ಚೆಟ್ಟಳ್ಳಿ, ಅ. 31: ಚೆಟ್ಟಳ್ಳಿ ಎಂಬ ಪುಟ್ಟ ಹಳ್ಳಿಯಿಂದ ಆನ್‍ಲೈನ್ ಮುಖಾಂತರ ಮಾರುಕಟ್ಟೆಯಲ್ಲಿ ಆರೆಂಜ್ ತೀಲ್, ಮೋರ್ನಿಂಗ್ ಮಿಸ್ಟ್ ಹಾಗೂ ಮಲಾರ್ ಎಂಬ ಕೊಡಗಿನ ಸ್ವಾದದ ಕಾಫಿ ಪೌಡರ್ ಹಾಗೂ ದಿ ಗ್ರೇ ಹಾರ್ನ್‍ಬಿಲ್ಲ್ ಎಂಬ ಬ್ರಾಡಿನಡಿ ಕೊಡಗಿನ ಗುಣ ಮಟ್ಟದ ಕರಿಮೆಣಸು ಹಾಗೂ ಏಲಕ್ಕಿಯ ಪ್ಯಾಕಿಂಗ್ ನೊಂದಿಗೆ ಆನ್‍ಲೈನ್ ಮಾರುಕಟ್ಟೆ ಯಲ್ಲಿ ಹೊಸ ಚಾಪನ್ನು ಮೂಡಿ ಸಲು ಹೊರಟಿದ್ದಾರೆ ಐಚೆಟ್ಟೀರ ಸುಬ್ಬಯ್ಯ.

ಹೊಟೇಲ್ ಮ್ಯಾನೇಜ್‍ಮೆಂಟ್ ಮುಗಿಸಿ ಪೂನಾದ ಫಿಲಂ ಆಯಿಂಡ್ ಟೆಲಿವಿಷನ್ ಆಫ್ ಇಂಡಿಯಾದ ಫೋಟೋಗ್ರಫಿಯ ಉನ್ನತ ಪದವಿಯಲ್ಲಿ ಗೋಲ್ಡ್ ಮೆಡಲ್ ಪಡೆದು ಮುಂಬೈನ ಫಿಲಂ ಇಂಡಸ್ಟ್ರಿಯಲ್ಲಿ 12ವರ್ಷಗಳ ಸೇವೆಸಲ್ಲಿಸಿ ಮುನ್ನಾಬಾಯಿ ಎಂಬಿಬಿಎಸ್, ದೇವದಾಸ್‍ನಂತ ಹಲವು 36 ಬಾಲಿವುಡ್ ಫಿಲಂಗಳಲ್ಲಿ ಸಹಾಯಕ ಕ್ಯಾಮರಮೆನ್ನಾಗಿ ಹೆಸರುಗಳಿಸಿದ ಸೋಮವಾರಪೇಟೆ ತಾಲೂಕಿನ ಕೂಡ್ಲೂರು ಚೆಟ್ಟಳ್ಳಿಯ ಮಲ್ಕೋಡು ತೋಟದ ಮಾಲೀಕ ಐಚೆಟ್ಟಿರ ಶಿವು ಸುಬ್ಬಯ್ಯ ತನ್ನ ತಾಯಿನಾಡಾದ ಕೊಡಗಿನ ಮುಖ್ಯ ಬೆಳೆ ಕಾಫಿ, ಕರಿಮೆಣಸು, ಏಲಕ್ಕಿಯ ಸ್ವಾದ, ಗುಣಮಟ್ಟವನ್ನು ದೇಶ ವಿದೇಶಗಳಿಗೆಲ್ಲ ಪ್ರಚುರಪಡಿಸುವ ತವಕ.

ಕಳೆದ 2 ವರ್ಷಗಳಿಂದ ಕೊಡಗಿನಲ್ಲಿನ ಕಾಫಿಗುಣ ಮಟ್ಟದ ಬಗ್ಗೆ, ಮಾರುಕಟ್ಟೆಯ ಬಗ್ಗೆ ಎಲ್ಲ ತಿಳಿಯ ಹೊರಟ ಶಿವು ಸುಬ್ಬಯ್ಯ ಎಲ್ಲಾ ಕಡೆಗಳ ಕಾಫಿ, ಏಲಕ್ಕಿ, ಕರಿಮೆಣಸುಗಳ ಗುಣಮಟ್ಟ ಹೋಲಿಕೆ ಮಾಡಿದಾಗ ಕೊಡಗಿನ ವಾತಾವರಣ ದಲ್ಲಿ ಬೆಳೆಯಲಾಗುವ ಕಾಫಿ ಹಾಗೂ ಸಂಬಾರ ಪದಾರ್ಥಗಳ ಗುಣಮಟ್ಟ ಉತ್ತಮವಾದವು. ಆದರೆ ಕೊಡಗಿನಲ್ಲಿ ಸರಿಯಾದ ಮಾರುಕಟ್ಟೆ ಇಲ್ಲದ ಪರಿಸ್ಥಿತಿ ಒಂದೆಡೆಯಾದರೆ ಸಂಸ್ಕರಣೆಯ ವಿಧಾನವೂ ತಿಳಿಯದೆ ಜೊತೆಗೆ ಕೊಡಗಿನ ಶೇ. 90 ರಷ್ಟು ಭಾಗ ದುಡಿದ ರೈತನ ಶ್ರಮಕ್ಕೆ ಬೆಲೆ ಇಲ್ಲದ ಪರಿಸ್ಥಿಯನ್ನು ಮನಗಂಡು ತನ್ನ ವೃತ್ತಿಯನ್ನೆಲ್ಲ ಬಿಟ್ಟು ಕೊಡಗಿಗೆ ಹಿಂತಿರುಗಿದ. ತನ್ನ ಮಲ್‍ಕೋಡು ತೋಟದಲ್ಲಿನ ಕಾಫಿಯನ್ನು ಗುಣಮಟ್ಟ ಅನುಸಾರ ಕೊಯಿದು, ಒಣಗಿಸಿ ಸಂಗ್ರಹಿಸಿ ಅರೇಬಿಕಾ, ರೋಬಸ್ಟ ಹಾಗೂ ಶೇ. 10 ಚಿಕೋರಿ ಮಿಶ್ರಣದ ಆರೆಂಜ್ ತೀಲ್ ಎಂಬ ಹೆಸರಿನ ಬ್ಯ್ರಾಂಡ್, ಅರೇಬಿಕಾದ ಮೋರ್ನಿಂಗ್ ಮಿಸ್ಟ್ ಎಂಬ ಬ್ರ್ಯಾಂಡ್, ಪ್ರೀಮಿಯಂ ಗ್ರೇಡ್ ಅರೆಬಿಕಾದ ಮಲಾರ್ ದಿ ಗ್ರೇ ಹಾರ್ನ್‍ಬಿಲ್ ಎಂಬ ಬ್ಯಾಂಡಿನಡಿ ಕರಿಮೆಣಸು ಹಾಗೂ ಏಲಕ್ಕಿ ಅತ್ಯುತ್ತಮ ಗುಣಮಟ್ಟದ ಪ್ಯಾಕಿಂಗ್ ನಲ್ಲಿ ಮಾರುಕಟ್ಟೆಗೆ ಬಿಡಲಾಗುತ್ತಿದೆ. ಈiveಜಿಚಿಡಿms.iಟಿ ವೆಬ್‍ಸೈಟನ್ನು ತಾವೇ ಡಿಜೈನ್ ಮಾಡಿ ಅದರಲ್ಲಿ ಕೊಡಗಿನ ಕಾಫಿಯ ಬಗ್ಗೆ ಬ್ರ್ಯಾಂಡ್‍ಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ.

ಕಳೆದ ಒಂದು ತಿಂಗಳಿಂದ ಸಣ್ಣದಾಗಿ ಪ್ರಾರಂಭಿಸಲಾದ ಈ ಆನ್‍ಲೈನ್ ಮಾರುಕಟ್ಟೆಗೆ ಉತ್ತಮ ಗುಣ ಮಟ್ಟದಲ್ಲಿ ತಯಾರಿಸಲು ಒಟ್ಟು 5 ಲಕ್ಷ ವೆಚ್ಚದಲ್ಲಿ ಕಾಫಿ ಬೀಜವನ್ನು ಹುರಿಯಲು ರೋಷ್ಟರ್, ಪುಡಿ ಮಾಡಲು ಗ್ರೈಂಡರ್, ಪ್ಯಾಕಿಂಗ್ನಲ್ಲಿ ಫ್ಲೇವರ್ ಹೊರಗೆ ಹೋಗದಂತೆ ವಾಲ್ ಶೀಲರ್ ಹಾಗೂ ಪ್ಯಾಕಿಂಗ್ ಸಣ್ಣದಾದ ಹೊಸತಂತ್ರಜ್ಞಾನದ ಯಂತ್ರವನ್ನು ಅಳವಡಿಸಿ ಗ್ರಾಹಕರಿಗೆ ಬೇಕಾದ ರೀತಿಯಲ್ಲೇ ಮಾಡಿಕೊಡ ಲಾಗುತಿದ್ದು, ಆನ್‍ಲೈನ್‍ನಲ್ಲಿ ಬುಕ್ ಮಾಡಿದವರಿಗೆ ಪೋಸ್ಟಲ್ ಮೂಲಕ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಸಿಂಗಾಪುರ್‍ನ ಶಾಪ್ ಮ್ಯಾಟಿಕ್ ಆನ್ ಲೈನ್ ಮಾರುಕಟ್ಟೆ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು ಶಿವು ಸುಬಯ್ಯನೊಂದಿಗೆ ಪತ್ನಿ ಆಶಿತ್ ದೇಚಮ್ಮ ಕೂಡ ಕೈಜೋಡಿಸುತಿದ್ದು, ಆನ್‍ಲೈನ್ ಮಾರುಕಟ್ಟೆ ನಿರ್ವಹಣೆ ಯನ್ನು ನೋಡಿಕೊಳ್ಳುತ್ತಾರೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣವಾದ ದುಬಾರೆಯಲ್ಲಿ ಅಂತರರಾಷ್ಟ್ರೀಯ ಕಾಫಿ ಡೇ ಕಾರ್ಯಕ್ರಮದಲ್ಲಿ ಕೊಡಗಿನ ವಿವಿಧ ಕಾಫಿ ಬ್ರಾಂಡ್‍ಗಳ ಜೊತೆ ಚೆಟ್ಟಳ್ಳಿಯ ಮಲ್ಕೋಡ್ ತೋಟದಲ್ಲಿ ತಯಾರಾದ ಈ ಬ್ರಾಂಡ್‍ಗಳ ಪ್ರದರ್ಶನಕ್ಕೆ ಇಟ್ಟಿದು, ಉತ್ತಮ ಪ್ರತಿಕ್ರಿಯೆ ದೊರೆತವು.

ಕೊಡಗಿನ ಕಾಫಿ ಮಾರುಕಟ್ಟೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ಯಾವದೇ ಬೆಳೆಗಾರ ಮುಂದೆ ಬಂದರೆ ಅವರದೇಯಾದ ಬ್ರ್ಯಾಂಡ್‍ನಡಿ ಆನ್‍ಲೈನ್ ಮಾರು ಕಟ್ಟೆಯನ್ನು ಮಾಡಿಕೊಡಲಾಗುವದು. ಕೊಡಗಿನ ಕಾಫಿ ಸ್ವಾದದ ಗುಣಮಟ್ಟ ವನ್ನು ಕಾಯ್ದು ಕೊಂಡ ಪರಿಣಾಮ ಕೆಲವು ಪ್ರತಿಷ್ಟಿತ ಕಂಪನಿಗಳು ನಮ್ಮ ಜೊತೆ ವ್ಯವಹರಿಸಲು ಮಾತುಕತೆ ನಡೆಯುತ್ತಿದೆ ಎಂದು ಶಿವು ಸುಬ್ಬಯ್ಯ ಹೇಳಿದರು. ಹೆಚ್ಚಿನ ಮಾಹಿತಿಗಾಗಿ 08276266629, 9449239325, 9480172994 ಸಂಪರ್ಕಿಸ ಬಹುದಾಗಿದೆ.

ಕೊಡಗಿನ ಕಾಫಿಗುಣ ಮಟ್ಟ ಹಾಗೂ ಉತ್ತಮ ಸ್ವಾದಿಷ್ಟಕರ ವಾಗಿದ್ದು ಅದನ್ನು ಎಲ್ಲೆಡೆ ತಲುಪಿಸುವ ಉದ್ದೇಶದಿಂದ ಆನ್ ಲೈನ್ ಮಾರುಕಟ್ಟೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚಿದಂತೆ ಗ್ರಾಹಕರ ಬೇಡಿಕೆಗೆ ತಕ್ಕಂತೆ ಉತ್ಪಾದನೆಯನ್ನು ಹೆಚ್ಚಿಸುತ್ತೇನೆ ಜೊತೆಗೆ ಕೊಡಗಿನ ಕಾಫಿ ಸ್ವಾದದ ಹಲವು ಫ್ಲೇವರ್‍ಗಳನ್ನು ಮಾಡಿ ಮಾರುಕಟ್ಟೆಯಲ್ಲಿ ಪರಿಚಯಿಸ ಬೇಕೆನ್ನುವ ಉದ್ದೇಶವಿದೆ ಎಂದು ಶಿವು ಸುಬ್ಬಯ್ಯ ಹೇಳಿದ್ದಾರೆ.

-ಪುತ್ತರಿರ ಕರುಣ್ ಕಾಳಯ್ಯ