ಶ್ರೀಮಂಗಲ, ಅ. 25: ಸಂಭ್ರಮ ಪೊಮ್ಮಕ್ಕಡ ಸಂಸ್ಥೆಯ ಸದಸ್ಯರ ತಾಯಿ ಕಾವೇರಿಯನ್ನು ಪೂಜಿಸುವ ನೃತ್ಯ ದುಷ್ಯಂತ, ಶಕುಂತಲೆಯ ಕೊಡವ ನಾಟಕ, ಮರೆಗುಳಿ ಡಾಕ್ಟರ್ ಮಾಡಿದ ಆವಂತರದ ಹಾಸ್ಯ ನಾಟಕ, ಹಾಡು ಹಾಗೂ ಸಂಸ್ಥೆಯ ಕಿರಿಯ ಸದಸ್ಯೆರ ನೃತ್ಯ ನೆರೆದಿದ್ದವರನ್ನು ಗಮನ ಸೆಳೆಯಿತು. ಕೊಡವ ತಿಂಡಿ ಪೈಪೋಟಿಯಲ್ಲಿ 25ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.
ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜ, ಕೊಡವ ತಕ್ಕ್ ಎಳ್ತ್ ಕಾರಡ ಕೂಟ, ಟಿ. ಶೆಟ್ಟಿಗೇರಿಯ ಶ್ರೀ ಗೌರಿ ಗಣೇಶ ಸೇವಾ ಸಮಿತಿ, ಹಾಗೂ ಸಂಭ್ರಮ ಪೊಮ್ಮಕ್ಕಡ ಕ್ರೀಡೆ ಹಾಗೂ ಸಾಂಸ್ಕøತಿಕ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಟಿ. ಶೆಟ್ಟಿಗೇರಿ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯುತ್ತಿರುವ ಚಂಗ್ರಾಂದಿ-ಪತ್ತಾಲೋದಿ ಜನೋತ್ಸವವು ರಂಗು ರಂಗಿನ ಸಾಂಸ್ಕøತಿಕ ಕಾರ್ಯಕ್ರಮ ದೊಂದಿಗೆ ದಿನದಿಂದ ದಿನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸು ತ್ತಿದ್ದು, ಯಶಸ್ವಿ ಕಾರ್ಯಕ್ರಮವಾಗಿ ಹೊರಹೊಮ್ಮುತ್ತಿದೆ.
ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದಾನಿಗಳಾದ ಅಪ್ಪಚ್ಚಂಗಡ ಮೋಟಯ್ಯ, ಚೊಡುಮಾಡ ಶರೀನ್ ಸುಬ್ಬಯ್ಯ, ಕುಲ್ಲೇಟಿರ ಪ್ರವಿ ಮೊಣ್ಣಪ್ಪ ಮಾತನಾಡಿದರು. ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ದಾನಿಗಳಾದ ಪೆಮ್ಮಂಡ ಸಬಿತಾ ಕುಶಾಲಪ್ಪ, ಉಳುವಂಗಡ ಸೀತಮ್ಮ, ಸಂಭ್ರಮ ಸಂಸ್ಥೆಯ ನಿರ್ದೇಶಕಿ ಮನ್ನೇರ ಸರಸ್ವತಿ, ತಿಂಡಿ ಪೈಪೋಟಿಯ ತೀರ್ಪುಗಾರರಾದ ಕೋಟ್ರಮಾಡ ಮುತ್ತಮ್ಮ ಉಪಸ್ಥಿತರಿದ್ದರು.
ಇಂದಿನ ಕಾರ್ಯಕ್ರಮ: ಇಂದು ಸಂಜೆ ನಾಲ್ಕು ಗಂಟೆಗೆ ಟಿ. ಶೆಟ್ಟಿಗೇರಿ ರೂಟ್ಸ್ ವಿದ್ಯಾಸಂಸ್ಥೆ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ.