ಗೋಣಿಕೊಪ್ಪಲು, ಅ. 30: ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಟರ್ಫ್ ಮೈದಾನದಲ್ಲಿ ಹಾಕಿಕೂರ್ಗ್ ವತಿಯಿಂದ ನಡೆದ ಎ. ಡಿವಿಜನ್ ಹಾಕಿ ಲೀಗ್‍ನಲ್ಲಿ ಹಾತೂರು ಸ್ಪೋಟ್ರ್ಸ್ ಕ್ಲಬ್, ಬೇಗೂರು, ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ಹಾಗೂ ಮಡಿಕೇರಿ ಚಾರ್ಮರ್ಸ್ ತಂಡಗಳು ಸೆಮಿ ಫೈನಲ್ ಪ್ರವೇಶ ಪಡೆದಿವೆ.

ಸೋಮವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ರೋಚಕ ಆಟ ಪ್ರದರ್ಶಿತಗೊಂಡವು. 8 ತಂಡಗಳು ಗೆಲುವಿಗಾಗಿ ಸಾಕಷ್ಟು ಕಸರತ್ತು ನಡೆಸಿದವು. ಚಾಂಪಿಯನ್ ಹಾತೂರು ಸ್ಪೋಟ್ರ್ಸ್ ಕ್ಲಬ್ ತಂಡವು ಬಿಬಿಸಿ ವಿರುದ್ಧ 5-2 ಗೋಲುಗಳ ಮೂಲಕ ಜಯ ಸಾಧಿಸಿತು. ಹಾತೂರು ಪರ ಶಾನ್ 51 ಹಾಗೂ 52ನೇ ನಿಮಿಷಗಳಲ್ಲಿ 2 ಗೋಲು, 8ರಲ್ಲಿ ಸೋಮಣ್ಣ, 24ರಲ್ಲಿ ಗಣಪತಿ, 30ರಲ್ಲಿ ಧೀರಜ್ ತಲಾ 1 ಗೋಲು ಹೊಡೆದರು. ಬಿಬಿಸಿ ಪರ 26ರಲ್ಲಿ ಕಾರ್ತಿಕ್, 40ರಲ್ಲಿ ಸೋಮಣ್ಣ ತಲಾ ಒಂದು 1 ಹೊಡೆದರು.

ಬೇಗೂರು ತಂಡವು ಪೊದ್ದ್‍ಮಾನಿ ಬ್ಲೂಸ್ಟಾರ್ ತಂಡವನ್ನು 5-2 ಗೋಲುಗಳ ಮೂಲಕ ಸೋಲಿಸಿತು. ಬೇಗೂರು ತಂಡದ ಪರವಾಗಿ 10, 42,ನೇ ನಿಮಿಷಗಳಲ್ಲಿ ಅಯ್ಯಮ್ಮ ಹಾಗೂ 23 ಹಾಗೂ 53 ನೇ ನಿಮಿಷಗಳಲ್ಲಿ ಅರುಣ್ ತಲಾ 2 ಗೋಲು, ದೀಪಕ್ 58ನೇ ನಿಮಿಷದಲ್ಲಿ 1 ಗೋಲು ಹೊಡೆದರು. ಪೊದ್ದ್‍ಮಾನಿ ಪರ ಮಾಚಯ್ಯ 1 ಹಾಗೂ 45ನೇ ನಿಮಿಷಗಳಲ್ಲಿ 2 ಗೋಲು ಬಾರಿಸಿದರು.

ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ತಂಡವು ವೀರಾಜಪೇಟೆ ಟವರ್ಸ್ ವಿರುದ್ಧ 2-1 ಗೋಲುಗಳ ಮೂಲಕ ಗೆಲುವು ಪಡೆಯಿತು. ಪೊನ್ನಂಪೇಟೆ ಪರ 20 ರಲ್ಲಿ ತರುಣ್, 35ರಲ್ಲಿ ಪ್ರತುಚಂದ್ರ, ಟವರ್ಸ್ ಪರ ನಾಣಯ್ಯ 40ನೇ ನಿಮಿಷದಲ್ಲಿ ಗೋಲು ಹೊಡೆದರು.

ಮಡಿಕೇರಿ ಚಾರ್ಮರ್ಸ್ ತಂಡವು ಅಮ್ಮತ್ತಿ ಈಗಲ್ಸ್ ತಂಡವನ್ನು 4-0 ಗೋಲುಗಳ ಮೂಲಕ ಸೋಲಿಸಿತು. ಚಾರ್ಮರ್ಸ್ ಪರ 14, 27, 47 ನೇ ನಿಮಿಷಗಳಲ್ಲಿ ಸುಬ್ಬಯ್ಯ 3 ಗೋಲು, 44 ನೇ ನಿಮಿಷದಲ್ಲಿ ಆಲನ್ ಪೆನಾಲ್ಟಿ ಕಾರ್ನರ್‍ನ್ನು ಗೋಲಾಗಿ ಪರಿವರ್ತಿಸಿದರು.