ಮಡಿಕೇರಿ, ಅ. 25: ಬಾಲ ಭವನ ಸಮಿತಿ, ಮಡಿಕೇರಿ ತಾಲೂಕು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ತಾಲೂಕು ಮಟ್ಟದ ಕಲಾಶ್ರೀ ಆಯ್ಕೆ ಶಿಬಿರ ಸ್ತ್ರೀಶಕ್ತಿ ಭವನದಲ್ಲಿ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾರ್ಥಿನಿ ವೈಷ್ಣವಿ ವಹಿಸಿದ್ದರು.
ತಾಲೂಕು ಮಟ್ಟದ ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಭಾಗವಹಿ ಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಮುಮ್ತಾಜ್ ಮಕ್ಕಳ ಅಭಿರುಚಿಗೆ ಅನುಗುಣವಾಗಿ ಪೋಷಕರು ಹಾಗೂ ಶಿಕ್ಷಣ ಸಂಸ್ಥೆಯವರು ಪಠ್ಯೇತರ ವಿಷಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿ ಮಕ್ಕಳ ವ್ಯಕ್ತಿತ್ವ ರೂಪಿಸುವಂತೆ ಕರೆ ನೀಡಿದರು.
ದಮಯಂತಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಾಸ್ತಾವಿಕ ನುಡಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರ್ನಾಟಕ ಬಾಲವಿಕಾಸ ಅಕಾಡೆಮಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಕಲಾಶ್ರೀ ಅಡಿಯಲ್ಲಿ ತಾಲೂಕು, ಜಿಲ್ಲೆ ರಾಜ್ಯ ಮಟ್ಟದಲ್ಲಿ ಬೇರೆ ಬೇರೆ ಕಲಾ ವಿಭಾಗದಲ್ಲಿ ಮಕ್ಕಳನ್ನು ಆಯ್ಕೆ ಮಾಡಿ ಬಹುಮಾನ ನೀಡುವ ದರಲ್ಲಿ ತೊಡಗಿಸಿಕೊಂಡಿದೆ, ಇದಕ್ಕೆ ಪೋಷಕರು ಮತ್ತು ಮಕ್ಕಳು ಪ್ರೋತ್ಸಾಹಿಸುವಂತೆ ಕೋರಿದರು.
ಮುಕ್ತಾಯ ಸಮಾರಂಭದ ಅಧ್ಯಕ್ಷತೆಯನ್ನು ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ವಹಿಸಿದ್ದು, ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರ, ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಿದರು.
ವಿಜೇತರು: ಸೃಜನಾತ್ಮಕ ಕಲೆ - ಆರ್ಯ, ಕೊಡಗು ವಿದ್ಯಾ ಲಯ, ಮಡಿಕೇರಿ. ಮೋಕ್ಷ - ಕೊಡಗು ವಿದ್ಯಾಲಯ, ಮಡಿಕೇರಿ. ಸೃಜನಾತ್ಮಕ ಬರವಣಿಗೆ ಶ್ರೀತೇಜ - ಸಂತ ಜೋಸೆಫರ ಶಾಲೆ, ಮಡಿಕೇರಿ, ತಾನ್ಯ - ಸಂತ ಜೋಸೆಫರ ಶಾಲೆ, ಮಡಿಕೇರಿ. ಸೃಜನಾತ್ಮಕ ಪ್ರದರ್ಶನ ಕಲೆ ಶ್ರೀಲಕ್ಷ್ಮಿ, ಜ್ಞಾನ ಜ್ಯೋತಿ ಶಾಲೆ, ಮೂರ್ನಾಡು. ಪೂರ್ಣ ಪ್ರಜ್ಞಾ, ಜನರಲ್ ತಿಮ್ಮಯ್ಯ, ಮಡಿಕೇರಿ. ವಿಜ್ಞಾನದಲ್ಲಿ ನೂತನ ಅವಿಷ್ಕಾರ ಕೆ.ಟಿ. ಮುದ್ದಯ್ಯ, ಕೊಡಗು ವಿದ್ಯಾಲಯ ಮಡಿಕೇರಿ. ವಿಹಾನ್ ಕುಶಾಲಪ್ಪ- ಶ್ರೀ ರಾಮ ಟ್ರಸ್ಟ್ ನಾಪೋಕ್ಲು.
ತೀರ್ಪುಗಾರಾಗಿ ಸತೀಶ್ ಕುಮಾರ್, ಭರತ್ ಕೋಡಿ, ಪ್ರಸನ್ನ ಕುಮಾರ್, ಎ.ಎಂ. ದಮಯಂತಿ, ಭಾರತಿ ರಮೇಶ್, ದಮಯಂತಿ ಎ. ಸವಿತ, ಕೆ.ಎಂ. ದಮಯಂತಿ ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಮೇಪಾಡಂಡ ಸವಿತ ಕೀರ್ತನ್ ನೆರವೇರಿಸಿದರು.