ಮಡಿಕೇರಿ, ಅ. 31: ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಕೆ.ಪಿ.ಎಂ.ಇ. ಕಾಯ್ದೆಯಲ್ಲಿ ಕೆಲ ಅಂಶಗಳನ್ನು ಕೈಬಿಡುವಂತೆ ಒತ್ತಾಯಿಸಿ ಭಾರತೀಯ ವೈದ್ಯಕೀಯ ಸಂಸ್ಥೆ ತಾ. 3ರಂದು ಖಾಸಗಿ ಆಸ್ಪತ್ರೆಗಳ ವೈದ್ಯಕೀಯ ಸೇವೆಗಳನ್ನು ಸ್ಥಗಿತಗೊಳಿಸಲು ಕರೆ ನೀಡಿದೆ ಎಂದು ಸಂಸ್ಥೆ ಜಿಲ್ಲಾ ಘಟಕ ಅಧ್ಯಕ್ಷ ಡಾ. ಮೋಹನ್ ಅಪ್ಪಾಜಿ ತಿಳಿಸಿದ್ದಾರೆ.ಈಗಾಗಲೇ ಗ್ರಾಹಕರ ನ್ಯಾಯಾಲಯ ಮತ್ತು ಮೆಡಿಕಲ್ ಕೌನ್ಸಿಲ್ಗಳು ರೋಗಿಗಳಿಗೆ ನ್ಯಾಯ ಒದಗಿಸಲು ಇರುವ ಸಂಸ್ಥೆಗಳಾಗಿದ್ದು, ತಪ್ಪಿತಸ್ಥರೆಂದು ತೀರ್ಮಾನವಾದಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನೂ ದಾಖಲಿಸಲು ಅವಕಾಶಗಳಿರುವಾಗ ಜಿಲ್ಲಾ ಮಟ್ಟದಲ್ಲಿ ಮತ್ತೊಂದು ಕುಂದು ಕೊರತೆ ಪರಿಹಾರ ಸಮಿತಿಯ ರಚನೆಯ ಅವಶ್ಯಕತೆ ಇದೆಯೇ ಹೀಗೆ ಸದರಿ ತಿದ್ದುಪಡಿ ಜಾರಿಗೆ ಬಂದಲ್ಲಿ, ಮತ್ತಷ್ಟು ದೂರುಗಳು ವೈದ್ಯರು ಮತ್ತು ಆಸ್ಪತ್ರೆಗಳ ಮೇಲೆ ಹೆಚ್ಚಳವಾಗಿ, ವೈದ್ಯ ಚಿಕಿತ್ಸೆ ನೀಡುವದನ್ನು ಬಿಟ್ಟು ಗ್ರಾಹಕರ ನ್ಯಾಯಾಲಯ ಮತ್ತು ಮೆಡಿಕಲ್ ಕೌನ್ಸಿಲ್ಗಳ ಜೊತೆಗೆ ಇನ್ನೊಂದು ಸಮಿತಿಗೂ ಒಟ್ಟಿಗೇ ಅಲೆದಾಡಬೇಕಾದ ಪರಿಸ್ಥಿತಿ ಉದ್ಭವವಾಗುತ್ತದೆ. ಆದ್ದರಿಂದ ಕುಂದುಕೊರತೆ ನಿವಾರಣೆ ಸಮಿತಿಯನ್ನು ಕಾಯ್ದೆಯಿಂದ ಕೈಬಿಡಬೇಕು.
ಚಿಕಿತ್ಸೆ ವೈಫಲ್ಯದಿಂದಾಗಲೀ, ಆಸ್ಪತ್ರೆಯ ವೆಚ್ಚಗಳ ಏರುಪೇರಿನ ಕಾರಣಕ್ಕೆ ಜೈಲುಶಿಕ್ಷೆ ಮತ್ತು ಜುಲ್ಮಾನೆ ಎಂದಾದಲ್ಲಿ, ಸದುದ್ದೇಶದಿಂದ ಚಿಕಿತ್ಸೆ ನೀಡಿದ ತಪ್ಪಿಗೆ ಅಕಸ್ಮಾತ್ ಅನಾಹುತಗಳಾದಲ್ಲಿ ವೈದ್ಯ ಜೈಲು ಪಾಲಾಗುವದು ಎಷ್ಟರಮಟ್ಟಿಗೆ ಸರಿ? ಅತ್ಯಂತ ಗೌರವಯುತವಾಗಿ ನೋಡಬೇಕಾದ ವೈದ್ಯ ವೃತ್ತಿಗೆ ಇದೆಯೇ ಹೀಗೆ ಸದರಿ ತಿದ್ದುಪಡಿ ಜಾರಿಗೆ ಬಂದಲ್ಲಿ, ಮತ್ತಷ್ಟು ದೂರುಗಳು ವೈದ್ಯರು ಮತ್ತು ಆಸ್ಪತ್ರೆಗಳ ಮೇಲೆ ಹೆಚ್ಚಳವಾಗಿ, ವೈದ್ಯ ಚಿಕಿತ್ಸೆ ನೀಡುವದನ್ನು ಬಿಟ್ಟು ಗ್ರಾಹಕರ ನ್ಯಾಯಾಲಯ ಮತ್ತು ಮೆಡಿಕಲ್ ಕೌನ್ಸಿಲ್ಗಳ ಜೊತೆಗೆ ಇನ್ನೊಂದು ಸಮಿತಿಗೂ ಒಟ್ಟಿಗೇ ಅಲೆದಾಡಬೇಕಾದ ಪರಿಸ್ಥಿತಿ ಉದ್ಭವವಾಗುತ್ತದೆ. ಆದ್ದರಿಂದ ಕುಂದುಕೊರತೆ ನಿವಾರಣೆ ಸಮಿತಿಯನ್ನು ಕಾಯ್ದೆಯಿಂದ ಕೈಬಿಡಬೇಕು.