ಸೋಮವಾರಪೇಟೆ, ಅ. 27: ಸಮೀಪದ ಬೇಳೂರು ಗ್ರಾಮ ಪಂಚಾಯಿತಿಯ ಬಜೆಗುಂಡಿ ಗ್ರಾಮದಲ್ಲಿ ಕಳೆದ 5 ದಿನಗಳಿಂದ 3 ಬೀದಿ ದೀಪಗಳು ನಿರಂತರವಾಗಿ ಉರಿಯುತ್ತಿದ್ದು, ಸೂರ್ಯನಿಗೇ ಇಲ್ಲಿ ಟಾರ್ಚ್ ಹಾಕಿದ್ದಾರೆ!
ಅಸಮರ್ಪಕವಾಗಿರುವ ವಿದ್ಯುತ್ ಲೈನ್‍ನಿಂದಾಗಿ ಬಜೆಗುಂಡಿ ಗ್ರಾಮದ ಟ್ರ್ಯಾಕ್ಟರ್ ಚಾಲಕ ಶಿವಪ್ಪ, ಪಾಷಾಣಮೂರ್ತಿ ದೇವಸ್ಥಾನ ಮತ್ತು ಸುಬ್ರಮಣಿ ಅವರುಗಳ ಮನೆ ಎದುರು ಕಳೆದ 5 ದಿನಗಳಿಂದ ಹಗಲೂ ರಾತ್ರಿ ನಿರಂತರವಾಗಿ ಬೀದಿ ದೀಪ ಉರಿಯುತ್ತಿದೆ.
ಈ ಬಗ್ಗೆ ವಿದ್ಯುತ್ ಇಲಾಖಾ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದರೂ ಸಹ ಸರಿಪಡಿಸಿಲ್ಲ. ಗ್ರಾಮ ಪಂಚಾಯಿತಿಯ ಗಮನಕ್ಕೆ ತಂದಿದ್ದರೂ ಯಾವದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಗ್ರಾ.ಪಂ. ಅಧ್ಯಕ್ಷರಾಗಿರುವ ಭಾಗ್ಯ ಮಂಜುನಾಥ್ ಅವರು ಈ ಬಗ್ಗೆ ಗಮನ ಹರಿಸಿ ವಿದ್ಯುತ್ ಲೈನ್ ದುರಸ್ತಿಗೆ ಸಂಬಂಧಿಸಿದ ಇಲಾಖೆಯನ್ನು ಆಗ್ರಹಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.