ಗೋಣಿಕೊಪ್ಪಲು, ಅ. 29: ಪೆÇನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆದ ಎ.ಡಿವಿಜನ್ ಹಾಕಿ ಲೀಗ್‍ನಲ್ಲಿ 8 ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶ ಪಡೆದಿವೆ.

ಬ್ಲೂಸ್ಟಾರ್, ಬೇಗೂರು, ಪೆÇನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್, ಟವರ್ಸ್, ಹಾತೂರು, ಬಿಬಿಸಿ, ಅಮ್ಮತ್ತಿ ಈಗಲ್ಸ್, ಹಾಗೂ ಚಾರ್ಮರ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣೆಸಾಟ ನಡೆಸಲಿವೆ. ಭಾನುವಾರ ನಡೆದ ಲೀಗ್‍ನ ಕೊನೆಯ ಪಂದ್ಯಗಳಲ್ಲಿ ಪೆÇನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ಗೆಲುವು ಪಡೆಯಿತು. ಬೇಗೂರು ಹಾಗೂ ಮರ್ಕರಾ ತಂಡಗಳ ಪಂದ್ಯ ಡ್ರಾ ಫಲಿತಾಂಶ ನೀಡಿತು. ಪೆÇನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ತಂಡವು ಬಿಬಿಸಿ ವಿರುದ್ದ 2-0 ಗೋಲುಗಳ ಜಯ ಪಡೆಯಿತು. ಪೆÇನ್ನಂಪೇಟೆ ಪರ 6 ರಲ್ಲಿ ಅರ್ಜುನ್, 29 ರಲ್ಲಿ ಹುಮೈಜ್ ಗೋಲು ಬಾರಿಸಿದರು.

ಬೇಗೂರು ಹಾಗೂ ಮರ್ಕರಾ ತಂಡಗಳ ಪಂದ್ಯ 3-3 ಗೋಲುಗಳ ಮೂಲಕ ಡ್ರಾ ಫಲಿತಾಂಶ ನೀಡಿತು. ಬೇಗೂರು ಪರ 11 ರಲ್ಲಿ ಮಿಲನ್, 22 ರಲ್ಲಿ ಅಯ್ಯಮ್ಮ, 40 ರಲ್ಲಿ ಮಣಿ, ಮರ್ಕರಾÀ ಪರ 4 ರಲ್ಲಿ ಬಿದ್ದಪ್ಪ, 9 ರಲ್ಲಿ ಫಯಾಜ್, 57 ರಲ್ಲಿ ಟೋನಿ ಗೋಲು ಹೊಡೆದರು.