ಗೋಣಿಕೊಪ್ಪಲು, ಅ. 26: ದೇಶ-ವಿದೇಶಗಳಲ್ಲಿ ಭರತ ನಾಟ್ಯ ಹಾಗೂ ಹಠಾ ಯೋಗದ ಪ್ರದರ್ಶನದಿಂದ ಖ್ಯಾತಿ ಪಡೆದಿರುವ ಯಾಮಿನಿ ಮುತ್ತಣ್ಣ ಮತ್ತು 15 ಕಲಾವಿದರ ತಂಡ ನ. 6 ರಂದು ಬಾಳುಗೋಡು ಫೆಡರೇಷನ್ ಆಫ್ ಕೊಡವ ಸಮಾಜ ಸಭಾಂಗಣದಲ್ಲಿ ಸಂಜೆ 2 ಗಂಟೆ ಅವಧಿಯ ತಮ್ಮ ಕಲಾ ಪ್ರದರ್ಶನ ನೀಡಲಿದ್ದಾರೆ.
ಚೂರಿಕಾಡುವಿನಲ್ಲಿ ‘ಟಾಪ್ ಸಿಕ್ಸ್ ಸಿಂಗರ್ಸ್’ ಕಾರ್ಯಕ್ರಮದ ಮೂಲಕ ಏಪ್ರಿಲ್ ತಿಂಗಳಿನಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ‘ಏಪ್ರಿಲ್ ಫೆಸ್ಟಿವಲ್ ಕಮಿಟಿ’ ಇದೀಗ ರೂ. 8 ಲಕ್ಷ ವೆಚ್ಚದಲ್ಲಿ ‘ಡ್ಯಾನ್ಸ್ ಫಾರ್ ಎಕ್ಸಲೆನ್ಸ್’ ಮೂಲಕ ಯಾಮಿನಿ ಮುತ್ತಣ್ಣ ಭರತನಾಟ್ಯ ಕಾರ್ಯಕ್ರಮ ಆಯೋಜಿಸಿರುವದಾಗಿ ಸಮಿತಿಯ ಅಧ್ಯಕ್ಷ ಕಳ್ಳಿಚಂಡ ನಟರಾಜ್ ತಿಳಿಸಿದ್ದಾರೆ. ಬಾಳುಗೋಡು ಕೊಡವ ಸಮಾಜಗಳ ಒಕ್ಕೂಟದ ಆವರಣದ ವೇದಿಕೆಯಲ್ಲಿ ಭರತನಾಟ್ಯ ಹಾಗೂ ಹಠಾ ಯೋಗ ಪ್ರದರ್ಶನ ನಡೆಯಲಿದೆ. ಈ ಬಾರಿ 16 ಮಂದಿ ಭರತನಾಟ್ಯ ಕಲಾವಿದರ ತಂಡ ವಿಭಿನ್ನವಾದ ಕಾರ್ಯಕ್ರಮವನ್ನು ನೀಡಲಿದ್ದಾರೆ. ನಮ್ಮ ಸಾಂಸ್ಕøತಿಕ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕೊಡಗಿನ ಜನತೆಯ ಪೆÇ್ರೀತ್ಸಾಹವೂ ಅಗತ್ಯ ಎಂದು ಮನವಿ ಮಾಡಿದ್ದಾರೆ.
ಯಾಮಿನಿ ಪರಿಚಯ: ಬಿಟ್ಟಂಗಾಲ ಸಮೀಪ ನಾಂಗಾಲದ ಚೇಂದ್ರಿಮಾಡ ರಾಜ-ಸುಂದರಿಯ ಪುತ್ರಿ ಯಾಮಿನಿ ಬಾಲ್ಯದಿಂದಲೇ ಭರತನಾಟ್ಯದಲ್ಲಿ ಆಸಕ್ತಿ ಬೆಳೆಸಿ ಕೊಂಡವರು. ತಾಯಿ ಸುಂದರಿ ಅವರೂ ವೀರಾಜಪೇಟೆ ಹಾಗೂ ಮಡಿಕೇರಿಯಲ್ಲಿ ಭರತನಾಟ್ಯ ಪ್ರದರ್ಶನ ನೀಡಿ ಗಮನ ಸೆಳೆದವರು. ಕೋಟೇರ ಮುತ್ತಣ್ಣ ಅವರನ್ನು ವರಿಸಿದ ಯಾಮಿನಿ ಬೆಂಗಳೂರು ಇಂದಿರಾ ನಗರದಲ್ಲಿ ‘ಕಲಾಸಿಂಚನಂ ಯೋಗಸ್ಥಳ ಪುರಾತನ ಕಲಾ ಟ್ರಸ್ಟ್’ ಮೂಲಕ ದೇಶವಿದೇಶದ ವಿದ್ಯಾರ್ಥಿಗಳಿಗೆ ಭರತನಾಟ್ಯ ಹಾಗೂ ಯೋಗ ನಿರ್ದೇಶಕರಾಗಿ ಕಾರ್ಯನಿರ್ವ ಹಿಸುತ್ತಿದ್ದಾರೆ.
ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರೆಯಾದ ಯಾಮಿನಿ ಬರೆದಿರುವ ‘ದಿ ಪವರ್ ಆಫ್ ಯೋಗ’ ಪುಸ್ತಕ ಚೀನಾ ಭಾಷೆಗೂ ಅನುವಾದ ಗೊಂಡಿರುವದು ವಿಶೇಷ.