ಶ್ರೀಮಂಗಲ, ಅ. 27: ಕೊಡಗು ಜಿಲ್ಲೆಯ ಪರಿಸರ, ಕೊಡವ ಜನಾಂಗದ ಸಂಸ್ಕøತಿ, ಆಹಾರ ಪದ್ಧತಿ, ವಿಶಿಷ್ಟವಾದ ಆಟ್‍ಪಾಟ್, ದೇವರಕಾಡು ಮಹಿಮೆ, ಭಾಷೆ, ಸಾಹಿತ್ಯಕ್ಕೆ ಸಂಬಂಧಿಸಿದಂತೆ ಮತ್ತು ಕೊಡಗಿನಲ್ಲಿರುವ ಪಿತ್ರಾರ್ಜಿತ ಆಸ್ತಿಯನ್ನು ಮಾರಿ ಬೆಂಗಳೂರಿಗೆ ತೆರಳಿ ಕಷ್ಟ, ನಷ್ಟ ಪಡುವ ವಿಚಾರಧಾರೆಗಳನ್ನು ನೃತ್ಯ ರೂಪಕದ ಮೂಲಕ ಅತ್ಯುತ್ತಮವಾಗಿ ಟಿ.ಶೆಟ್ಟಿಗೇರಿ ರೂಟ್ಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ನೀಡುವದರ ಮೂಲಕ ನೆರೆದಿದ್ದ ಸಭಿಕರ ಜನಮನ್ನಣೆ ಗಳಿಸಿತು.

ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜ, ಟಿ.ಶೆಟ್ಟಿಗೇರಿ ಸಾರ್ವಜನಿಕ ಗೌರಿ ಗಣೇಶ ಉತ್ಸವ ಸಮಿತಿ, ಕೊಡವ ತಕ್ಕ್ ಎಳ್ತ್ ಕಾರಡ ಕೂಟ, ಹಾಗೂ ಸಂಭ್ರಮ ಪೊಮ್ಮಕ್ಕಡ ಕ್ರೀಡೆ ಹಾಗೂ ಸಾಂಸ್ಕøತಿಕ ಸಂಸ್ಥೆಯ ಆಶ್ರಯದಲ್ಲಿ ಟಿ.ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ನಡೆದ ಚಂಗ್ರಾಂದಿ-ಪತ್ತಾಲೋದಿ ಜನೋತ್ಸವ ಕಾರ್ಯಕ್ರಮ ವಿಶಿಷ್ಟವಾಗಿ ಮೂಡಿಬಂದಿತು.

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದ ಕುಟ್ಟ ಕೊಡವ ಸಮಾಜದ ಖಜಾಂಚಿ ಮಚ್ಚಮಾಡ ಸುಬ್ರಹ್ಮಣಿ ಮಾತನಾಡಿ ಈ ಭಾಗದಲ್ಲಿ ಕೊಡವ ಸಂಸ್ಕøತಿಯ ಬಗ್ಗೆ ಹೆಚ್ಚು ಅಭಿಮಾನವಿರುವದರಿಂದ ಕೊಡವ ಸಂಸ್ಕøತಿ ಈ ಮೂಲಸ್ವರೂಪದಲ್ಲೇ ಉಳಿದುಕೊಂಡಿದೆ. ಹಾಗೂ ತನ್ನ ವೈಭವವನ್ನು ಸಾರುತ್ತಿದೆ. ಕೊಡವ ಸಮಾಜಗಳು ಮತ್ತು ಪ್ರತಿಯೊಬ್ಬ ಕೊಡವ ಜನಾಂಗದವರು ತನ್ನ ಸಂಸ್ಕøತಿಯನ್ನು ಉಳಿಸಿ ಬೆಳೆಸಬೇಕು. ಕೊಡವ ಸಮಾಜ ಕೊಡವರ ಎಲ್ಲಾ ಹಬ್ಬ ಹರಿದಿನಗಳನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಯುವ ಪೀಳಿಗೆಗೆ ಹಬ್ಬಗಳ ಮಾಹಿತಿ ಇಲ್ಲದಂತಾಗುತ್ತದೆ. ಮೂಂದ್ ನಾಡ್ ಕೊಡವ ಸಮಾಜದ ಅಭಿವೃದ್ಧಿಗೆ 15 ಸಾವಿರ ರೂ.ಗಳ ದೇಣಿಗೆ ನೀಡುವದಾಗಿ ಭರವಸೆ ನೀಡಿದರು.

ಮತ್ತೊಬ್ಬ ಅತಿಥಿ ಕಟ್ಟೇರ ಗಣೇಶ್ ವಿಶ್ವನಾಥ್ ಮಾತನಾಡಿ ಸಂಸ್ಕøತಿಯನ್ನು ಉಳಿಸಿ ಬೆಳೆಸುವದು ಪ್ರತಿಯೊಬ್ಬ ಕೊಡವರ ಹಾಗೂ ಕೊಡವ ಸಮಾಜಗಳ ಜವಾಬ್ದಾರಿ. ಹಾಗೆಯೇ ಕೊಡವ ಸಮಾಜಗಳ ಅಭಿವೃದ್ಧಿಗೆ ಜನಾಂಗ ಭಾಂದವರು ಸಹಕರಿಸಬೇಕು. ಈಗಾಗಲೇ ಚಂಗ್ರಾಂದಿ-ಪತ್ತಾಲೋದಿ ಕಾರ್ಯಕ್ರಮಕ್ಕೆ 5 ಸಾವಿರ ದೇಣಿಗೆ ನೀಡಿದ್ದು ಉತ್ತಮವಾಗಿ ಮೂಡಿಬರುತ್ತಿರುವ ಈ ಕಾರ್ಯಕ್ರಮಕ್ಕೆ ಮತ್ತೇ 20 ಸಾವಿರ ರೂ. ದೇಣಿಗೆ ನೀಡುವದಾಗಿ ಭರವಸೆ ನೀಡಿದರು.

ಮಚ್ಚಮಾಡ ಪಾಪು ಸೋಮಯ್ಯ ಮಾತನಾಡಿ ಇಂದು ಮಕ್ಕಳು ಟಿ.ವಿ, ಮೊಬೈಲ್, ಸಂಸ್ಕøತಿಯನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಇದರಿಂದ ಮಕ್ಕಳನ್ನು ದೂರ ಉಳಿಸಬೇಕಾಗಿದೆ. ಮಕ್ಕಳಿಗೆ ಕೊಡವ ಪದ್ಧತಿ, ಆಚಾರ, ವಿಚಾರದ ಬಗ್ಗೆ ತಿಳಿಸಿಕೊಡಲು ಪೋಷಕರು ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಹೇಳಿದರು.

ಮೂಂದ್ ನಾಡ್ ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ ಅಧ್ಯಕ್ಷತೆಯಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಸಮಾಜದ ಕಾರ್ಯದರ್ಶಿ ಮನ್ನೇರ ರಮೇಶ್, ಸರು ರಮೇಶ್, ಮಚ್ಚಮಾಡ ಶಾಂತ ಸುಬ್ರಮಣಿ, ಕೊಡವ ಸಮಾಜದ ನಿರ್ದೇಶಕಿ ಮನ್ನೇರ ಕಾವೇರಮ್ಮ ಉಪಸ್ಥಿತರಿದ್ದರು.

ಸಾಂಸ್ಕøತಿಕÀ ಕಾರ್ಯಕ್ರಮ

ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ಗೋಣಿಕೊಪ್ಪಲು ಜನನಿ ಪೊಮ್ಮಕ್ಕಡ ಕೂಟದ ವತಿಯಿಂದ ಕಾವೇರಿ ನೃತ್ಯ, ಸ್ವಾಗತ ನೃತ್ಯ, ಫ್ಯೂಜóನ್ ನೃತ್ಯ, ಹಾಡುಗಾರಿಕೆ ಮುಂತಾದ ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ಶ್ರೀಮಂಗಲ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯ ಅತ್ಯುತ್ತಮವಾಗಿ ಮೂಡಿಬಂದಿದು ಕೊಡವ ಸಂಸ್ಕøತಿಯನ್ನು ಜನರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಯಿತು.

ಟಿ.ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ನಡೆದ ಚಂಗ್ರಾಂದಿ- ಪತ್ತಾಲೋದಿ ಜನೋತ್ಸವ ಕಾರ್ಯಕ್ರಮ ಪ್ರತಿಯೊಬ್ಬರಿಂದಲೂ ಪ್ರಶಂಸೆಗೆ ಪಾತ್ರವಾಯಿತು.

ವೇದಿಕೆಯ ಮುಖ್ಯ ಅತಿಥಿ ಹಾಗೂ ಕಾರ್ಯಕ್ರಮ ಪ್ರಾಯೋಜಕರಾದ ತಬ್ಬಂಗಡ ಚಾಮಿ ಮಾತನಾಡಿ ಜಿಲ್ಲೆಯ ಯಾವ ಸಂಘ ಸಂಸ್ಥೆಗಳಿಂದ ನೆನಪಿಗೆ ಬಾರದ ಇಂತಹ ಒಂದು ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಮೂಂದ್ ನಾಡ್ ಕೊಡವ ಸಮಾಜ ನಡೆಸಿರುವದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಕೊಡವ ಸಮಾಜಗಳು ಇದನ್ನು ಆಚರಣೆ ಮಾಡುವಂತಾಗಬೇಕು ಎಂದು ತಿಳಿಸಿದರು.

ಮತ್ತೊಬ್ಬ ಮುಖ್ಯ ಅತಿಥಿ ಕಟ್ಟೇರ ಬಾಬು ಕುಶಾಲಪ್ಪ ಮಾತನಾಡಿ ಇಂದು ಆಂಗ್ಲ ಭಾಷೆಯ ಪ್ರಭಾವದಿಂದ ಮಕ್ಕಳಿಗೆ ಕೊಡವ ಭಾಷೆಯನ್ನು ಕಲಿಸುವ ಪರಿಸ್ಥಿತಿ ಒದಗಿ ಬಂದಿದೆ. ಭಾಷೆ, ಸಂಸ್ಕøತಿ, ಕಲೆ ಮರೆತು ಹೋದರೆ, ಭಾಷೆ ಅಳಿದರೆ ಸಾಹಿತ್ಯ, ಕಲೆ, ಸಂಸ್ಕøತಿ ಜನಾಂಗದ ಅಳಿವಿನ ಆತಂಕವಿರುವದರಿಂದ ಪೋಷಕರು ಮಕ್ಕಳೊಂದಿಗೆ ಕೊಡವ ಭಾಷೆಯಲ್ಲಿ ಮಾತನಾಡುವ ಪರಿಪಾಠವನ್ನು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.