ಮಡಿಕೇರಿ, ಅ.26 : ಪವಿತ್ರ ಕ್ಷೇತ್ರ ತಲಕಾವೇರಿಯಲ್ಲಿ ಯಾವದೇ ರೀತಿಯ ದೋಷಗಳಿಲ್ಲ, ಆದರೆ ಕೆಲವರು ಕಪೋಲ ಕಲ್ಪಿತ ಸಭೆ ನಡೆಸಿ ಕ್ಷೇತ್ರದ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ಮೂಡಿಸುತ್ತಿದ್ದಾರೆ ಎಂದು ಭಾಗಮಂಡಲ ಗ್ರಾಮಸ್ಥರು ಆರೋಪಿಸಿದ್ದಾರೆ. ತಪ್ಪು ಮಾಹಿತಿ ನೀಡುವದನ್ನು ನಿಲ್ಲಿಸದಿದ್ದಲ್ಲಿ ಗ್ರಾಮಸ್ಥರು ಒಗ್ಗೂಡಿ ಹೋರಾಟ ರೂಪಿಸಬೇಕಾಗುತ್ತದೆ ಎಂದು ಗ್ರಾಮದ ಹಿರಿಯರಾದ ಕುದುಕುಳಿ ಭರತ್ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಹ್ಮಗಿರಿ ಬೆಟ್ಟದಲ್ಲಿರುವ ಸಪ್ತಋಷಿಗಳ ಕುಂಡಿಕೆಗಳನ್ನು ನಾಶ ಮಾಡಿದ ಪರಿಣಾಮ ಈ ಪ್ರದೇಶದಲ್ಲಿ ದೋಷವಿದೆಯೇ ಹೊರತು ತಲಕಾವೇರಿ ಕ್ಷೇತ್ರದಲ್ಲಿ ಇಲ್ಲವೆಂದರು. ಪರಿಸರವಾದಿಗಳು ಹಾಗೂ ಅರಣ್ಯ ಅಧಿಕಾರಿಗಳು ಕುಂಡಿಕೆಗಳ ನಾಶಕ್ಕೆ ಕಾರಣಕರ್ತರಾಗಿದ್ದಾರೆ ಎಂದು ಆರೋಪಿಸಿದ ಭರತ್, ಈ ಬೆಳವಣಿಗೆ ವಿರುದ್ಧವೂ ಹೋರಾಟ ನಡೆಸಲಾಗುವ ದೆಂದು ತಿಳಿಸಿದರು. ದೋಷ ಇದೆ ಎಂದು ಸಭೆ ನಡೆಸಿದವರ ಊರಿನಲ್ಲಿ ದೋಷವಿರಬಹುದು, ಆದರೆ ತಲಕಾವೇರಿಯಲ್ಲಿ ಯಾವದೇ ದೋಷಗಳಿಲ್ಲ, ಈ ರೀತಿಯ ಕಪೋಲ ಕಲ್ಪಿತ ಹೇಳಿಕೆಗಳನ್ನು ಮುಂದುರೆಸಿದರೆ ಜಾತಿ, ಮತ, ರಾಜಕೀಯ ಭೇದ ಮರೆತು ಗ್ರಾಮಸ್ಥರು ಪ್ರತಿಭಟನೆ ನಡೆಸಬೇಕಾಗುತ್ತದೆ

(ಮೊದಲ ಪುಟದಿಂದ) ಎಂದು ಎಚ್ಚರಿಕೆ ನೀಡಿದರು. ಇತ್ತೀಚಿನ ದಿನಗಳಲ್ಲಿ ಪವಿತ್ರ ಕ್ಷೇತ್ರ ತಲಕಾವೇರಿಗೆ ಆಗಮಿಸುತ್ತಿರುವ ಭಕ್ತರ ಹಾಗೂ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಸಂಖ್ಯೆಗೆ ಅನುಗುಣವಾಗಿ ಕ್ಷೇತ್ರದ ಪಾವಿತ್ರ್ಯತೆಯನ್ನು ಕಾಪಾಡುವ ಕ್ರಮಗಳನ್ನು ಕೈಗೊಳ್ಳಬೇಕೇ ಹೊರತು, ಒಬ್ಬ ಕಾವಲುಗಾರನಿಂದ ಎಲ್ಲವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ರಾಜ್ಯದ ಇತರ ದೇವಾಲಯಗಳಲ್ಲಿ ಇರುವಂತೆ ಪ್ರವಾಸಿಗರನ್ನು ನಿಯಂತ್ರಿಸಲು ಸೂಕ್ತ ವ್ಯವಸ್ಥೆ ಮತ್ತು ಧ್ವನಿವರ್ಧಕಗಳ ಬಳಕೆಯನ್ನಾದರೂ ಮಾಡಬೇಕಾಗುತ್ತದೆ. ವಿಶೇಷ ದಿನಗಳಲ್ಲಿ ಹತ್ತು, ಹದಿನೈದು ಸಾವಿರ ಮಂದಿ ಭಕ್ತರು ತಲಕಾವೇರಿಯಲ್ಲಿ ಸ್ನಾನ ಮಾಡುವದರಿಂದ ನೀರು ಕಲುಷಿತವಾಗುತ್ತದೆ. ಕುಂಡಿಕೆಯ ಬಳಿಯಲ್ಲಿರುವ ಸ್ನಾನದ ಕೊಳದ ನಿರ್ವಹಣೆಯನ್ನು ವೈಜ್ಞಾನಿಕ ರೂಪದಲ್ಲಿ ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಭರತ್ ಒತ್ತಾಯಿಸಿದರು.

ತಲಕಾವೇರಿ ಮತ್ತು ಭಾಗಮಂಡಲ ದೇವಸ್ಥಾನದ ತಕ್ಕ ಮುಖ್ಯಸ್ಥರು ಮೂಲ ಅರ್ಚಕ ಕುಟುಂಬಸ್ಥರು ಕ್ಷೇತ್ರಪಾಲ ನಿಡ್ಯಮಲೆ ಕುಟುಂಬಸ್ಥರು, ಸ್ಥಳೀಯ ಎಲ್ಲಾ ಗ್ರಾಮಗಳ ತಕ್ಕ ಮುಖ್ಯಸ್ಥರು, ಸ್ಥಳೀಯ ಎಲ್ಲಾ ಜನಾಂಗದವರು ಸೇವಾ ಸಂಸ್ಥೆಗಳು ಒಗ್ಗಟ್ಟಾಗಿ ಕ್ಷೇತ್ರದ ಸಂಪ್ರದಾಯ, ಪಾವಿತ್ರ್ಯತೆ ಮತ್ತು ಸ್ವಚ್ಛತೆ ಕಾಪಾಡುವಲ್ಲಿ ಕಟಿಬದ್ಧರಾಗಿದ್ದಾರೆ. ಕೇರಳದ ತಂತ್ರಿಗಳಾದ ನೀಲೆÉೀಶ್ವರ ಸ್ವಾಮಿಗಳ ನಿರ್ದೇಶನದಂತೆ ಸಂಪ್ರದಾಯವನ್ನು ಕಾಪಾಡಿಕೊಂಡು ಬರಲಾಗುತ್ತಿದೆ. ಈ ಹಿಂದೆ ಜೀರ್ಣೋದ್ಧಾರ ಮತ್ತು ಪ್ರತಿಷ್ಠೆಯ ಸಂದರ್ಭ ತಾಂಬೂಲ ಪ್ರಶ್ನೆಯನ್ನಿಟ್ಟಾಗ ಈ ಕ್ಷೇತ್ರಗಳಿಗೆ ಯಾವದೇ ದೋಷಗಳು ಬರುವದಿಲ್ಲವೆಂದು ತಿಳಿದು ಬಂದಿರುತ್ತದೆ. ಆದರೆ, ಕೆಲವರು ವಿನಾಕಾರಣ ಕ್ಷೇತ್ರದ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆ ಎಂದು ಭರತ್ ಅಸಮಾಧಾನ ವ್ಯಕ್ತಪಡಿಸಿದರು.

ಬ್ರಹ್ಮಗಿರಿ ಬೆಟ್ಟದಲ್ಲಿರುವ ಸಪ್ತಋಷಿಗಳ ಕುಂಡಿಕೆಯನ್ನು ಜೆಸಿಬಿ ಯಂತ್ರಗಳನ್ನು ಬಳಸಿ ನೆಲ ಸಮಗೊಳಿಸಿರುವದು ಮತ್ತು ಬೈವಾಡ ಸೇವೆಗೆ ಕುಂಡಿಕೆಯಿಂದ ತೀರ್ಥ ತರಲು ಸಾಧ್ಯವಾಗದೆ ಇರುವದು ದೋಷವೇ ಹೊರತು ತಲಕಾವೇರಿಯಲ್ಲಿ ಯಾವದೇ ದೋಷ ಸೃಷ್ಟಿಯಾಗಿಲ್ಲವೆಂದು ಅವರು ಅಭಿಪ್ರಾಯಪಟ್ಟರು.

ತಲಕಾವೇರಿಯಲ್ಲಿ ಇನ್ನು ಮುಂದೆ ತೀರ್ಥ ಬರುವದು ಕಷ್ಟಸಾಧ್ಯವೆಂದು ವಾದ ಮಂಡಿಸುತ್ತಿದ್ದಾರೆ. ಆದರೆ, ಸೂರ್ಯನು ತುಲಾ ರಾಶಿಗೆ ಪ್ರವೇಶಿಸುವ ಪÀÅಣ್ಯಕಾಲವನ್ನೇ ಪುರಾಣಗಳ ಕಾಲದಿಂದಲೂ ತೀರ್ಥೋದ್ಭವದ ಕ್ಷಣವೆಂದು ಆಚರಿಸಿಕೊಂಡು ಬರುತ್ತಿರುವ ವಿಚಾರ ಶಾಸ್ತ್ರಗಳಿಂದಲೂ ತಿಳಿದು ಬಂದಿದೆಯೆಂದು ಭರತ್ ಸ್ಪಷ್ಟಪಡಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎಂ. ರಾಜೀವ್ ಮಾತನಾಡಿ, ತಲಕಾವೇರಿಯಲ್ಲಿ ದೋಷ ಪರಿಹಾರಕ್ಕೆಂದು ಕೆಲವರು ಅನವಶ್ಯಕವಾಗಿ ಸಭೆ ನಡೆಸಿ ಭಕ್ತಾದಿಗಳನ್ನು ಗೊಂದಲಕ್ಕೆ ಸಿಲುಕಿಸಿದ್ದಾರೆ ಎಂದು ಆರೋಪಿಸಿದರು. ಸಭೆಯಲ್ಲಿ ಭಾಗವಹಿಸಿದ ಸ್ಥಳೀಯ ಅರ್ಚಕ ಪ್ರಮುಖರೊಬ್ಬರು ಜೀರ್ಣೋದ್ಧಾರ ಮತ್ತು ಪ್ರತಿಷ್ಠಾಪನೆ ಸಂದರ್ಭಗಳಲ್ಲಿ ಯಾವದೇ ಪ್ರಮುಖ ಪಾತ್ರವನ್ನು ವÀಹಿಸಿರಲಿಲ್ಲ. ಸಭೆಯಲ್ಲಿ ಕ್ಷೇತ್ರದ ತಕ್ಕರಾದ ಕೋಡಿ ಮೋಟಯ್ಯನವರನ್ನು ಬದಲಾಯಿಸಿ, ಕೋಡಿ ಪೆÀÇನ್ನಪ್ಪರನ್ನು ತಕ್ಕರೆಂದು ಘೋಷಿಸುವ ಮೂಲಕ ಗೊಂದಲವನ್ನು ಸೃಷ್ಟಿಸಲಾಗಿದೆ ಎಂದು ಆರೋಪಿಸಿದರು.

ಭಾಗಮಂಡಲ ಮತ್ತು ತಲಕಾವೇರಿ ದೇವಾಲಯಗಳ ಸಂಪನ್ಮೂಲಗಳನ್ನು ಜಿಲ್ಲಾಡಳಿತವೇ ಸುಪರ್ದಿಯಲ್ಲಿ ಇಟ್ಟುಕೊಂಡಿದ್ದು, ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಜವಾಬ್ದಾರಿ ಜಿಲ್ಲಾಡಳಿತಕ್ಕೆ ಇದೆ. ಭಕ್ತಾದಿಗಳಾದ ಗ್ರಾಮಸ್ಥರು ರಾಜಕೀಯ ರಹಿತವಾಗಿ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸು ತ್ತಿದ್ದಾರೆ ಎಂದು ರಾಜೀವ್ ಸ್ಪಷ್ಟಪಡಿಸಿದರು.

ಭಾಗಮಂಡಲದಲ್ಲಿ ಒಳಚರಂಡಿ ಯೋಜನೆಯನ್ನು ಇನ್ನೂ ಕೂಡ ಅನುಷ್ಠಾನಗೊಳಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ತ್ರಿವೇಣಿ ಸಂಗಮದ ಪಾವಿತ್ರ್ಯತೆ ಉಳಿಯಬೇಕಾದರೆ ಗ್ರಾಮದ ಚರಂಡಿ ನೀರು ಸಂಗಮಕ್ಕೆ ಸೇರುವದನ್ನು ನಿಲ್ಲಿಸಬೇಕೆಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಪ್ರಮುಖರಾದ ರಾಜಾ ರೈ, ಕುದುಪಜೆ ಪÀÅರುಷೋತ್ತಮ, ಜಯಂತ್ ಹಾಗೂ ಅಮೆ ಬಾಲಕೃಷ್ಣ ಅವರುಗಳು ತಲಕಾವೇರಿ ದೋಷ ಪರಿಹಾರದ ಸಭೆಯನ್ನು ತೀವ್ರವಾಗಿ ಖಂಡಿಸಿದರು.