ಮಡಿಕೇರಿ, ಅ. 30: ಪಾಲಿಬೆಟ್ಟ ದಲ್ಲಿ ಪÀÅನರ್ ನಿರ್ಮಾಣಗೊಳ್ಳುತ್ತಿರುವ ಮಸೀದಿ ಕಾಮಗಾರಿಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಜಮಾಅತ್‍ನ ಮಾಜಿ ಕಾರ್ಯದರ್ಶಿ ಸಿ.ವೈ. ಫೈಝಲ್, ಪ್ರಕರಣದ ಕುರಿತು ಸೂಕ್ತ ತನಿಖೆÉ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2015 ಅಕ್ಟೋಬರ್‍ನಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಆರಂಭಗೊಂಡ ಮಸೀದಿ ನಿರ್ಮಾಣ ಕಾರ್ಯ ಇನ್ನೂ ಕೂಡ ಪÀÇರ್ಣಗೊಳ್ಳದೆ ಇರುವದು ಸಂಶಯಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
ಜಮಾಅತ್ ಸಮಿತಿಗೆ ದಾನಿಗಳು ಸಾಕಷ್ಟು ನೆರವು ನೀಡಿದ್ದರೂ ಮಸೀದಿಯ ನಿರ್ಮಾಣ ಕಾರ್ಯ ಪÀÇರ್ಣಗೊಂಡಿಲ್ಲ. ಅಲ್ಲದೆ, ಕಾಮಗಾರಿಯ ಯಾವದೇ ಲೆಕ್ಕ ಪತ್ರವನ್ನು ಸಮಿತಿಯ ಸದಸ್ಯರಿಗಾಗಲಿ, ಊರಿನ ಜನರಿಗಾಗಲಿ ಬಹಿರಂಗಪಡಿಸುತ್ತಿಲ್ಲ. ಮೂರು ತಿಂಗಳಿಗೊಮ್ಮೆ ಸಭೆ ನಡೆಸಬೇಕೆನ್ನುವ ನಿಯಮವಿದ್ದರು ಕಳೆದ ಎರಡೂವರೆ ವರ್ಷಗಳಿಂದ ಲೆಕ್ಕಪತ್ರ ಮಂಡಿಸದೆ ಕಾಲಹರಣ ಮಾಡಲಾಗುತ್ತಿದೆ. ಇದರಿಂದ ಅವ್ಯವಹಾರ ನಡೆಯುತ್ತಿರುವ ಬಗ್ಗೆ ಖಾತ್ರಿಯಾಗಿದ್ದು, ಇದನ್ನು ಪ್ರಶ್ನಿಸಿದ್ದಕ್ಕಾಗಿ ಜಮಾಅತ್‍ನಿಂದ ತÀನ್ನನ್ನು ಹೊರ ಹಾಕಿದ್ದಾರೆ ಎಂದು ಆರೋಪಿಸಿದರು.
ಪಾಲಿಬೆಟ್ಟದ ಜಮಾಅತ್ ಸಮಿತಿಗೆ ಆದಾಯದ ಮೂಲವಾಗಿ ಪಠಾಣ್ ಬಾವ ಶಾವಲಿ ಉರೂಸ್ ಮತ್ತು ಅಂಗಡಿ ಮಳಿಗೆಗಳಿವೆ. ಉರೂಸ್‍ನಿಂದ ಸಂಗ್ರಹವಾಗುತ್ತಿರುವ ಹಣವನ್ನು ಯಾವ ಉದ್ದೇಶಕ್ಕಾಗಿ ಖರ್ಚು ಮಾಡಲಾಗುತ್ತಿದೆಯೆಂದು ಮಾಹಿತಿ ನೀಡುತ್ತಿಲ್ಲ. ನೂತನ ಮಸೀದಿಯ ರೇಖಾ ಚಿತ್ರವನ್ನು ಹಾಗೂ ಮಸೀದಿಯ ಇಂಜಿನಿಯರ್ ಯಾರೆಂಬುವದನ್ನು ಬಹಿರಂಗ ಪಡಿಸಿಲ್ಲ. ಸ್ಥಳೀಯ ನಿವಾಸಿಗಳ ಗಮನಕ್ಕೆ ತಾರದೆ ತಮಗಿಷ್ಟ ಬಂದಂತೆ ಕಾಮಗಾರಿ ನಡೆಸಲಾಗುತ್ತಿದೆ. ನೂತನ ಮಸೀದಿಯ ನೆಪ ಹೇಳಿ ಊರಿನವ ರಿಂದ ಹಾಗೂ ಹೊರ ಊರಿನವ ರಿಂದ ದೇಣಿಗೆ ಸಂಗ್ರಹಿಸಲಾಗಿದೆ. ಇದರ ಲೆಕ್ಕ ಪತ್ರವನ್ನು ಕೂಡ ಮಂಡಿಸಿಲ್ಲ. ಲೆಕ್ಕಪತ್ರದ ಬಗ್ಗೆ ಮಾಹಿತಿ ಬಯಸಿದವರ ವಿರುದ್ಧ ಸಮಿತಿ ದೌರ್ಜನ್ಯ ನಡೆಸುತ್ತಿದ್ದು, ಅಗೌರವದಿಂದ ಕಾಣುತ್ತಿದೆ ಎಂದು ಫೈಝಲ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಸ್ಥಳೀಯ ನಿವಾಸಿಗಳಾದ ಎಂ.ಕೆ.ಹೈದರ್ ಹಾಗೂ ಕುಂಞÂ ಮೊಹಮ್ಮದ್ ಉಪಸ್ಥಿತರಿದ್ದರು.