ಬಾಳುಗೋಡು, ಅ. 26: ಕೊಡವ ಸಮಾಜ ಒಕ್ಕೂಟದ ಮೈದಾನದಲ್ಲಿ ನಡೆದ ಅಂತರ್ ಕೊಡವ ಸಮಾಜ ಹಾಕಿ ಪಂದ್ಯಾಟದಲ್ಲಿ ಮೂರ್ನಾಡು, ಬೆಂಗಳೂರು, ವೀರಾಜಪೇಟೆ ಹಾಗೂ ಮೈಸೂರು ಕೊಡವ ಸಮಾಜ ತಂಡಗಳು ಸೆಮಿ ಫೈನಲ್‍ಗೆ ಪ್ರವೇಶ ಪಡೆದಿವೆ.ಕ್ವಾರ್ಟರ್ ಫೈನಲ್‍ನಲ್ಲಿ ವೀರಾಜಪೇಟೆ ಕೊಡವ ಸಮಾಜ ತಂಡವು ಆರಾಯಿರ ಕೊಡವ ಸಮಾಜ ವಿರುದ್ಧ 4-2 ಗೋಲುಗಳಿಂದ ಜಯ ಸಾಧಿಸಿತು. ವೀರಾಜಪೇಟೆ ಪರ ಸುಬ್ಬಯ್ಯ 2, ಬೋಪಣ್ಣ, ಚೆತನ್, ಆರಾಯಿರ ಪರವಾಗಿ ಬೋಪಣ್ಣ, ಧೀರನ್ ಗೋಲು ಹೊಡೆದರು.ಬೆಂಗಳೂರು ತಂಡವು ಮಡಿಕೇರಿ ವಿರುದ್ಧ 1-0 ಗೋಲುಗಳಿಂದ ಜಯಿಸಿತು. ಬೆಂಗಳೂರು ಪರ ಕಾರ್ಯಪ್ಪ ಗೋಲು ಹೊಡೆದರು.

ಮೂರ್ನಾಡ್ ತಂಡವು ಗೋಣಿಕೊಪ್ಪ ವಿರುದ್ಧ 4-2 ಗೋಲುಗಳಿಂದ ಜಯ ಪಡೆಯಿತು. ಮೂರ್ನಾಡು ಪರ ಮುಕೇಶ್ ಮೊಣ್ಣಯ್ಯ ಹಾಗೂ ಆಶಿಕ್ ತಲಾ 2 ಗೋಲು, ಗೋಣಿಕೊಪ್ಪ ಪರ ವಸಂತ್, ನಾಚಪ್ಪ ಗೋಲು ಬಾರಿಸಿದರು.

ಮೈಸೂರು ತಂಡವು ನಾಪೋಕ್ಲು ವಿರುದ್ಧ 3-2 ಗೋಲುಗಳ ಅಂತರದಲ್ಲಿ ಜಯ ಗಳಿಸಿತು. ಮೈಸೂರು ಪರ ಗೌರವ್, ಆಶಿಕ್ 2 ಗೋಲು, ನಾಪೋಕ್ಲು ಪರ ಕವನ್, ಚಿಟ್ಯಪ್ಪ ಗೋಲು ಹೊಡೆದರು.

ಇದಕ್ಕೂ ಮೊದಲು ನಡೆದ ಪಂದ್ಯಗಳಲ್ಲಿ ಆರಾಯಿರನಾಡ್ ಕೊಡವ ಸಮಾಜ ತಂಡವು ಪೊನ್ನಂಪೇಟೆ ಕೊಡವ ಸಮಾಜವನ್ನು 3-2 ಗೋಲುಗಳಿಂದ ಸೋಲಿಸಿತು. ಆರಾಯಿರನಾಡ್ ಪರ ನಿತಿನ್ 2, ವಿಶಾಲ್, ಪೊನ್ನಂಪೇಟೆ ಪರ ಸೋಮಣ್ಣ, ಸುಬ್ಬಯ್ಯ ಗೋಲು ಹೊಡೆದರು.

ಮಡಿಕೇರಿ ಕೊಡವ ಸಮಾಜವು ಕುಶಾಲನಗರ ವಿರುದ್ಧ 7-0 ಗೋಲುಗಳ ಅಂತರದಲ್ಲಿ ಜಯ ಪಡೆಯಿತು. ಮಡಿಕೇರಿ ಪರ ಅಯ್ಯಪ್ಪ 3, ಸುಬ್ಬಯ್ಯ 2, ಪ್ರಧಾನ್, ಲೇಖನ್ ಗೋಲು ಹೊಡೆದರು.

ಪಂದ್ಯಾವಳಿ ನಿರ್ದೇಶಕ ಕಾಟುಮಣಿಯಂಡ ಉಮೇಶ್, ತೀರ್ಪುಗಾರರುಗಳಾಗಿ ಸುಳ್ಳಿಮಾಡ ಸುಬ್ಬಯ್ಯ, ಗಣಪತಿ, ನೆಲ್ಲಮಕ್ಕಡ ಪವನ್, ಅಪ್ಪಚ್ಚು, ಕಾರ್ತಿಕ್, ದಿಲನ್, ಪ್ರವೀಣ್, ಕುಶಾಲಪ್ಪ, ವೀಕ್ಷಕ ವಿವರಣೆಯನ್ನು ಮಾಳೇಟೀರ ಶ್ರೀನಿವಾಸ್ ನೀಡಿದರು.

ಕ್ರೀಡಾಕೂಟವನ್ನು ಕೊಡವ ಸಮಾಜ ಒಕ್ಕೂಟ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಉದ್ಘಾಟಿಸಿದರು.