ಮಡಿಕೇರಿ, ಅ. 29: ವಿವಿಧ ಇಲಾಖೆಗಳ ಆಶ್ರಯದಲ್ಲಿ ಸಂಘ- ಸಂಸ್ಥೆಗಳ ನೆರವಿನೊಂದಿಗೆ ಇಂದು ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕ್ರೀಡಾಕೂಟ ನಡೆಸಲಾಯಿತು.
ಆಟೋಟ ಕ್ರೀಡಾಕೂಟದ ವಿಜೇತರು: 2ರಿಂದ ನಾಲ್ಕನೇ ತರಗತಿ ವಿದ್ಯಾರ್ಥಿಗಳ ಬಾಲಕರ ವಿಭಾಗದ 80 ಮೀಟರ್ ಓಟದಲ್ಲಿ ಮುಕೀಬ್ (ಪ್ರ), ಬಿ. ಆರ್ ಚಂದನ್ ರಾಜೇಶ್ (ದ್ವಿ), ಬಿ.ಡಿ ಪ್ರೀತಮ್ (ತೃ) ಸ್ಥಾನ ಪಡೆದರೆ, ಬಾಲಕಿಯರ ವಿಭಾಗದಲ್ಲಿ ಬಿ.ಎಂ ಪ್ರಜ್ಞಾ ಶೆಟ್ಟಿ (ಪ್ರ), ಪಿ.ಬಿ ರೇಶ್ಮಾ (ದ್ವಿ) ಸ್ಥಾನ ಗಳಿಸಿದರು.
5ರಿಂದ ಏಳನೇ ತರಗತಿ ವಿದ್ಯಾರ್ಥಿಗಳಿಗೆ ನಡೆದ 100 ಮೀಟರ್ ಓಟದ ಬಾಲಕರ ವಿಭಾಗದ ಓಟದ ಸ್ಪರ್ಧೆಯಲ್ಲಿ ಬಿ. ಎಫ್ ಲಿಖಿನ್ (ಪ್ರ), ವೈ.ಜಿ ಗಣೇಶ್ (ದ್ವಿ), ಎನ್ ಬಿ. ನಾಚಪ್ಪ(ತೃ) ಸ್ಥಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ಬಿ.ಎಂ ಕೀರ್ತಾನ (ಪ್ರ), ಹೆಚ್.ಎ ತುಷಾರಾ (ದ್ವಿ), ಬಿ ಪ್ರೀತಿ ತೃತೀಯ ಸ್ಥಾನ ಪಡೆದರು.
8ರಿಂದ 10ನೇ ತರಗತಿ ವಿದ್ಯಾರ್ಥಿಗಳ ಬಾಲಕರ ವಿಭಾಗದ 800 ಮೀಟರ್ ಓಟದ ಸ್ಪರ್ಧೆಯಲ್ಲಿ ಎನ್.ಹೆಚ್ ಮುರಳೀಧರ (ಪ್ರ), ಎಂ.ಗಣೇಶ್ (ದ್ವಿ), ಎಂ.ಎ ಹರ್ಷದ್ (ತೃ) ಸ್ಥಾನ ಪಡೆದರೆ, ಬಾಲಕಿಯರ ವಿಭಾಗದಲ್ಲಿ ಎನ್.ಸಿ ಚರಿತಾ (ಪ್ರ), ಕೆ.ಡಿ ಸನ್ನಿಧಿ (ದ್ವಿ) ಪಿ.ಎಂ ಮಾನಸ ತೃತೀಯ ಸ್ಥಾನ ಗಳಿಸಿದರು.
ಪ್ರಥಮ ಪಿಯುಸಿ ಯಿಂದ ಪದವಿ ವಿದ್ಯಾರ್ಥಿಗಳ ಬಾಲಕರ 1,500 ಮೀಟರ್ ಓಟದ ಸ್ಪರ್ಧೆಯಲ್ಲಿ ಬಿ.ವಿ ಗಗನ್ (ಪ್ರ), ಪುನೀತ್ (ದ್ವಿ), ಮಂಜು (ತೃ) ಸ್ಥಾನ ಗಳಿಸಿದರು.
ಸಾರ್ವಜನಿಕ ಪುರುಷರಿಗೆ ನಡೆದ 1,500 ಮೀಟರ್ ಓಟದ ಸ್ಪರ್ಧೆಯಲ್ಲಿ ಗಗನ್ ಮೇದಪ್ಪ (ಪ್ರ), ಕೋಡಿ ಜಿತನ್ (ದ್ವಿ) ಮುಕ್ಕಟ್ಟಿ ಸೋನಾ ತೃತೀಯ ಸ್ಥಾನ ಪಡೆದುಕೊಂಡರೆ ಮಹಿಳೆಯರ ವಿಭಾಗದಲ್ಲಿ ಬಿ.ಆರ್ ಚೈತ್ರ (ಪ್ರ) ತೀರ್ಥ ಕುಮಾರಿ ರಾಜೇಶ್ (ದ್ವಿ) ಪಾಂಡನ ಶೈಲಜ ಮೊಣ್ಣಪ್ಪ (ತೃ) ಸ್ಥಾನ ಪಡೆದರು.
ತೀರ್ಪುಗಾರರಾಗಿ ಪೊಲೀಸ್ ಇಲಾಖೆಯ ಸಿಬ್ಬಂದಿ ಕೃಷ್ಣ, ಯುವಜನ ಮತ್ತು ಕ್ರೀಡಾ ಇಲಾಖೆಯ ಸಿಬ್ಬಂದಿಗಳಾದ ಚೇತನ್ ಹಾಗೂ ಮಂಜುನಾಥ್ ಕಾರ್ಯ ನಿರ್ವಹಿಸಿದರು.
ವಿಜೇತರಿಗೆ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನ. 1 ರಂದು ಜಿಲ್ಲಾಡಳಿತದಿಂದ ನಡೆಯುವ ಕನ್ನಡ ರಾಜ್ಯೋತ್ಸವ ಸಮಾರಂಭದ ಬಹುಮಾನ ವಿತರಿಸಲಾಗುವದು ಎಂದು ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ.