ಸುಂಟಿಕೊಪ್ಪ, ಅ. 25: ಕಾವೇರಿ ತಾಲೂಕು ರಚನೆಯ ಬೇಡಿಕೆಯನ್ನು ಮುಂದಿಟ್ಟು ಕಾವೇರಿ ತಾಲೂಕು ರಚನಾ ಹೋರಾಟ ಸ್ಥಾನೀಯ ಸಮಿತಿ ಕಂಬಿಬಾಣೆ, ಕೊಡಗರಹಳ್ಳಿ ಸ್ಥಾನೀಯ ಸಮಿತಿ ವತಿಯಿಂದ ಬುಧವಾರ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ, ರಸ್ತೆ ತಡೆ ಹಾಗೂ ಅಂಚೆ ಕಾರ್ಡು ಚಳವಳಿ ಮಾಡುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಕೇಂದ್ರ ಸಮಿತಿ ಅಧ್ಯಕ್ಷರಾದ ವಿ.ಪಿ.ಶಶಿಧರ್ ಮಾತನಾಡಿದರು. ಕೊಡಗರಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಕ್ಲೈವಾ ಪೊನ್ನಪ್ಪ ಮಾತನಾಡಿದರು.
ಪ್ರತಿಭಟನೆಯಲ್ಲಿ ಕಂಬಿಬಾಣೆ ಗ್ರಾ.ಪಂ. ಅಧ್ಯಕ್ಷ ಕೃಷ್ಣ, ಕಂಬಿಬಾಣೆ ಸದಸ್ಯ ಆನಂದ, ಕೊಡಗರಹಳ್ಳಿ ಗ್ರಾ.ಪಂ. ಅಧ್ಯಕ್ಷ ಹೆಚ್.ಇ. ಅಬ್ಬಾಸ್, ಉಪಾಧ್ಯಕ್ಷೆ ಪ್ರೇಮಾ, ಸದಸ್ಯರಾದ ಎನ್.ಡಿ. ನಂಜಪ್ಪ, ಉಸ್ಮಾನ್, ಏಳನೇ ಹೊಸಕೋಟೆ ಗ್ರಾ.ಪಂ. ಉಪಾಧ್ಯಕ್ಷ ಮುಸ್ತಾಫ, ಮಾಜಿ ಅಧ್ಯಕ್ಷ ಭಾಗೇಶ್, ಎನ್‍ವೈಸಿ ಸಂಘದ ಜಗದೀಶ್, ದತ್ತ ಸೋಮಣ್ಣ, ಶಾಂತಿನಿಕೇತನ ಶಾಲೆಯ ಮುಖ್ಯ ಶಿಕ್ಷಕಿ ಫಾತೀಮಾ, ಕೆ.ಎಸ್. ಮಂಜುನಾಥ್, ದೇವಾಲಯ ಸಮಿತಿ ಅಧ್ಯಕ್ಷ ಜಯಂತ್ ಕುಮಾರ್, ನಿವೃತ್ತ ಪ್ರಾಧ್ಯಾಪಕ ಎಂ.ಪಿ. ಸುಬ್ಬಯ್ಯ, ಎಸ್‍ಎನ್‍ಹೆಚ್ ಶಾಲೆಯ ಕುಟ್ಟಪ್ಪ, ನಾಣ್ಣಯ್ಯ, 7ನೇ ಹೊಸಕೋಟೆ ಅವಲಕುಟ್ಟಿ, ಶಾಲಾ ಮಕ್ಕಳು ಸೇರಿದಂತೆ ಇತರರು ಇದ್ದರು.
ಕೊಡಗರಹಳ್ಳಿ: ಕಾವೇರಿ ತಾಲೂಕು ರಚನೆಗೆ ಆಗ್ರಹಿಸಿ ಸಮೀಪದ ಕೊಡಗರಹಳ್ಳಿ ವೃತ್ತದಲ್ಲಿ ಬುಧವಾರ ಹೋರಾಟ ಸಮಿತಿ ಸ್ಥಾನೀಯ ಸಮಿತಿ ಆಶ್ರಯದಲ್ಲಿ ಮಾನವ ಸರಪಳಿ ರಚಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.
ಕಂಬಿಬಾಣೆ, ಸುಂಟಿಕೊಪ್ಪ ವ್ಯಾಪ್ತಿಯ ನೂರಾರು ಸಾರ್ವಜನಿಕರು, ಶಾಲಾ ಮಕ್ಕಳು ಪಾಲ್ಗೊಂಡು ತಾಲೂಕು ರಚನೆಯ ಬೇಡಿಕೆಗೆ ಧ್ವನಿಯಾದರು.
ಕೇಂದ್ರ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಪದಾಧಿಕಾರಿಗಳಾದ ಡಾ. ಶಶಿಕಾಂತ್ ರೈ, ಅಬ್ದುಲ್ ಖಾದರ್, ಅಬ್ದುಲ್ ರಜಾಕ್, ಮುಖಂಡರಾದ ಕೃಷ್ಣ, ಪ್ರೊ. ಎಂ.ಪಿ. ಸುಬ್ಬಯ್ಯ, ಅಬ್ಬಾಸ್, ಮುಸ್ತಾಫ, ಭಾಗೇಶ್, ಎನ್.ಸಿ. ಪೊನ್ನಪ್ಪ, ಪ್ರೇಮಾ, ಕೆ.ಎಸ್. ಮಂಜುನಾಥ್, ಶಾಂತಿನಿಕೇತನ ಪ್ರೌಢಶಾಲೆ ಮುಖ್ಯೋಪಾಧ್ಯಾಯಿನಿ ಫಾತಿಮ, ಜಯಂತ್‍ಕುಮಾರ್ ಮತ್ತಿತರರು ಇದ್ದರು. ಅಂಚೆಕಾರ್ಡ್ ಚಳವಳಿಗೂ ಇದೇ ವೇಳೆ ಚಾಲನೆ ನೀಡಲಾಯಿತು.