ಕುಶಾಲನಗರ, ಅ. 29: ದೇಶದ ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಶಿಕ್ಷಕರೇ ಅಡಿಪಾಯ ವಾಗಿದ್ದು ಗುರುಗಳ ಅಭಿನಂದನೆ ಕಾರ್ಯ ಆಗಬೇಕಾಗಿದೆ ಎಂದು ಕುಶಾಲನಗರ ರೋಟರಿ ಅಧ್ಯಕ್ಷ ಎನ್.ಜಿ.ಪ್ರಕಾಶ್ ಹೇಳಿದರು.

ಕುಶಾಲನಗರದ ರೋಟರಿ ಸಭಾಂಗಣದಲ್ಲಿ ಇನ್ನರ್‍ವೀಲ್ ಸಂಸ್ಥೆ ಮತ್ತು ರೋಟರಿ ಕ್ಲಬ್ ಸಂಯುಕ್ತಾಶ್ರಯದಲ್ಲಿ ನಡೆದ ನೇಶನ್ ಬಿಲ್ಡ್ Œಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಕುಶಾಲನಗರ ವ್ಯಾಪ್ತಿಯ 15 ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಮಾಡಿ, ಶಾಲೆಗಳ ಉತ್ತಮ ಪ್ರಜೆಗಳನ್ನು ರೂಪಿಸುವ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಇನ್ನರ್ ವ್ಹೀಲ್‍ನ ಅಧ್ಯಕ್ಷೆ ರೇಖಾ ಗಂಗಾಧರ್ ವಹಿಸಿ ಮಾತನಾಡಿದರು.

ವೇದಿಕೆಯಲ್ಲಿ ರೋಟರಿ ಉಪ ರಾಜ್ಯಪಾಲ ಮಹೇಶ್ ನಾಲ್ವಡೆ, ಮಿಸ್ಟಿ ಹಿಲ್ಸ್ ಕಾರ್ಯದÀರ್ಶಿ ಸುನಿತಾ ಮಹೇಶ್, ಕಾರ್ಯದರ್ಶಿ ಹರೀಶ್, ಹಿರಿಯ ಸದಸ್ಯರಾದ ಕ್ರಿಜ್ವಲ್ ಕೊಟ್ಸ್, ಪಿ.ಜಿ. ಗಂಗಾಧರ್, ಆರತಿ ಶೆಟ್ಟಿ, ಇನ್ನರ್ ವ್ಹೀಲ್ ಸದಸ್ಯರು ಹಾಗೂ ಶಿಕ್ಷಕರು ಇದ್ದರು.

ಮುಳ್ಳುಸೋಗೆಯ ಶಾಲೆಯ ರೇಣುಕಾ, ಕೂಡುಮಂಗಳೂರು ಬೋಜಮ್ಮ, ಕೂಡಿಗೆ ವಾಣಿ, ಜೂಲಿಯಾನ ಸಾಲ್ಡಾನ, ಮಾದಾಪಟ್ಟಣ ಜಯಕಲಾ, ಕಣವೆಯ ಗಣೇಶ್, ಬೈಲುಕುಪ್ಪೆಯ ಮಧುರಾ, ಗುಮ್ಮನಕೊಲ್ಲಿ ಶಾಲೆಯ ನಳಿನಿ, ಗುಡ್ಡೆಹೊಸೂರು ಯಶುಮತಿ, ಬಸವನಹಳ್ಳಿಯ ಶಶಿ, ಬಾಳುಗೋಡು ಗೀತ, ಬೈಚನಹಳ್ಳಿಯ ಹೇಮಲತಾ, ಕುಶಾಲನಗರದ ಕುಸುಮಾ. ಚಿಕ್ಕತ್ತೂರು ಹೆಚ್.ಎಂ. ಪ್ರಕಾಶ್, ದೊಡ್ಡತ್ತೂರು ಗೋವಿಂದ ರಾಜು ಅವರುಗಳನ್ನು ಸನ್ಮಾನಿಸಲಾಯಿತು.