೆಂಟರ್‍ನ ವ್ಯಾಪಾರಿಗಳು ಧರಣಿ ನಡೆಸಿದರು. ಸಮವಸ್ತ್ರ ಧರಿಸಿ ಆಗಮಿಸಿದ್ದ ವ್ಯಾಪಾರಿಗಳು ತಾಲೂಕು ಪರ ಘೋಷಣೆ, ಗಾಯನಗಳ ಮೂಲಕ ಗಮನ ಸೆಳೆದರು. ಮೈಸೂರು-ಮಡಿಕೇರಿ ಹೆದ್ದಾರಿಯಲ್ಲಿ ಮಾನವ ಸರಪಳಿ ರಚಿಸಿ ರಸ್ತೆ ತಡೆದು ತಾಲೂಕು ರಚನೆ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ಮುಟ್ಟಿಸುವ ಪ್ರಯತ್ನ ಮಾಡಲಾಯಿತು.

ನಿಸರ್ಗಧಾಮ ಟೂರಿಸ್ಟ್ ಸೆಂಟರ್ ಮಾಲಿಕ ಅಬ್ದುಲ್‍ಸಲಾಂ, ಮೈಸಿ, ಸನಾವುಲ್ಲಾ, ನಾಸಿರ್, ಲೋಕೇಶ್, ಸತೀಶ್, ರಶೀದ್,ಸಲೀಮ್, ಅಲ್ತಾಪ್, ಇಬ್ರಾಹಿಂ, ಕಾವೇರಿ ತಾಲೂಕು ರಚನಾ ಕೇಂದ್ರ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಪದಾಧಿಕಾರಿಗಳಾದ ಜಿ.ಎಲ್. ನಾಗರಾಜ್, ಫಜಲುಲ್ಲಾ, ಎಸ್.ಕೆ.ಸತೀಶ್, ಅಬ್ದುಲ್ ಖಾದರ್, ಕೆ.ಬಿ. ರಾಜು ಮತ್ತಿತರರು ಇದ್ದರು.