ಮಡಿಕೇರಿ, ಅ. 29: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ವತಿಯಿಂದ 2017-18ನೇ ಸಾಲಿಗೆ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್, ಪಾರ್ಸಿ ಹಾಗೂ ಆಂಗ್ಲೋ ಇಂಡಿಯನ್ ಜನಾಂಗದವರಿಗೆ ಸಾಲ ಯೋಜನೆಯಡಿಯಲ್ಲಿ ನಿಗಮದಿಂದ ಸಾಲ ಸೌಲಭ್ಯಗಳನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಅಲ್ಪಸಂಖ್ಯಾತರ ರೈತರ ಕಲ್ಯಾಣ ಯೋಜನೆಯಡಿ ಅಲ್ಪಸಂಖ್ಯಾತರ ಸಮುದಾಯದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕವಾಗಿ ಹಾಗೂ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪ್ರೋತ್ಸಾಹಿಸಲು ಉಳುಮೆಯಿಂದ ಕೊಯ್ಲುವರೆಗೆ ಕೃಷಿ ಚಟುವಟಿಕೆಗೆ ಉಪಯುಕ್ತ ವಿವಿಧ ಮಾದರಿಯ ಉಪಕರಣಗಳಾದ ಸಣ್ಣ ಟ್ರ್ಯಾಕ್ಟರ್, ಪವರ್ ಟಿಲ್ಲರ್, ಭೂಮಿ ಸಿದ್ದತೆ ಉಪಕರಣ, ನಾಟಿ ಬಿತ್ತನೆ ಉಪಕರಣ, ಅಂತರ ಬೇಸಾಯ ಉಪಕರಣಗಳು ಇತ್ಯಾದಿಗಳನ್ನು ರೂ. 1 ಲಕ್ಷ ಘಟಕ ವೆಚ್ಚದಲ್ಲಿ ಸಾಲ ಹಾಗೂ ಸಹಾಯಧನವನ್ನು ನೇರವಾಗಿ ನೀಡಲಾಗುವದು. (ರೂ.50 ಸಾವಿರ ಸಾಲ ಹಾಗೂ ರೂ. 50 ಸಾವಿರ ಸಹಾಯಧನವಾಗಿರುತ್ತದೆ) ಈ ಯೋಜನೆಯಡಿ ಜಿಲ್ಲೆಗೆ ಭೌತಿಕ ಗುರಿ 14, ಆರ್ಥಿಕ ಗುರಿ ರೂ. 14.00 ಲಕ್ಷಗಳಾಗಿರುತ್ತದೆ.

ಆಟೋಮೊಬೈಲ್ ಸರ್ವೀಸ್ ತರಬೇತಿ ಹಾಗೂ ಸಾಲ ಯೋಜನೆಯಲ್ಲಿ ಅಲ್ಪಸಂಖ್ಯಾತ ಯುವಕರು ವರ್ಕ್‍ಶಾಫ್‍ಗಳಲ್ಲಿ ಮೆಕ್ಯಾನಿಕ್‍ಗಳಾಗಿ ದುಡಿಯುತ್ತಿರುವರಿಗೆ ನಿಗಮದಿಂದ ಪ್ರತಿಷ್ಠಿತ ಆಟೋ ಮೊಬೈಲ್ ಸರ್ವೀಸ್ ಸಂಸ್ಥೆಗಳಾದ ಟೊಯೊಟಾ, ವೋಲ್ವೋ, ಟಾಟಾ, ಟೆಪೇ ಈ ಕಂಪನಿಗಳ ಸಹಯೋಗದೊಂದಿಗೆ ತರಬೇತಿ ನೀಡಿ ನಿಗಮದಿಂದ ರಾಷ್ಟ್ರೀಯ ಬ್ಯಾಂಕ್ ಸಹಯೋಗದೊಂದಿಗೆ ರೂ. 2 ಲಕ್ಷಗಳಿಂದ ರೂ. 5 ಲಕ್ಷದವರೆಗೂ ಸಾಲ ಹಾಗೂ ಸಹಾಯಧನವನ್ನು ನೀಡಲಾಗುವದು. ನಿಗಮದಿಂದ ಕನಿಷ್ಟ ರೂ.70 ಸಾವಿರಗಳಿಂದ ರೂ. 1.25 ಲಕ್ಷದವರೆವಿಗೂ ಸಹಾಯಧನವನ್ನು ನೀಡಲಾಗುವದು. ಈ ಯೋಜನೆಯಡಿ ಜಿಲ್ಲೆಗೆ ಒಟ್ಟು ಭೌತಿಕ 03, ಆರ್ಥಿಕ ರೂ. 3.75 ಗುರಿ ನಿಗದಿಪಡಿಸಿದೆ.

ಅರ್ಜಿಗಳನ್ನು ಆನ್‍ಲೈನ್ ಮೂಲಕವೇ ಸಲ್ಲಿಸಬೇಕಾಗಿರುತ್ತದೆ. ಅರ್ಜಿ ಪಡೆಯುವ ವೆಬ್‍ಸೈಟ್ hಣಣಠಿ://ಞmಜಛಿ.ಞಚಿಡಿ.ಟಿiಛಿ.iಟಿ/ಟoಚಿಟಿ/oಟಿಟiಟಿeಚಿಠಿಠಿಟiಛಿಚಿಣioಟಿ.ಚಿsಠಿx. ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ನವೆಂಬರ್ 8 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ) ರಾಮಮಂದಿರದ ಹಿಂಭಾಗ, ಹೊಟೇಲ್ ಹಿಲ್-ವ್ಯೂ ಹತ್ತಿರ, ಹಿಲ್ ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ-571201 ಇವರನ್ನು ಕಚೇರಿ ವೇಳೆಯಲ್ಲಿ ಹಾಗೂ ಕಚೇರಿ ದೂರವಾಣಿ ಸಂಖ್ಯೆ: 08272-220449 ನ್ನು ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಬಿ.ಎನ್. ನಾಗೇಂದ್ರ ತಿಳಿಸಿದ್ದಾರೆ.