ಮಡಿಕೇರಿ, ಅ. 31: ಅಪ್ಪಂಗಳ-ಭಾಗಮಂಡ ನಡುವೆ ಅಲ್ಲಲ್ಲಿ ಹಾಳಾಗಿರುವ ರಸ್ತೆ ಡಾಮರೀಕರಣ ಸೇರಿದಂತೆ, ಬಿ. ಶೆಟ್ಟಿಗೇರಿಯಿಂದ ಬಿಟ್ಟಂಗಾಲ ಮಾರ್ಗ ಹಾಗೂ ಟಿ. ಶೆಟ್ಟಿಗೇರಿಯಿಂದ ಬಿರುನಾಣಿ ರಸ್ತೆ ಅಭಿವೃದ್ಧಿಗಾಗಿ ಇಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರು ಭೂಮಿ ಪೂಜೆ ನೆರವೇರಿಸಿದರು.ಅಪ್ಪಂಗಳದಿಂದ ಭಾಗಮಂಡಲ ತನಕ ರಸ್ತೆ ಡಾಮರೀಕರಣಕ್ಕಾಗಿ ರೂ. 2 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಯಿತು. ಶಾಸಕ ಕೆ.ಜಿ. ಬೋಪಯ್ಯ, ವಿಧಾನಸಭಾ ಸದಸ್ಯರುಗಳಾದ ಎಂ.ಪಿ. ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಡಾ. ಡಿಸೋಜ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ, ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ ಸೇರಿದಂತೆ ವಿವಿಧ ಪ್ರಮುಖರು, ಗ್ರಾ.ಪಂ. ಪ್ರತಿನಿಧಿಗಳು, ಇಲಾಖಾ ಅಧಿಕಾರಿಗಳು ಪಾಲ್ಗೊಂಡಿದ್ದರು.ಆ ಬಳಿಕ ವೀರಾಜಪೇಟೆ ಸಮೀಪದ
(ಮೊದಲ ಪುಟದಿಂದ) ಬಿಟ್ಟಂಗಾಲ ಹಾಗೂ ಬಿ. ಶೆಟ್ಟಿಗೇರಿ ರಸ್ತೆ ಮರು ಡಾಮರೀಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ಒಳಗೂಡಿ ಸಚಿವರು ರೂ. 1.50 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಅಲ್ಲದೆ ಟಿ. ಶೆಟ್ಟಿಗೇರಿ ಹಾಗೂ ಬಿರುನಾಣಿ ನಡುವೆ ರಸ್ತೆ ಅಭಿವೃದ್ಧಿಗಾಗಿ ರೂ. 5 ಕೋಟಿ ವೆಚ್ಚದ ಕಾಮಗಾರಿಗೆ ಅವರು ಗಣ್ಯರೊಡ ಗೂಡಿ ಭೂಮಿ ಪೂಜೆಯೊಂದಿಗೆ ಚಾಲನೆ ನೀಡಿದರು.
ಮಡಿಕೇರಿ, ಭಾಗಮಂಡಲ ರಸ್ತೆ ಕಾಮಗಾರಿಗೆ ಹಿಂದಿನ ಉಸ್ತುವಾರಿ ಸಚಿವರಾಗಿದ್ದ ದಿನೇಶ್ ಗುಂಡೂರಾವ್ ಭೂಮಿ ಪೂಜೆ ನೆರವೇರಿಸಿದ್ದರೂ, ಇದುವರೆಗೆ ಲೋಕೋಪಯೋಗಿ ಅಧಿಕಾರಿಗಳು ಕೆಲಸ ನಿರ್ವಹಿಸಿಲ್ಲ ಎಂಬ ಅಸಮಾಧಾನ ಕೂಡ ವ್ಯಕ್ತವಾಯಿತು. ಭೂಮಿ ಪೂಜೆ ನೆರವೇರಿಸಿದ ಸಚಿವರು ಕಾಮಗಾರಿ ಕಳಪೆಯಾಗ ದಂತೆ ಇಂಜಿನಿಯರ್ ಮತ್ತು ಗುತ್ತಿಗೆದಾರ ಸಹಿತ ಸ್ಥಳೀಯರು ಗಮನವಿಡುವಂತೆ ಕಿವಿಮಾತು ಹೇಳಿದರು.