ಮಡಿಕೇರಿ, ಅ. 27: ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಯನ್ಸ್ ಕ್ಲಬ್, ಮಡಿಕೇರಿ ಮಿಸ್ಟಿ ಹಿಲ್ಸ್ ಮತ್ತು ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಎನ್.ಎಸ್. ದೇವಿಪ್ರಸಾದ್ ಅಧ್ಯಕ್ಷತೆಯಲ್ಲಿ ನೇತ್ರ ಪರೀಕ್ಷೆ ಮತ್ತು ಕಣ್ಣು ಪೊರೆ ಶಸ್ತ್ರ ಚಿಕಿತ್ಸಾ ಶಿಬಿರ ನಡೆಯಿತು.
ಶಿಬಿರದ ಸಭಾ ಕಾರ್ಯಕ್ರಮವನ್ನು ಸಂಪಾಜೆ ಲಯನ್ಸ್ ಅಧ್ಯಕ್ಷೆ ಅಮೃತ ಟಿ. ಅಪ್ಪಣ್ಣ ಹಾಗೂ ರೋಟರಿಯ ಧನಂಜಯ್ ಉದ್ಘಾಟಿಸಿದರು. ಅತಿಥಿಗಳಾಗಿ ನೇತ್ರ ತಜ್ಞರಾದ ಡಾ. ಪ್ರಶಾಂತ್, ಡಾ. ವಿಕ್ರಂ, ಡಾ. ಜಿ.ಕೆ.ಎಸ್. ಭಟ್, ಡಾ. ಪೂಜಾ, ಬಿ.ಆರ್. ಸುಂದರ ಮತ್ತಿತರರಿದ್ದರು. ಶಿಬಿರದಲ್ಲಿ ಸುಮಾರು 170 ಜನರ ಕಣ್ಣಿನ ಪರೀಕ್ಷೆ ನಡೆಸಲಾಯಿತು. ಸುಮಾರು 110 ಜನರಿಗೆ ಉಚಿತ ಕನ್ನಡಕವನ್ನು ವಿತರಿಸಲಾಯಿತು. 11 ಜನರಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ನಡೆಸಲಾಯಿತು. ಲೋಕನಾಥ್ ಸ್ವಾಗತಿಸಿ, ಸಂಪಾಜೆ ಲಯನ್ಸ್ ಕಾರ್ಯದರ್ಶಿ ವಾಸುದೇವ್ ಕಟ್ಟೆಮನೆ ವಂದಿಸಿದರು.