ಸೋಮವಾರಪೇಟೆ, ಅ.30: ಬೇಳೂರು ಕ್ಲಬ್ ಆಯೋಜಿಸಿದ್ದ 111ನೇ ವರ್ಷದ ಮುಕ್ತ ಕೂರ್ಗ್ ಓಪನ್ ಎಂಡ್ ಹ್ಯಾಂಡಿಕಾಪ್ ಗಾಲ್ಫ್ ಚಾಂಪಿಯನ್‍ಶಿಪ್ ಪಂದ್ಯಾಟದಲ್ಲಿ ಏಳು ಮಂದಿ ಚಾಂಪಿಯನ್‍ಶಿಪ್ ಪ್ರಶಸ್ತಿ ಪಡೆದಿದ್ದಾರೆ.

ಪಂದ್ಯಾಟದ ಓಪನ್ ಸ್ಟ್ರೋಕ್ ಪ್ಲೇನಲ್ಲಿ ಮಡಿಕೇರಿಯ ಕೆ.ಪಿ. ರಂಜಿತ್, ನೆಟ್ ಸ್ಟ್ರೋಕ್ ಪ್ಲೇನಲ್ಲಿ ವೀರಾಜಪೇಟೆಯ ಸಿ.ಬಿ. ಮುತ್ತಣ್ಣ, ಓಪನ್ ಸ್ಟೆಬ್ಲ್‍ಫೊರ್ಡ್‍ನಲ್ಲಿ ಪಾಲಿಬೆಟ್ಟದ ಸಿ.ಎಂ. ಅಪ್ಪಣ್ಣ, ಹ್ಯಾಂಡಿಕಾಪ್ ಸ್ಟೆಬ್ಲ್‍ಫೋರ್ಡ್‍ನಲ್ಲಿ ಬೆಂಗಳೂರಿನ ಸುಮನ್ ಬೆಳ್ಳಿಯಪ್ಪ, ಸೀನಿಯರ್ ವಿಭಾಗದಲ್ಲಿ ಸೋಮವಾರಪೇಟೆಯ ಬಿ.ಜಿ ಗುರುಮಲ್ಲೇಶ್, ಡಬಲ್ಸ್‍ನಲ್ಲಿ ಮಡಿಕೇರಿಯ ಸಿ.ಎಂ. ಅಪ್ಪಣ್ಣ ಮತ್ತು ಬೆಂಗಳೂರಿನ ಸುಮನ್ ಬೆಳ್ಳಿಯಪ್ಪ ಅವರುಗಳು ಚಾಂಪಿಯನ್‍ಶಿಪ್ ಪಡೆದರೆ, ಜೂನಿಯರ್ ಟ್ರೋಫಿಯನ್ನು ದುಬೈನ ನಿಖಿಲ್ ಬಾಟಿಯಾ ಮುಡಿಗೇರಿಸಿಕೊಂಡರು.

ಪಂದ್ಯಾಟದ ಓಪನ್ ಸ್ಟ್ರೋಕ್ ಪ್ಲೇನಲ್ಲಿ ಮಡಿಕೇರಿಯ ಗಣೇಶ್ ಮಹೇಂದ್ರ, ನೆಟ್ ಸ್ಟ್ರೋಕ್ ಪ್ಲೇನಲ್ಲಿ ಚೆನ್ನೈನ ಆರ್. ಸುಂದರಮ್, ಓಪನ್ ಸ್ಟೆಬ್ಲ್‍ಫೊರ್ಡ್‍ನಲ್ಲಿ ಬೆಂಗಳೂರಿನ ವಿಘ್ನೇಶ್ ಹೆಬ್ಬಾರ್, ಹ್ಯಾಂಡಿಕಾಪ್ ಸ್ಟೆಬ್ಲ್‍ಫೋರ್ಡ್‍ನಲ್ಲಿ ಬೆಂಗಳೂರಿನ ಫೀಟರ್ ರೋಡ್ರಿಗಸ್, ಸೀನಿಯರ್ ವಿಭಾಗದಲ್ಲಿ ಬೆಂಗಳೂರಿನ ಗ್ರೂಪ್ ಕಮಾಂಡರ್ ಮೂರ್ತಿ, ಡಬಲ್ಸ್‍ನಲ್ಲಿ ಮಡಿಕೇರಿಯ ಸಿ.ಬಿ. ಮುತ್ತಣ್ಣ ಮತ್ತು ಬೆಂಗಳೂರಿನ ಮೈಕಲ್ ರೋಡ್ರಿಗಸ್ ದ್ವಿತೀಯ ಸ್ಥಾನ ಪಡೆದರು.

ಪಂದ್ಯಾಟದಲ್ಲಿ ದುಬೈ, ಚೆನ್ನೈ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಗಾಲ್ಫ್ ಪಟುಗಳು ಪಾಲ್ಗೊಂಡಿದ್ದರು. ಬೇಳೂರು ಕ್ಲಬ್ ಅಧ್ಯಕ್ಷ ಡಿ. ಆನಂದ್ ಬಸಪ್ಪ, ಕಾರ್ಯದರ್ಶಿ ಡಿ. ಆದಿ ಬಸಪ್ಪ, ಖಜಾಂಚಿ ಎ.ಎಂ. ವಿಶ್ವನಾಥ್, ಗಾಲ್ಫ್ ಕ್ಯಾಪ್ಟನ್ ಎ.ಎನ್. ಪ್ರವೀಣ್ ಹಾಗೂ ರಾಮನಾಥನ್, ಸದಸ್ಯರುಗಳಾದ ಶಮಂತ್, ಪವನ್, ರವಿ, ಹಾಗೂ ಸಂಜೀವ್ ಬಸಪ್ಪ ಸೇರಿದಂತೆ ಇತರರು ಕ್ರೀಡಾಕೂಟ ಆಯೋಜಿಸಿದ್ದರು.