ಮಡಿಕೇರಿ, ಅ. 27: ನಗರದ ಶ್ರೀ ಮುತ್ತಪ್ಪ ದೇವಾಲಯ ಉತ್ಸವ ಸಮಿತಿ ವತಿಯಿಂದ ನವೆಂಬರ್ 24 ರಂದು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಷಷ್ಠಿ ಮಹೋತ್ಸವ ಆಚರಣೆಯು ದೇವಾಲಯದ ಆವರಣದಲ್ಲಿರುವ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಮುತ್ತಪ್ಪ ದೇವಾಲಯ ಸಮಿತಿಯ ಅಧ್ಯಕ್ಷರಾದ ಟಿ.ಕೆ. ಸುಧೀರ್ ಹಾಗೂ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಟಿ.ಎಸ್. ಪ್ರಕಾಶ್, ಷಷ್ಠಿ ಮಹೋತ್ಸವ ಮತ್ತು ದೇವಾಲಯದ ಕಾರ್ಯ ಚಟುವಟಿಕೆಗ ಬಗ್ಗೆ ಮಾಹಿತಿ ನೀಡಿದರು.
ನವೆಂಬರ್ 24 ರಂದು ಬೆಳಿಗ್ಗೆ 5 ಗಂಟೆಯಿಂದಲೆ ಷಷ್ಠಿ ಪ್ರಯುಕ್ತ ವಿಶೇಷ ಪಂಚಾಮೃತ ಅಭಿಷೇಕ ಸೇವೆ, ಕ್ಷೀರಾಭಿಷೇಕ, ಅಪ್ಪಂ ಸೇವೆ, ಪಂಚ ಕಜ್ಜಾಯ ಸೇವೆ, ಹಣ್ಣು ಕಾಯಿ ಪÀÇಜೆ, ಪÀÅಷ್ಪಾರ್ಚನೆ, ಮಹಾ ಮಂಗಳಾರತಿ, ಸಂಜೆ ಭಜನಾ ಕಾರ್ಯಕ್ರಮ, ಸಿಡಿ ಮದ್ದು ಪ್ರದರ್ಶನ ಹಾಗೂ ಮಹಾಪÀÇಜೆ ನಡೆಯಲಿದೆ.
ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆಯನ್ನು ಮಾಡಲಾಗಿದೆ.
ಇದೇ ಸಂದರ್ಭ ಶ್ರೀ ಮುತ್ತಪ್ಪ ದೇವರ ವೆಳ್ಳಾಟಂನ್ನು ಕೂಡ ಆಯೋಜಿಸಲಾಗಿದೆ. ಶ್ರೀ ಸುಬ್ರಹ್ಮಣ್ಯ ದೇವಾಲಯದ ಎದುರಿನಲ್ಲಿ ತೀರ್ಥ ಮಂಟಪ, ಧ್ವಜ ಸ್ತಂಭ ಹಾಗೂ ಪೌಳಿ ನಿರ್ಮಿಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಸುಮಾರು 25 ಲಕ್ಷ ರೂ.ಗಳು ಖರ್ಚಾಗಲಿದೆ. ಭಕ್ತಾದಿಗಳು ಸಹಕಾರ ನೀಡಬೇಕೆಂದು ಪ್ರಮುಖರು ಮನವಿ ಮಾಡಿದರು.
ಷಷ್ಠಿ ಉತ್ಸವಕ್ಕೆ ನೆರವು ನೀಡುವವರು ಈ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸ ಬಹುದಾಗಿದೆ 9448406534, 9448504690,. ಷಷ್ಠಿ ಮಹೋತ್ಸವದ ಪ್ರಯುಕ್ತ ಸಮಿತಿಯ ಸರ್ವ ಸದಸ್ಯರ ಸಭೆಯನ್ನು ತಾ. 29 ರಂದು ಕರೆಯಲಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಉತ್ಸವ ಸಮಿತಿಯ ಅಧ್ಯಕ್ಷ ಎಸ್. ಸುರೇಶ್, ಕಾರ್ಯದರ್ಶಿ ಎಂ.ಯು. ಉಣ್ಣಿಕೃಷ್ಣ, ಸದಸ್ಯರಾದ ಕೆ.ಕೆ. ಮಹೇಶ್ ಕುಮಾರ್ ಹಾಗೂ ದೇವಾಲಯದ ಮಹಿಳಾ ವೇದಿಕೆಯ ಅಧ್ಯಕ್ಷೆ ಸಂಗೀತಾ ಪ್ರಸನ್ನ ಉಪಸ್ಥಿತರಿದ್ದರು.