ನಾಪೆÇೀಕ್ಲು, ನ. 1: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಕೇರಿ ಗ್ರಾಮದ ಅಂಬಾಡಿ ಕಾಲೋನಿ ನಿವಾಸಿ ದಿ. ಪಕೀರ ಅವರ ಪತ್ನಿ ಚೋಮು (85) ಬೆಂಕಿ ಅನಾಹುತದಿಂದ ಸಾವನ್ನಪ್ಪಿದ್ದಾರೆ.

ಮಂಗಳವಾರ ಸಂಜೆ 6 ಗಂಟೆ ಸಮಯಕ್ಕೆ ಚೋಮು ಹೊಲೆಗೆ ಬೆಂಕಿ ಹೊತ್ತಿಸುವ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಬೆಂಕಿ ಕೆನ್ನಾಲಿಗೆಗೆ ಮನೆಯ ಪಕಾಸು ಬಹುತೇಕ ಆಹುತಿಯಾಗಿದ್ದು, ಬೆಂಕಿಯ ತೀವ್ರತೆಗೆ ಚಾವಣಿ ಹೆಂಚು ಸ್ಪೋಟಗೊಂಡ ಪರಿಣಾಮ ಮನೆಯ ಸಮೀಪದವರು ವಿಷಯ ತಿಳಿದು ಪೆÇಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ನಾಪೆÇೀಕ್ಲು ಪೆÇಲೀಸರು ಮೃತ ದೇಹವನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಸಾಗಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ಘಟನೆ ನಡೆಯುವ ಸಂದರ್ಭ ವೃದ್ಧ ಮಹಿಳೆ ಮಾತ್ರ ಮನೆಯಲ್ಲಿದ್ದರೆಂದು ಪೆÇಲೀಸರು ‘ಶಕ್ತಿ’ಗೆ ತಿಳಿಸಿದ್ದಾರೆ.