ಸುಂಟಿಕೊಪ್ಪ, ಅ. 25: ಕೇಂದ್ರ ಸರಕಾರವು ದೇಶದಲ್ಲಿ ನೋಟು ಅಮಾನಿಕರಣ ಹಾಗೂ ಜಿಎಸ್‍ಟಿ ತೆರಿಗೆಯನ್ನು ಜಾರಿಗೆ ತಂದಿದ್ದು ಇದರಿಂದ ಬಡವರು ತುತ್ತು ಕೂಳಿಗೆ ಬರ ಎದುರಿಸುವಂತಾಗಿದೆ ಎಂದು ಮಾಜಿ ಸಚಿವರಾದ ಬಿ.ಎ.ಜೀವಿಜಯ ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದರು.

ಕಂಬಿಬಾಣೆ ಸುಭಾಷ್ ಯುವಕ ಸಂಘದ ಸಭಾಂಗಣದಲ್ಲಿ ಆಯೋಜಿ ಸಲಾಗಿದ್ದ ಕಂಬಿಬಾಣೆ ಗ್ರಾ.ಪಂ. 7ನೇ ಹೊಸಕೋಟೆ 3ನೇ ವಿಭಾಗ ವ್ಯಾಪ್ತಿಯ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷÀ ಇಸಾಕ್‍ಖಾನ್ ಮಾತನಾಡಿ ರಾಷ್ಟ್ರೀಯ ಪಕ್ಷಗಳು ಟಿಪ್ಪು ಜಯಂತಿಯನ್ನು ಮುಂದಿಟ್ಟುಕೊಂಡು ಅಮಾಯಕರ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಪರಸ್ಪರ ಅನ್ಯೋನತೆಯಿಂದ ಜೀವನ ನಡೆಸುತ್ತಿರುವ ಜಿಲ್ಲೆಯಲ್ಲಿ ಕೋಮುಭಾವನೆ ಕೆರಳಿಸಿ ಮತಬ್ಯಾಂಕ್ ರಾಜಕೀಯ ಮಾಡುತ್ತಿರುವದು ಸಮಂಜಸವಲ್ಲ ಎಂದರು. ಜಿಲ್ಲಾ ಯುವಘಟಕದ ಅಧ್ಯಕ್ಷ ಸಿ.ಎಲ್. ವಿಶ್ವ ಮಾತನಾಡಿದರು.

ಮಡಿಕೇರಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸುರೇಶ್, ಐಗೂರು ಗ್ರಾ.ಪಂ. ಸದಸ್ಯ ಚಂಗಪ್ಪ, ಆರ್.ಎಂ.ಸಿ. ಸದಸ್ಯ ರಾಜು ಮಡಿಕೇರಿ ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ರಾಜೇಶ್

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಗ್ರಾ.ಪಂ. ವ್ಯಾಪ್ತಿಯ ಜೆಡಿಎಸ್ ಭೂತ್ ಸಮಿತಿಗಳಿಗೆ ಪದಾಧಿಕಾರಿ ಗಳನ್ನು ನೇಮಕಗೊಳಿ ಸಲಾಯಿತು.