ಮಡಿಕೇರಿ, ಅ.27 : ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲೆÉೀಮಾಡಿನಲ್ಲಿ ಸ್ಮಶಾನದ ವಿವಾದ ಮತ್ತೊಮ್ಮೆ ಜೀವ ಪಡೆಯುತ್ತಿದ್ದು, ಶವ ಸಂಸ್ಕಾರ ಮಾಡಿದ ಜಾಗದಲ್ಲೇ 2 ಏಕರೆ ಭೂಮಿಯನ್ನು ಸ್ಮಶಾನಕ್ಕಾಗಿ ಮೀಸಲಿಡಬೇಕೆಂದು ಒತ್ತಾಯಿಸಿ ಅಹೋರಾತ್ರಿ ಧರಣಿ ನಡೆಸಲು ಬಹುಜನ ಕಾರ್ಮಿಕರ ಸಂಘÀ ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಕೆ. ಮೊಣ್ಣಪ್ಪ, ಶವ ಸಂಸ್ಕಾರ ಮಾಡಿರುವ ಜಾಗದಲ್ಲಿ ಶೆಡ್‍ನ್ನು ನಿರ್ಮಿಸಿ ತಾ. 28 ರಿಂದ ಧರಣಿ ಸತ್ಯಾಗ್ರಹವನ್ನು ಆರಂಭಿಸುವದಾಗಿ ತಿಳಿಸಿದರು.

ತಾ. 29ರ ಒಳಗೆ ಜಿಲ್ಲಾಡಳಿತದಿಂದ ಸೂಕ್ತ ಸ್ಪಂದನ ದೊರಕದಿದ್ದಲ್ಲಿ ಮಡಿಕೇರಿ ನಗರದ ಗಾಂಧಿ ಮೈದಾನದಲ್ಲಿ ಹೋರಾಟ ನಡೆಸುವದಾಗಿ ಮೊಣ್ಣಪ್ಪ ಹೇಳಿದರು. 2012 ಡಿಸೆಂಬರ್ ತಿಂಗಳಿನಲ್ಲಿ 2 ಏಕರೆ ಜಾಗವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸ್ಮಶಾನಕ್ಕಾಗಿ ಮಂಜೂರು ಮಾಡಲಾಗಿತ್ತು. ಈ ಜಾಗದಲ್ಲಿ ಕಳೆÉದ 10 ವರ್ಷಗಳಿಂದ ಸುಮಾರು 45ಕ್ಕೂ ಅಧಿಕ ಶವಗಳನ್ನು ಸಂಸ್ಕಾರ ಮಾಡಲಾಗಿದೆ. ಮಂಜೂರಾತಿಯ ಆರ್‍ಟಿಸಿ ಕೂಡ ಇದ್ದು, ಇದನ್ನು ಜಿಲ್ಲಾಡಳಿತ ದುರಸ್ತಿ ಪಡಿಸಬೇಕಾಗಿದೆ. ಖುದ್ದು ರಾಜ್ಯ ಕಂದಾಯ ಕಾರ್ಯದರ್ಶಿಗಳೆ ಸ್ಮಶಾನಕ್ಕೆ ಜಮೀನನ್ನು ಮೀಸಲಿಡುವಂತೆ ತಿಳಿಸಿದ್ದರೂ ಜಿಲ್ಲಾಡಳಿತ ಶ್ರೀಮಂತರ ಪರವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಮೊಣ್ಣಪ್ಪ ಆರೋಪಿಸಿದರು.

ವಾಟೆಕಾಡಿನಲ್ಲಿ 2 ಏಕರೆ ಭೂಮಿಯನ್ನು ಸ್ಮಶಾನಕ್ಕಾಗಿ ಗುರುತಿಸಿ ಜಿಲ್ಲಾಡಳಿತ ಕಾಮಗಾರಿಯನ್ನು ಆರಂಭಿಸಿದೆ. ಇದನ್ನು ವಿರೋಧಿಸುವದಾಗಿ ತಿಳಿಸಿದ ಅವರು, ತಕ್ಷಣ ಕಾಮಗಾರಿಯನ್ನು ಸ್ಥಗಿತ ಗೊಳಿಸಬೇಕೆಂದು ಒತ್ತಾಯಿಸಿದರು. ಇದನ್ನು ಮೀರಿ ಕಾಮಗಾರಿ ಮುಂದುವರಿಸಿದರೆ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಅನುದಾನ ದುರುಪಯೋಗ ವಾಗುತ್ತಿರುವ ಬಗ್ಗೆ ನ್ಯಾಯಾಲಯದ ಮೊರೆ ಹೋಗುವದಾಗಿ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಹೊದ್ದೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಪಿ.ಎ.ಕುಸುಮಾವತಿ, ಪರ್ಯಾಯ ಜಾಗದಲ್ಲಿ ಸ್ಮಶಾನವನ್ನು ನೀಡುವದನ್ನು ವಿರೋಧಿಸುವದಾಗಿ ತಿಳಿಸಿದರು.