ಗೋಣಿಕೊಪ್ಪಲು, ಅ. 26: ಹೆಬ್ಬಲಸು ಮರ ಸಾಗಾಟ ಮಾಡುತ್ತಿದ್ದ ಸಂದರ್ಭ ದಾಳಿ ನಡೆಸಿರುವ ಪೊನ್ನಂಪೇಟೆ ಅರಣ್ಯ ಅಧಿಕಾರಿಗಳ ಕಾರ್ಯಾಚರಣೆ ತಂಡ ರೂ. 4 ಲಕ್ಷ ಮೌಲ್ಯದ ಮಾಲು ವಶಪಡಿಸಿ ಕೊಂಡು ತನಿಖೆಗೆ ಮುಂದಾಗಿದ್ದಾರೆ.
ಪೊನ್ನಂಪೇಟೆ ವಲಯ ಅರಣ್ಯ ಇಲಾಖೆಯ ತಂಡ ಬುಧವಾರ ರಾತ್ರಿ ಬೀಟ್ ಸುತ್ತುತ್ತಿದ್ದಾಗ ಹುದಿಕೇರಿ ಕೊಡವ ಸಮಾಜ ಸಮೀಪ ಗೋಣಿಕೊಪ್ಪದತ್ತ ಬರುತ್ತಿದ್ದ ಲಾರಿಯನ್ನು ತಪಾಸಣೆ ಮಾಡುವಾಗ ಹೆಬ್ಬಲಸು ಮರದ ನಾಟಾಗಳು ಪತ್ತೆಯಾಗಿವೆ. ಒಟ್ಟು 4 ಘನ ಮೀಟರ್‍ನ 7 ನಾಟಗಳನ್ನು ವಶಪಡಿಸಿಕೊಂಡಿದ್ದಾರೆ. ಅಂದಾಜು ರೂ. 2 ಲಕ್ಷದ ಮರ, ರೂ 2 ಲಕ್ಷದ ಲಾರಿ ಸೇರಿದಂತೆ ಒಟ್ಟು ರೂ. 4 ಲಕ್ಷ ಮೌಲ್ಯದ ಮಾಲು ವಶ ಪಡಿಸಿಕೊಳ್ಳಲಾಗಿದೆ. ದಾಳಿ ಸಂದರ್ಭ ಲಾರಿ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ.
ಡಿಎಫ್‍ಒ ಕ್ರಿಸ್ತರಾಜ್ ಹಾಗೂ ಎಸಿಎಫ್ ಶ್ರೀಪತಿ ಮಾರ್ಗದರ್ಶನ ದಂತೆ ಆರ್‍ಎಫ್‍ಓ ಗಂಗಾಧರ್, ಡಿಆರ್‍ಎಫ್‍ಓಗಳಾದ ರಾಕೇಶ್, ಹಂಸ, ಸಿಬ್ಬಂದಿ ಸಂಜಯ್, ಜನಾದರ್Àನ್, ಭರತ್ ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು.