ಮಡಿಕೇರಿ, ಅ. 31: ಹೊದ್ದೂರು ಗ್ರಾಮ ಪಂಚಾಯಿತಿಯ ಪಾಲೇಮಾಡು ನಿವಾಸಿಗಳ ಸ್ಮಶಾನ ಜಾಗದ ಬೇಡಿಕೆಯ ಹೋರಾಟಕ್ಕೆ ಸೂಕ್ತ ಸ್ಪಂದನ ನೀಡದ ಜಿಲ್ಲಾಡಳಿತದ ಧೋರಣೆಯನ್ನು ಖಂಡಿಸಿ, ತಾ. 2 ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಸ್ಮಶಾನ ಜಾಗದಲ್ಲೇ ನಡೆಸುವದಾಗಿ ಬಹುಜನ ಕಾರ್ಮಿಕ ಸಂಘದ ಕಾರ್ಯದರ್ಶಿ ಕೆ. ಪÀÇವಣಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಮಶಾನ ಜಾಗವನ್ನು ಕ್ರಿಕೆಟ್ ಸಂಸ್ಥೆಗೆ ನೀಡಿರುವದನ್ನು ವಿರೋಧಿಸಿ ಇದೇ ಅ. 28 ರಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಆದರೆ ಸ್ಥಳೀಯರ ಸಂಕಷ್ಟಗಳನ್ನು ಕೇಳುವದಕ್ಕೆ ಇಲ್ಲಿಯವರೆಗೂ ಯಾರೂ ಬಂದಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನವನ್ನು ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಹೋರಾಟವನ್ನು ಹತ್ತಿಕ್ಕಲು ಮುಂದಾಗಿರುವ ವ್ಯಕ್ತಿಯ ಬೆಂಬಲಿಗ ಉದ್ದೇಶಪÀÇರ್ವಕವಾಗಿ ಪಾಲೆÉೀಮಾಡಿನ ಪರಿಶಿಷ್ಟ ಯುವಕ ಜಗದೀಶ (ಕಿರಣ್) ಎಂಬಾತನ ಮೇಲೆ ಹಲ್ಲೆ ನಡೆಸಿದ್ದಾನೆ. ಈತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಧರಣಿ ಸಂದರ್ಭ ಒತ್ತಾಯಿಸಲಾಗುವದು ಎಂದು ಕೆ. ಪÀÇವಣಿ ತಿಳಿಸಿದರು.

ಭೀಮಸೇನಾ ಅಧ್ಯಕ್ಷ ಎನ್. ಸುರೇಶ್ ಮಾತನಾಡಿ, ಪಾಲೇಮಾಡಿನ ಬಡ ಮಂದಿಯನ್ನು ಜಿಲ್ಲಾಡಳಿತ ಕಡೆಗಣಿಸುತ್ತಿದೆ. ಪರಿಶಿಷ್ಟ ಜಾತಿಗೆ ಸೇರಿದ 45 ಕ್ಕೂ ಹೆಚ್ಚು ಮಂದಿಯ ಶವ ಸಂಸ್ಕಾರ ಮಾಡಿದ ಸ್ಮಶಾನ ಜಾಗವನ್ನು ಕ್ರಿಕೆಟ್ ಸ್ಟೇಡಿಯಂ ಹೆಸರಿನಲ್ಲಿ ಹಾಳುಗೆಡಹುವ ಮೂಲಕ ದಲಿತರ ಭಾವನೆಗಳ ಮೇಲೆ ಜಿಲ್ಲಾಡಳಿತ ದೌರ್ಜನ್ಯವೆಸಗುತ್ತಿದೆ ಎಂದು ಆರೋಪಿಸಿದರು.

ಗೊಷ್ಠಿಯಲ್ಲಿ ಬಹುಜನ ವಿದ್ಯಾರ್ಥಿ ಸಂಘದ ಪ್ರಮುಖರಾದ ಎಂ. ಅಶ್ವತ್ಥ್ ಮೌರ್ಯ, ಭೀಮಸೇನೆಯ ಸದಸ್ಯರಾದ ನಿಶಿತ್ ಬಿ. ಹಾಗೂ ಹೆಚ್.ಎ. ಉದಯ ಉಪಸ್ಥಿತರಿದ್ದರು.