ಶ್ರೀಮಂಗಲ, ಅ. 25: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಿಜೆಪಿ ನೇತೃತ್ವದ ಸರ್ಕಾರ ಉದ್ಯಮಿ ಗಳ ಪರವಾಗಿದ್ದು, ಜನಸಾಮಾನ್ಯರ ಸಮಸ್ಯೆ, ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಜನಪರ, ರೈತಪರವಾಗಿದ್ದು, ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವದು ನಿಶ್ಚಿತ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪೆಮ್ಮಂಡ ಪೊನ್ನಪ್ಪ ಹೇಳಿದರು.
ಅವರು ತೂಚಮಕೇರಿಯಲ್ಲಿ ಕಾಂಗ್ರೆಸ್ ನಡಿಗೆ ಜನರ ಮನೆ ಮನೆಗೆ ಕಾರ್ಯಕ್ರಮವನ್ನು ಇಲ್ಲಿನ ಸಮುದಾಯ ಕೇಂದ್ರದಲ್ಲಿ ಉದ್ಘಾಟಿಸಿ ಮಾತನಾಡಿದರು. ಕೇಂದ್ರದಲ್ಲಿ ಹತ್ತು ವರ್ಷ ಆಡಳಿತ ನಡೆಸಿದ ಬಿಜೆಪಿ ದೇಶದ ಅತಿ ದೊಡ್ಡ ಶ್ರೀಮಂತ ಪಕ್ಷವಾಗಿದೆ. ಬಿಜೆಪಿಯು 894 ಕೋಟಿ ಮೌಲ್ಯದ ಆಸ್ತಿ ಹೊಂದಿದೆÉ. ಆದರೆ, ದೇಶವನ್ನು ಹನ್ನೊಂದು ವರ್ಷ ಆಡಳಿತ ಮಾಡಿದರೂ ಅಷ್ಟೊಂದು ಆಸ್ತಿ ಸಂಪಾದಿಸಲು ಕಾಂಗ್ರೆಸ್ಗೆ ಸಾಧ್ಯವಾಗಿಲ್ಲ. ಬಿಜೆಪಿ ಇಷ್ಟೊಂದು ಆಸ್ತಿಯನ್ನು ಹೇಗೆ ಸಂಪಾದಿಸಿತು ಎಂದು ಪೊನ್ನಪ್ಪ ಪ್ರಶ್ನಿಸಿದರು.
ರೈತರ ಸಾಲ ಮನ್ನ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗ, ದಲಿತರು, ಜನಸಾಮಾನ್ಯರು ಸೇರಿದಂತೆ ಎಲ್ಲಾ ವರ್ಗದ ಜನರ ಸಮಸ್ಯೆ ಮತ್ತು ಬೇಡಿಕೆಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಸ್ಪಂದಿಸಿದೆ. ಆದರೆ, ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ಉದ್ಯಮಿಗಳ ಸಾಲ ಮನ್ನ ಮಾಡಲು ಆಸಕ್ತಿ ವಹಿಸಿದ್ದು, ಉದ್ಯಮಿ ಗಳ ಪರವಾದ ಸರ್ಕಾರವಾಗಿದೆ. ರೈತರ ಸಾಲ ವiನ್ನ ಮಾಡಲು ಆಸಕ್ತಿ ವಹಿಸುತ್ತಿಲ್ಲ ಎಂದು ಟೀಕಿಸಿದರು.
ಹೈಟೆನ್ಷ್ನ್ ಯೋಜನೆ, ಕರಿಮೆಣಸು ಆಮದು ಸೇರಿದಂತೆ ಜಿಲ್ಲೆಯ ರೈತರಿಗೆ ಅನ್ಯಾಯವಾದಾಗ ಜಿಲ್ಲೆಯ ಶಾಸಕರು ಮತ್ತು ಸಂಸದರು ಧ್ವನಿ ಎತ್ತದೆ ರೈತ ವಿರೋಧಿ ನಿಲುವು ತಳೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಜಿಲ್ಲೆಯಲ್ಲಿ ಬಿಜೆಪಿ ಶಾಸಕರು ಮೂರು- ನಾಲ್ಕು ಅವಧಿಯಿಂದ ಅಧಿಕಾರದಲ್ಲಿದ್ದರೂ ಜಿಲ್ಲೆಯ ಜ್ವಲಂತ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ. ಜಿಲ್ಲೆಯ ಜನರು ಬದಲಾವಣೆ ಬಯಸಿದ್ದು, ಈ ಬಾರಿ ಜಿಲ್ಲೆಯ ಎರಡೂ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸುವದು ಖಚಿತ ಎಂದು ಭವಿಷ್ಯ ನುಡಿದರು.
ಈ ಸಂದರ್ಭ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಸದಸ್ಯೆ ಮಚ್ಚಮಾಡ ಭಾಗ್ಯಭೀಮಯ್ಯ, ಬಲ್ಯಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪೆಮ್ಮಂಡ ಅರುಣ್, ಕಾರ್ಯ ದರ್ಶಿ ಕೊಟ್ಟಂಗಡ ಸಿ.ನಾಣಯ್ಯ, ವಲಯ ಮಹಿಳಾ ಅಧ್ಯಕ್ಷೆ ಚಿಂಡಮಾಡ ಮಮತ, ಗ್ರಾ.ಪಂ. ಸದಸ್ಯೆ ಅಜ್ಜಿಕುಟ್ಟಿರ ಪ್ರೀತ್ ಪೊನ್ನಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಸದಸ್ಯ ಮೂಕಳಮಾಡ ಬೆಳ್ಯಪ್ಪ, ಪೊನ್ನಂಪೇಟೆ ಬ್ಲಾಕ್ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಪುಟ್ಟಂಗಡ ದಮಯಂತಿ ದೇವಯ್ಯ, ಪೊನ್ನಂಪೇಟೆ ಬ್ಲಾಕ್ ಸಂಘಟನಾ ಕಾರ್ಯದರ್ಶಿ ಎ.ಕೆ.ಅಚ್ಚಯ್ಯ, ಪ್ರಮುಖರಾದ ಚಿಂಡಮಡ ಪೂಣಚ್ಚ, ಪೆಮ್ಮಂಡ ಬೋಪಯ್ಯ, ಕೊಟ್ಟಂಗಡ ಮಧು, ಪರಿವಾರ ಪ್ರಾಣೇಶ್, ಎಂ.ಎನ್. ಗೋಪಾಲ, ಹೆಚ್.ಕೆ. ಗೋವೀಂದ, ಪೆಮ್ಮಂಡ ಟಿ. ಜಯಂತ, ಕೆ.ಯು. ಪೂವಯ್ಯ, ಸಿ.ಎಸ್. ಉತ್ತಯ್ಯ, ಕೆ.ಡಿ. ಸೋಮಣ್ಣ ಮತ್ತಿತರ ಪದಾಧಿಕಾರಿಗಳು ಹಾಜರಿದ್ದರು.