ಮಡಿಕೇರಿ, ಅ. 27: ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಬೋಯಿಕೇರಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಸಾಹಿ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಪ್ರೌಢಶಾಲಾ ಹಾಗೂ ಪ್ರಾಥಮಿಕ ಶಾಲಾ ಬಾಲಕರು ಹಾಗೂ ಬಾಲಕಿಯರ ಹಾಕಿ ಲೀಗ್ ಪಂದ್ಯಾವಳಿ ತಾ. 28ರಂದು (ಇಂದು) ಅಂತಿಮಗೊಳ್ಳಲಿದೆ.

ಇಂದು ನಡೆದ ಪಂದ್ಯಾವಳಿಯಲ್ಲಿ 17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಕಲಬುರ್ಗಿ ತಂಡ ಬೆಳಗಾವಿ ತಂಡವನ್ನು 3-1 ಗೋಲಿನಿಂದ, ಬೆಂಗಳೂರು ತಂಡವನ್ನು 1-0 ಗೋಲಿನಿಂದ, ಮೈಸೂರು ತಂಡ ಕೂಡಿಗೆ ಸ್ಪೋಟ್ರ್ಸ್ ಹಾಸ್ಟೆಲ್ ತಂಡವನ್ನು 1-0 ಗೋಲಿನಿಂದ ಮಣಿಸಿತು. 17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಕೂಡಿಗೆ ತಂಡ ಇಂಡಿಯನ್ ಹೈಸ್ಕೂಲ್ ಬೆಂಗಳೂರು ತಂಡವನ್ನು 4-0 ಗೋಲಿನಿಂದ, ಮೈಸೂರು ತಂಡ ಇಂಡಿಯನ್ ಹೈಸ್ಕೂಲ್ ತಂಡವನ್ನು 3-0 ಗೋಲಿನಿಂದ ಸೋಲಿಸಿತು.

14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಬೆಳಗಾವಿ ತಂಡ ಕಲಬುರ್ಗಿ ತಂಡವನ್ನು 2-0 ಗೋಲಿನಿಂದ ಸೋಲಸಿದರೆ, ಬಾಲಕಿಯರ ವಿಭಾಗದಲ್ಲಿ ಮೈಸೂರು ತಂಡ ಕಲಬುರ್ಗಿ ತಂಡವನ್ನು 14-0 ಗೋಲಿನಿಂದ, ಬೆಳಗಾಗಿ ತಂಡ ಬೆಂಗಳೂರು ತಂಡವನ್ನು 5-0 ಗೋಲಿನಿಂದ, ಕಲಬುರ್ಗಿ ತಂಡ ಬೆಳಗಾವಿ ತಂಡವನ್ನು 3-2 ಗೋಲಿನಿಂದ ಕಲಬುರ್ಗಿ ತಂಡ ಬೆಂಗಳೂರು ತಂಡವನ್ನು 1-0 ಗೋಲಿನಿಂದ ಸೋಲಿಸಿತು.

ತಾ. 28ರಂದು (ಇಂದು) ಇನ್ನುಳಿದ ಲೀಗ್ ಹಂತದ ಪಂದ್ಯಾವಳಿಗಳು ಜರುಗಲಿವೆ.