ಮಡಿಕೇರಿ, ಅ. 26: ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಇವರುಗಳ ಸಂಯುಕ್ತ ಆಶ್ರಯದಲ್ಲಿ ಕೊಡಗು ಜಿಲ್ಲಾ ಮಟ್ಟದ ಪ್ರಾಥಮಿಕ ವಿಭಾಗದ ಕ್ರೀಡಾಕೂಟ ಡಿ. ಚೆನ್ನಮ್ಮ ಪದವಿಪೂರ್ವ ಕಾಲೇಜು, ಮದಾಪುರದಲ್ಲಿ ನಡೆಯಿತು. ಈ ಕ್ರೀಡಾಕೂಟದಲ್ಲಿ ಗೋಣಿಕೊಪ್ಪಲು ಸಮೀಪದ ಸರ್ವದೈವತ ಆಂಗ್ಲ ಮಧ್ಯಮ ಪ್ರಾಥಮಿಕ ಶಾಲೆಯ ಬಾಲಕ-ಬಾಲಕಿಯರು ಥ್ರೋಬಾಲ್ ಪಂದ್ಯಾಟದಲ್ಲಿ ಭಾಗವಹಿಸಿದ್ದು, ಬಾಲಕರು ದ್ವಿತೀಯ ಬಹುಮಾನಗಳಿಸಿರುವದಲ್ಲದೆ 7ನೇ ತರಗತಿಯ ಎನ್.ಬಿ. ಕಿಲನ್ ಗಣಪತಿ, ಎನ್.ಜೆ. ನಿಲನ್ ಹಾಗೂ ಕೆ.ಎಸ್. ಸಾಯುಜ್ ವಿಭಾಗ ಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ. ಬಾಲಕಿಯರು ಪ್ರಥಮ ಬಹುಮಾನವನ್ನು ಗಳಿಸುವದರೊಂದಿಗೆ ಉಡುಪಿಯಲ್ಲಿ ನಡೆಯುವ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆಂದು ದೈಹಿಕ ಶಿಕ್ಷಕ ರವಿಚಂದ್ರ ತಿಳಿಸಿದ್ದಾರೆ.