ಸಮ್ಮೇಳನಕ್ಕೆ ಲೇಖನ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಆಹ್ವಾನ
*ಗೋಣಿಕೊಪ್ಪಲು, ಅ. 26: ಪೊನ್ನಂಪೇಟೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕುಶಲಪುರ ಮೈದಾನದಲ್ಲಿ ನಡೆಯುವ 12ನೇ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಗೆ ಲೇಖನ, ಕವನ, ಕಥೆಗಳನ್ನು ಆಹ್ವಾನಿಸಲಾಗಿದೆ ಎಂದು ಸ್ಮರಣ ಸಂಚಿಕೆ ಸಮಿತಿ ಅಧ್ಯಕ್ಷೆ ದಂಬೆಕೊಡಿ ಸುಶಿಲ ತಿಳಿಸಿದ್ದಾರೆ. ಪೊನ್ನಂಪೇಟೆ ತಾ.ಪಂ. ಸಾಮಥ್ರ್ಯ ಸೌಧ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ಜಿಲ್ಲೆಯ ಸಾಹಿತಿಗಳು ನವೆಂಬರ್ 5 ರೊಳಗೆ ಸ್ಮರಣ ಸಂಚಿಕೆಗೆ ವೈಚಾರಿಕ ಲೇಖನಗಳು, ಕವನ, ಕಥೆಗಳನ್ನು ಕಳುಹಿಸುವಂತೆ ಕೋರಲಾಗಿದೆ.
ಮುಲ್ಲೇಂಗಡ ಮಧೋಷ್ ಪೂವಯ್ಯ, ಅಧ್ಯಕ್ಷರು ತಾಲೂಕು ಕನ್ನಡ ಸಾಹಿತ್ಯ ಪರಿಷತ್, ತೂಕ್ಬೊಳಕ್ ಪತ್ರಿಕಾ ಕಚೇರಿ ವೀರಾಜಪೇಟೆ ಈ ವಿಳಾಸಕ್ಕೆ ಲೇಖಕರು ಬರಹಗಳನ್ನು ಕಳುಹಿಸಬಹುದಾಗಿದೆ ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9480556667 ಸಂಪರ್ಕಿ ಸಬಹುದಾಗಿದೆ.
* ಸಮ್ಮೇಳನದ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧ ಕಲಾ ತಂಡಗಳು ನೋಂದಾಯಿಸಿ ಕೊಳ್ಳುವಂತೆ ಸಾಂಸ್ಕøತಿಕ ಸಮಿತಿ ಸಂಚಾಲಕಿ ಚೇಂದಂಡ ಸುಮಿ ಸುಬ್ಬಯ್ಯ ತಿಳಿಸಿದ್ದಾರೆ.
ನವೆಂಬರ್ 5 ರೊಳಗೆ ಜಿಲ್ಲೆಯ ಕಲಾ ತಂಡಗಳು ಸಾಂಸ್ಕøತಿಕ ಕಾರ್ಯ ಕ್ರಮ ನೀಡಲು ನೋಂದಾಯಿಸಿ ಕೊಳ್ಳಬಹುದಾಗಿದೆ. ಕನ್ನಡ, ಕೊಡವ, ಅರೆಭಾಷೆ ಹಾಗೂ ಎರವ, ಕುರುಬ ಭಾಷೆ ಹಾಗೂ ಸಂಸ್ಕøತಿಯನ್ನು ಬಿಂಬಿಸುವ ತಂಡಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
ತಂಡಗಳು ನಾಡು-ನುಡಿ, ದೇಶ-ಸಂಸ್ಕøತಿಯ ಕಲಾ ಪ್ರಕಾರಗಳ ನೃತ್ಯ ಮಾಡ ಬಹುದಾಗಿದೆ ಎಂದು ತಿಳಿಸಿದ್ದಾರೆ. ಆಸಕ್ತ ತಂಡಗಳು ಸುಮಿ ಸುಬ್ಬಯ್ಯ, (9449761488) ಹಾಗೂ ತಾಲೂಕು ಸಾಹಿತ್ಯ ಪರಿಷತ್ ಕಾರ್ಯದರ್ಶಿ ರೇಖಾ ಶ್ರೀಧರ್ (9449049095) ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭ ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಡಾ. ಶಿವಪ್ಪ, ಸದಸ್ಯರುಗಳಾದ ರತಿ ಅಚ್ಚಪ್ಪ ಹಾಜರಿದ್ದರು.