ಕುಶಾಲನಗರ, ಅ. 26: ಕಾವೇರಿ ತಾಲೂಕು ರಚನೆಗೆ ಒತ್ತಾಯಿಸಿ ಇಲ್ಲಿನ ಕಾರು ನಿಲ್ದಾಣದಲ್ಲಿರುವ ಶ್ರೀ ಗುಂಡೂರಾವ್ ವೇದಿಕೆಯಲ್ಲಿ ವಿವಿಧ ಸಂಘ- ಸಂಸ್ಥೆಗಳಿಂದ ನಡೆಯುತ್ತಿ ರುವ ಸರಣಿ ಧರಣಿ 12ನೇ ದಿನ ಪೂರೈಸಿದೆ. ಹೊಟೇಲ್, ರೆಸಾರ್ಟ್ ಹಾಗೂ ಉಪಹಾರ ಗೃಹಗಳ ಸಂಘ ಮತ್ತು ಮಹಿಳಾ ವಿವಿಧೋದ್ಧೇಶ ಸಹಕಾರ ಸಂಘದ ಪದಾಧಿಕಾರಿಗಳು ಇಂದಿನ ಧರಣಿಯಲ್ಲಿ ಪಾಲ್ಗೊಂಡಿ ದ್ದರು. ಈ ಸಂದರ್ಭ ಮಾತನಾಡಿದ ಹೊಟೇಲ್, ರೆಸಾರ್ಟ್ ಹಾಗೂ ಉಪಹಾರ ಗೃಹಗಳ ಸಂಘದ ಜಿಲ್ಲಾಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್, ಕಾವೇರಿ ತಾಲೂಕು ಬೇಡಿಕೆ 2 ದಶಕಗಳ ಮನವಿ ಯಾಗಿದೆ. ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರ ಕನಸಾಗಿದ್ದು ಎಲ್ಲಾ ಸರ್ಕಾರಗಳು ಅರ್ಹತೆ ಇದ್ದರೂ ಇದುವರೆಗೂ ಈಡೇರಿಸಿಲ್ಲ ಎಂದರು. ಪ್ರತಿಭಟನಾಕಾರರು ಮೈಸೂರು-ಮಡಿಕೇರಿ ಹೆದ್ದಾರಿಯಲ್ಲಿ ಮಾನವ ಸರಪಳಿ ರಚಿಸಿ ರಸ್ತೆ ತಡೆ ನಡೆಸಿ ಘೋಷಣೆ ಕೂಗಿದರು.

ಹೊಟೇಲ್, ರೆಸಾರ್ಟ್ ಹಾಗೂ ಉಪಹಾರ ಗೃಹಗಳ ಸಂಘದ ಪದಾಧಿಕಾರಿಗಳಾದ ಕೆ.ಎಸ್. ರಾಜಶೇಖರ್, ಭಾಸ್ಕರ್, ಎಸ್.ಕೆ. ಸತೀಶ್, ಡಿ.ಕೆ. ತಿಮ್ಮಪ್ಪ, ಎಂ.ವಿ ನಾರಾಯಣ, ಬಷೀರ್, ಬಾಲು, ಸಬೀರ್, ಇಬ್ರಾಹಿಂ, ಉಸ್ಮಾನ್, ರಜಾಕ್, ಕೇಂದ್ರ ಸಮಿತಿ ಪ್ರಮುಖರಾದ ಜಿ.ಎಲ್. ನಾಗರಾಜ್, ಎಂ.ಹೆಚ್. ಫಜಲುಲ್ಲಾ, ಎಸ್.ಎನ್. ನರಸಿಂಹಮೂರ್ತಿ, ಅಬ್ದುಲ್ ಖಾದರ್, ಕೆ.ಎಸ್. ನಾಗೇಶ್. ಕೆ.ಎನ್. ದೇವರಾಜ್, ಸಲೀನ ಪೇದ್ರು, ಜಯ ಮತ್ತಿತರರು ಇದ್ದರು.

ತಾಲೂಕು ಹೋರಾಟದ ಖರ್ಚು ವೆಚ್ಚ ಭರಿಸುವ ಸಂಬಂಧ ಸಮೀಪದ ನಿಸರ್ಗಧಾಮ ಟೂರಿಸ್ಟ್ ಸೆಂಟರ್ ಮಾಲೀಕ ಅಬ್ದುಲ್ ಸಲಾಮ್ 50 ಸಾವಿರ ರೂಪಾಯಿ ದೇಣಿಗೆ ಚೆಕ್ ಅನ್ನು ಬುಧವಾರ ನಡೆದ ಪ್ರತಿಭಟನೆ ವೇಳೆ ಕಾವೇರಿ ತಾಲೂಕು ರಚನಾ ಹೋರಾಟ ಕೇಂದ್ರ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಅವರಿಗೆ ಹಸ್ತಾಂತರಿಸಿದರು.