ಮಡಿಕೇರಿ, ನ. 2 : ಬಹುತೇಕರ ವಿರೋಧದ ನಡುವೆಯೂ ಕೊಡಗು ಜಿಲ್ಲೆಯಲ್ಲಿ ಟಿಪÀÅ್ಪ ಜಯಂತಿಯನ್ನು ಆಚರಿಸಲು ಸರ್ಕಾರ ಮುಂದಾಗಿದ್ದು, ಇದನ್ನು ತೀವ್ರವಾಗಿ ವಿರೋಧಿಸುವದಾಗಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ತಿಳಿಸಿವೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್‍ನ ಜಿಲ್ಲಾ ಅಧ್ಯಕ್ಷ ಟಾಟಾ ಬೋಪಯ್ಯ, ಟಿಪ್ಪು ಭಾರತೀಯ ಮೂಲದವನೇ ಅಲ್ಲವೆಂದು ಅಭಿಪ್ರಾಯಪಟ್ಟರು. ಕೊಡಗಿನಲ್ಲಿ ಸಾಕಷ್ಟು ದೌರ್ಜನ್ಯವನ್ನು ನಡೆಸಿ ಕೊಡವರ ಹತ್ಯೆಗೆ ಕಾರಣನಾಗಿರುವದು ಮಾತ್ರವಲ್ಲದೆ, ಕ್ರಿಶ್ಚಿಯನ್ನರ ನಾಶವೂ ಆಗಿದೆಯೆಂದು ಆರೋಪಿಸಿದರು.

ಜಿಲ್ಲೆಯ ಹಲವು ಪ್ರದೇಶಗಳಿಗೆ ಇಸ್ಲಾಂ ಹೆಸರಿಡುವ ಪ್ರಯತ್ನವನ್ನು ಟಿಪ್ಪು ಮಾಡಿದ್ದಾನೆ. ತಾನು ಗೆದ್ದ ರಾಜ್ಯವನ್ನು ಫ್ರೆಂಚರೊಡನೆ ಹಂಚಿಕೊಳ್ಳುವ ಪ್ರಸ್ತಾಪ ಮಾಡಿದ ಟಿಪÀÅ್ಪ್ಪ ದೇಶಾಭಿಮಾನಿಯಲ್ಲ. ಭಾರತವನ್ನು ಇಸ್ಲಾಮೀಕರಣ ಮಾಡಲು ಪ್ರಯತ್ನಿಸಿದ್ದ ಆತ, ಎಲ್ಲಾ ವ್ಯವಹಾರವನ್ನು ಪರ್ಶಿಯನ್ ಭಾಷೆÀಯಲ್ಲಿ ನಡೆಸುತ್ತಿದ್ದ. ಇಂತಹ ವ್ಯಕ್ತಿಯ ಜಯಂತಿಯನ್ನು ಬಲವಂತವಾಗಿ ಆಚರಿಸಲು ಸರ್ಕಾರ ಮುಂದಾದಲ್ಲಿ ತೀವ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಟಾಟಾ ಬೋಪಯ್ಯ ಎಚ್ಚರಿಕೆ ನೀಡಿದರು.

ಪ್ರಧಾನ ಕಾರ್ಯದರ್ಶಿ ಡಿ. ನರಸಿಂಹ ಮಾತನಾಡಿ, ದೌರ್ಜನ್ಯ ನಡೆಸಿದ ಟಿಪ್ಪುವಿನ ಜಯಂತಿಯನ್ನು ಆಚರಿಸುತ್ತಿರುವ ರಾಜ್ಯ ಸರ್ಕಾರಕ್ಕೆ ವೀರ ಮಹಿಳೆ ಒನಕೆ ಓಬವ್ವನ ಬಗ್ಗೆ ಯಾಕೆ ನೆನಪÀÅ ಬಾರಲಿಲ್ಲವೆಂದು ಪ್ರಶ್ನಿಸಿದರು. ಕ್ರೂರ ವ್ಯಕ್ತಿತ್ವದ ಟಿಪ್ಪುವನ್ನು ವೈಭವೀಕರಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೊಡಗಿನ ಜನರ ಭಾವನೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆÀಯೆಂದು ಆರೋಪಿಸಿದರು.

ಟಿಪ್ಪು ಚರಿತ್ರೆ ತಿಳಿಯದವರು ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಟಿಪÀÅ್ಪ ಜಯಂತಿಯನ್ನು ವೈಭವೀಕರಿಸುತ್ತಿದ್ದಾರೆ. ನಮ್ಮ ಹೋರಾಟ ಟಿಪ್ಪ್ಪುವಿನ ವಿರುದ್ಧವೇ ಹೊರತು ಮುಸ್ಲಿಮರ ವಿರುದ್ಧವಲ್ಲವೆಂದು ನÀರಸಿಂಹ ಸ್ಪಷ್ಟಪಡಿಸಿದರು. ಕೊಡಗಿನ ಜನರ ವಿರೋಧವನ್ನು ಲೆಕ್ಕಿಸದೆ ಟಿಪ್ಪು ಜಯಂತಿ ಆಚರಣೆಗೆ ಸರ್ಕಾರ ಮುಂದಾದÀಲ್ಲಿ ವಿಹೆಚ್‍ಪಿ ಮುಖಂಡ ಕುಟ್ಟಪ್ಪ ಅವರು ನಿಧನರಾದ ದಿನ ನವೆಂಬರ್ 10ನ್ನು ಹುತಾತ್ಮ ದಿನವನ್ನಾಗಿ ಆಚರಿಸುವದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಭಜರಂಗದಳದ ಸಂಚಾಲಕ ಅಜಿತ್ ಕುಮಾರ್, ಸಹ ಸಂಚಾಲಕ ಕೆ.ಹೆಚ್. ಚೇತನ್, ಪ್ರಮುಖರಾದ ಪಿ.ಜಿ. ಕಮಲ್ ಹಾಗೂ ವಿನಯ್ ಕುಮಾರ್ ಉಪಸ್ಥಿತರಿದ್ದರು.