ವೀರಾಜಪೇಟೆ, ಅ. 29: ಶೋಷಿತ ವರ್ಗಗಳ ಸಮುದಾಯವು ಸಮಾಜದ ಹಲವು ಸ್ಥರಗಳಲ್ಲಿ ವಿವಿಧÀ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದೆ; ಆದರೇ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರವು ಮತ್ತು ನ್ಯಾಯಂಗವು ಶಾಸನಗಳನ್ನು ರೂಪಿಸಿದೆ ಶಾಸನಗಳ ಸದ್ಬಳಕೆಯಾದಾಗ ಶೋಷಿತ ವರ್ಗಗಳ ಏಳಿಗೆಯು ಪರಿಪೂರ್ಣಗೊಳ್ಳುತ್ತದೆ ಎಂದು ಕೊಡಗು ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ವಿಜು ಸುಬ್ರಮಣಿ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕು ಅಡಳಿತ, ತಾಲೂಕು ಪಂಚಾಯತ್, ತಾಲೂಕು ಕಾನೂನು ಸೇವೆಗಳ ಸಮಿತಿ ವೀರಾಜಪೇಟೆ ಗ್ರಾಮ ಪಂಚಾಯತ್ ಬಿಳುಗುಂದ ಹಾಗೂ ಸಮಾಜ ಕಲ್ಯಾಣ ಇಲಾಖೆ ವೀರಾಜಪೇಟೆ ತಾಲೂಕು ಇವರುಗಳ ಸಂಯುಕ್ತ ಅಶ್ರಯದಲ್ಲಿ ಬಿಳುಗುಂದ ಸಮುದಾಯ ಭವನದಲ್ಲಿ ಅಯೋಜಿಸಲಾದ ಅಸ್ಪøಶ್ಯತಾ ನಿವಾರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

ತಾಲೂಕು ಪಂಚಾಯಿತಿಯ ಅಧ್ಯಕೆÀ್ಷ ಸ್ಮಿತಾ ಪ್ರಕಾಶ್ ಮಾತನಾಡಿ ಇಂದು ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಜಾತಿ ಸಮುದಾಯಗಳಿಗೆ ರಾಜ್ಯ ಸರ್ಕಾರ ಮತ್ತು ಕಾನೂನು ಇಲಾಖೆಯು ಅಯೋಜಿಸಿರುವ ಕಾರ್ಯಕ್ರಮಗಳ ಬಗ್ಗೆ ಮನದಟ್ಟು ಮಾಡಿಕೊಂಡು ಮಾಹಿತಿಯನ್ನು ಪಡೆದು ಸದೃಢ ಜೀವನವನ್ನು ಸಾಗಿಸುವಂತೆ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ಪೊನ್ನಂಪೇಟೆಯ ಸಹಾಯಕ ನಿರ್ದೇಶಕ ಹೆಚ್.ಎನ್. ಮಂಜುನಾಥ್ ಅವರು ಪ್ರಾಸ್ತಾವಿಕ ಭಾಷಣದಲ್ಲಿ ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಜಾತಿಗಳ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಎಲ್ಲರೂ ಭಾಗವಹಿಸಿ ಮಾಹಿತಿಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು. ಬಿಳುಗುಂದ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಕೆ.ಎ. ಅಲೀಮ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿ ಮಾತನಾಡಿದರು ಮತ್ತು ಗ್ರಾ.ಪಂ. ಸದಸ್ಯ ಹನೀಫ, ತಾಲೂಕು ಪಂಚಾಯಿತಿಯ ಸದಸೆÀ್ಯ ಹೆಚ್.ಎಸ್. ಶೋಭ, ಉಪಾಧ್ಯಕೆÀ್ಷ ಶಾಂತಿ, ಸದಸ್ಯರಾದ ಚಿಲ್ಲವಂಡ ಕಾವೇರಪ್ಪ, ಪ್ರವೀಣ್, ಕುಸುಮ ಹಾಗೂ ಹಿರಿಯರಾದ ಹೆಚ್.ಎಸ್ ಕುಟ್ಟಪ್ಪ ಉಪಸ್ಥಿತರಿದ್ದರು

ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲ ಕೆ.ವಿ ಸುನಿಲ್ ವಿಷಯ ಮಂಡನೆ ಮಾಡಿದರು. ವಕೀಲ ರಫೀಕ್ ನವಲಗುಂದ ಅವರಿಂದ ನಾಗರಿಕ ಹಕ್ಕು ಸಂರಕ್ಷಣಾ ಅಧಿನಿಯಮ ಎಂಬ ವಿಷಯದ ಬಗ್ಗೆ ವಿಚಾರ ಮಂಡನೆ ನಡೆಯಿತು.