ಮಡಿಕೇರಿ, ನ. 1: 1956ರ ನ. 1ರ ರಾಜ್ಯ ಪುನರ್ ಘಟನಾ ದಿನವನ್ನು ದುರಾಕ್ರಮಣ ದಿನವೆಂದು ಘೋಷಿಸುವಂತೆ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ನವದೆಹಲಿಯಲ್ಲಿ ಕರಾಳ ದಿನ ಆಚರಿಸಲಾಯಿತು.

ಕೊಡವ ಲ್ಯಾಂಡ್ ಹಕ್ಕೊತ್ತಾಯ ಮಂಡನೆ, ಸಂವಿಧಾನದಲ್ಲಿ ತಿದ್ದುಪಡಿ ಮಾಡುವದರೊಂದಿಗೆ ಕೊಡವ ಜನಾಂಗವನ್ನು ಅತಿ ಸೂಕ್ಷ್ಮ ಅಲ್ಪಸಂಖ್ಯಾತರೆಂದು ಘೋಷಿಸಬೇಕು. ಕೊಡಗಿನಲ್ಲಿ ರೊಹಿಂಗ್ಯಾ, ಐಸೀಸ್ ಉಗ್ರವಾದಿತ್ವಕ್ಕೆ ಕಡಿವಾಣ ಹಾಕಬೇಕು, ಕಾವೇರಿ ನದಿ ರಕ್ಷಣೆಗೆ ಶಾಸನಬದ್ಧ ಸುಗ್ರಿವಾಜ್ಞೆ ಹೊರಡಿಸಬೇಕೆಂಬದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕೇಂದ್ರ ಸರಕಾರ, ರಾಷ್ಟ್ರಪ್ರತಿಗಳಿಗೆ ಮನವಿ ಸಲ್ಲಿಸಲಾಯಿತು.

ಸಿಎನ್‍ಸಿ ಅಧ್ಯಕ್ಷ ಎನ್.ಯು. ನಾಚಪ್ಪ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಕಲಿಯಂಡ ಪ್ರಕಾಶ್, ಬಾಚರಣಿಯಂಡ ಚಿಣ್ಣಪ್ಪ, ಅಜ್ಜಿಕುಟ್ಟಿರ ಲೋಕೇಶ್, ನಂದಿನೆರವಂಡ ವಿಜು, ರೇಖ, ಕಾಟುಮಣಿಯಂಡ ಉಮೇಶ್, ಪುಲ್ಲೇರ ಕಾಳಪ್ಪ, ಸ್ವಾತಿ, ಬಾಚಮಂಡ ಕಸ್ತೂರಿ, ಬೆಲ್ಲು, ಜೆ.ಜಿ. ಮೋಹನ್, ಮದ್ರಿರ ಕರುಂಬಯ್ಯ, ಅನಿತ, ಮಾಚಿಮಂಡ ಅನಿತ, ಲವ, ಕುಲ್ಲೇಟಿರ ಬೇಬ, ಮಂದಪಂಡ ಮನೋಜ್, ಪಟ್ಟಮಾಡ ಕುಶ, ಅಶೋಕ್, ಅಲ್ಮಂಡ ನೆಹರು, ಮಾದೇಟಿರ ತಿಮ್ಮಯ್ಯ ಪಾಲ್ಗೊಂಡಿದ್ದರು.