ಮಡಿಕೇರಿ, ಅ. 29: ಕೊಡಗಿನ ಇತಿಹಾಸ, ನೆಲ, ಜಲ, ಸಂಸ್ಕøತಿ, ಪರಂಪರೆಯೊಂದಿಗೆ ಜನಾಂಗದ ಹಕ್ಕುಗಳಿಗೆ ಸಂವಿಧಾನಬದ್ಧ ರಕ್ಷಣೆಗೆ ಆಗ್ರಹಿಸಿ ನ. 1ರಂದು ನವದೆಹಲಿಯ ಜಂತರ್ ಮಂತರ್‍ನಲ್ಲಿ ಸಿ.ಎನ್.ಸಿ. ವತಿಯಿಂದ ಧರಣಿ ನಡೆಸಲಾಗುವದು ಎಂದು ಸಂಘಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಂದು ದೇಶದ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಕೇಂದ್ರದ ಪ್ರಮುಖ ಸಚಿವರು ಮತ್ತು ವಿಶ್ವಸಂಸ್ಥೆ ಮುಖ್ಯಸ್ಥರಿಗೆ ಕೊಡವರ ಬೇಡಿಕೆ ಮಾನ್ಯತೆಗೆ ಕೋರಿ ಮನವಿ ರವಾನಿಸಲಾಗುವದು ಎಂದು ತಿಳಿಸಿದ್ದಾರೆ.ಅಲ್ಲದೆ ದೇವಟ್‍ಪರಂಬುವಿನಲ್ಲಿ ರಾಷ್ಟ್ರೀಯ ಸ್ಮಾರಕ ಸ್ಥಾಪನೆ, ಕಾವೇರಿ ನಾಡಿನಲ್ಲಿ ಗೋಹತ್ಯೆ ನಿಷೇಧ, ಜಾಗತಿಕ ಭಯೋತ್ಪಾದನೆ ಸೇರಿದಂತೆ ರಾಷ್ಟ್ರ ವಿರೋಧಿ ಕೃತ್ಯಗಳ ನಿಯಂತ್ರಣಕ್ಕೆ ಕೇಂದ್ರದ ಗಮನ ಸೆಳೆಯಲಾಗುವದು ಎಂದು ನಾಚಪ್ಪ ವಿವರಿಸಿದ್ದಾರೆ.

ಅಂದಿನ ಧರಣಿಯಲ್ಲಿ ಕೊಡಗಿನ ಪುರುಷ- ಮಹಿಳೆಯರು ಸಾಂಪ್ರದಾಯಿಕ ಉಡುಗೆಯಲ್ಲಿ ಪಾಲ್ಗೊಳ್ಳುವಂತೆಯೂ ಅವರು ಕರೆ ನೀಡಿದ್ದಾರೆ.