ಮಡಿಕೇರಿ, ಅ. 30: ಟಿಪ್ಪು ಜಯಂತಿಯನ್ನು ವಿರೋಧಿಸಿ ನವೆಂಬರ್ 10 ರಂದು ಜಿಲ್ಲೆಯಾದ್ಯಂತ ಕರಾಳ ದಿನವÀನ್ನು ಆಚರಿಸುವದಾಗಿ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ತಿಳಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕ ಎಂ.ಬಿ. ಅಭಿಮನ್ಯು ಕುಮಾರ್, ಕೊಡಗು ಜಿಲ್ಲೆಯಲ್ಲಿ ಸರ್ಕಾರ ಟಿಪ್ಪು ಜಯಂತಿಯನ್ನು ಬಲವಂತವಾಗಿ ಆಚರಿಸಲು ಮುಂದಾಗಿದ್ದು, ಇದರ ವಿರುದ್ಧ ಹೋರಾಟವನ್ನು ತೀವ್ರಗೊಳಿಸುವದಾಗಿ ಎಚ್ಚರಿಕೆ ನೀಡಿದರು. ಕೊಡಗಿನಲ್ಲಿರುವ ಎಲ್ಲಾ ಸ್ವಾಭಿಮಾನಿಗಳು, ಜಾತಿ ಮತ, ಪಕ್ಷ ಭೇದ ಮರೆತು ಒಗ್ಗಟ್ಟಾಗಿ ಟಿಪ್ಪು ಜಯಂತಿಯನ್ನು ವಿರೋಧಿಸಬೇಕೆಂದು ಕರೆ ನೀಡಿದರು.
ಸರ್ಕಾರ ಕೊಡಗಿನ ಜನರ ಭಾವನೆಗೆ ಧಕ್ಕೆ ತರುತ್ತಿದೆÀ ಎಂದು ಟೀಕಿಸಿದ ಅವರು ಮುಂದಿನ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರದಲ್ಲಿ ಇಲ್ಲದೆ ಇರುವದರಿಂದ ಇದು ಕೊನೆಯ ಟಿಪ್ಪು ಜಯಂತಿಯಾಗಲಿದೆ ಎಂದು ಭವಿಷ್ಯ ನುಡಿದರು. ನಮ್ಮ ಹೋರಾಟ ಮುಸ್ಲಿಮರ ವಿರುದ್ಧವಲ್ಲ. ಬದಲಾಗಿ ಟಿಪ್ಪು ಜಯಂತಿಯ ವಿರುದ್ಧವೆಂದು ಸ್ಪಷ್ಟಪಡಿಸಿದರು.
ಟಿಪ್ಪು ಜಯಂತಿಯನ್ನು ಆಚರಿಸಬೇಕೆಂದು ಮುಸಲ್ಮಾನರು ಸರಕಾರವನ್ನು ಕೇಳಿಕೊಂಡಿರಲಿಲ್ಲ. ಯಾರಿಗೂ
(ಮೊದಲ ಪುಟದಿಂದ) ಬೇಡವಾದ ಜಯಂತಿಯನ್ನು ಸರ್ಕಾರ ಬಲವಂತವಾಗಿ ಹೇರುತ್ತಿದೆÀ ಎಂದು ಅಭಿಮನ್ಯು ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು. ನ.10 ರಂದು ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಮೆರವಣಿಗೆ ನಡೆಸಿದರೆ ಪ್ರತಿಯಾಗಿ ನಾವು ಕೂಡ ಮೆರವಣಿಗೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಟಿಪ್ಪು ಜಯಂತಿ ದಿನ ಉಗ್ರ ಸಂಘÀಟನೆಗಳೊಂದಿಗೆ ನಂಟು ಹೊಂದಿರುವವರು ವಿಧ್ವಂಸಕ ಕೃತ್ಯಗಳನ್ನು ನಡೆಸುವ ಸಾಧ್ಯತೆಗಳಿದ್ದು, ಪೊಲೀಸರು ತೀವ್ರ ನಿಗಾ ವಹಿಸಬೇಕೆಂದು ಒತ್ತಾಯಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೆ. ಸುಬ್ಬಯ್ಯ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅಭಿಮನ್ಯುಕುಮಾರ್ ಇಸ್ಲಾಂ ಮೂಲಭೂತವಾದಿ ಸಂಘಟನೆಗಳ ಹಿಡಿತದಿಂದ ಸುಬ್ಬಯ್ಯ ಹೊರ ಬರುವದು ಸೂಕ್ತವೆಂದರಲ್ಲದೆ, ಚರಿತ್ರೆಯನ್ನು ತಿರುಚುವ ಯತ್ನ ಮಾಡುತ್ತಿದ್ದಾರೆಂದು ಟೀಕಿಸಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಾಂತೆಯಂಡ ರವಿ ಕುಶಾಲಪ್ಪ, ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಡಿ. ನರಸಿಂಹ, ಜಿ.ಪಂ. ಸದಸ್ಯ ಮುರುಳಿ ಕರುಂಬಮ್ಮಯ್ಯ, ಹಿಂದೂ ಜಾಗರಣಾ ವೇದಿಕೆಯ ಸಂಚಾಲಕ ಕುಕ್ಕೇರ ಅಜಿತ್ ಹಾಗೂ ಸಿ.ಪಿ. ಗೋಪಾಲ ಉಪಸ್ಥಿತರಿದ್ದರು.