ಮಡಿಕೇರಿ, ಅ. 30: ತಾ.20.9.2017ರಿಂದ 29.9.2017ರವರೆಗೆ ಬೆಂಗಳೂರಿನ ಪ್ಯಾರಾಚೂಟ್ ರೆಜಿಮೆಂಟ್‍ನಲ್ಲಿ ನಡೆದ ಅಟಾಚ್‍ಮೆಂಟ್ ಶಿಬಿರದಲ್ಲಿ ಕಾವೇರಿ ಪದವಿಪೂರ್ವ ಕಾಲೇಜಿನ ಎನ್.ಸಿ.ಸಿ ಕೆಡೆಟ್ ಕ್ಷೀರಾ ಬಿ.ಟಿ. ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿದ ಏಕೈಕ ಕೆಡೆಟ್ ಆಗಿದ್ದಾಳೆ. 10ದಿನಗಳ ಕಾಲ ನಡೆದ ಈ ಶಿಬಿರದಲ್ಲಿ ಡ್ರಿತ್, ಅಬ್ಸ್ಟಿಕಲ್ ಟ್ರೈನಿಂಗ್, ಸ್ಲಿದರಿಂಗ್, ಜಿಮ್, ಬಾಸ್ಕೆಟ್‍ಬಾಲ್ ಮತ್ತು ವಾಲಿಬಾಲ್‍ಗಳಂತಹ ಕ್ರೀಡೆಗಳಿಗೆ ತರಬೇತಿ ಹಮ್ಮಿಕೊಳ್ಳಲಾಗಿತ್ತು. ಈಕೆ ಡ್ರಿತ್‍ಟೆಸ್ಟ್‍ನ ಅಂತಿಮ ಸುತ್ತಿನ ಮೂವರಲ್ಲಿ ಒಬ್ಬಳಾಗಿದ್ದು ಜರ್ಮನ್ ರೈಫಲ್, ಇನ್‍ಸಾಸ್ ಹಾಗೂ ಟಾವೋಕ್ ರೈಫಲ್‍ಗಳಲ್ಲಿ ಫೈರಿಂಗ್ ತರಬೇತಿಯನ್ನು ಪಡೆದಿದ್ದು ಜರ್ಮನ್ ರೈಫಲ್‍ನಲ್ಲಿ ‘ಬೆಸ್ಟ್ ಫೈರರ್’ ಆಗಿದ್ದಾಳೆ. ಈ ತರಬೇತಿಯ ಕೊನೆ ದಿನದ ಶಿಬಿರ ಜ್ಯೋತಿಯಲ್ಲಿ ಸೋಲೋ ನೃತ್ಯ ಪ್ರದರ್ಶಸಿ ಮೆಚ್ಚುಗೆ ಪಡೆದಿದ್ದಾಳೆ. ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗದಲ್ಲೂ ಮುಂದಿದ್ದು, ಸಾಂಸ್ಕøತಿಕ ಕಾರ್ಯದರ್ಶಿಯಾಗಿರುವ ಈಕೆ ಡಾ.ಎಸ್.ಎನ್. ಬೀನಾ ಹಾಗೂ ಬಿ.ಕೆ. ತಿಮ್ಮಯ್ಯ ಇವರ ಪುತ್ರಿ.