ಗೋಣಿಕೊಪ್ಪಲು, ನ. 2: ಪೊನ್ನಂಪೇಟೆ ತಾಲೂಕು ಘೋಷಣೆಗೆ ಆಗ್ರಹಿಸಿ ಹೋಬಳಿ ಮಟ್ಟದ ಜನಜಾಗೃತಿ ಸಭೆ 5 ಹೋಬಳಿ ಕೇಂದ್ರಗಳಲ್ಲಿ ಪ್ರತ್ಯೇಕ ದಿನಗಳಲ್ಲಿ ನಡೆಯಲಿದೆ.

ತಾ. 6 ರಂದು ಬೆ. 11 ಗಂಟೆಗೆ ಬಾಳೆಲೆ ಕೊಡವ ಸಮಾಜದಲ್ಲಿ ಬಾಳೆಲೆ, ನಿಟ್ಟೂರು, ಪೊನ್ನಂಪ್ಪಸಂತೆ ವ್ಯಾಪ್ತಿಯ ಎಲ್ಲಾ ಸಂಘ- ಸಂಸ್ಥೆಗಳು ಸೇರಿ ಸಭೆ ನಡೆಸಲಿವೆ.

ಕುಟ್ಟ ಕೊಡವ ಸಮಾಜದಲ್ಲಿ ತಾ. 7 ರಂದು ಕುಟ್ಟ, ಬಾಡಗ, ನಾಲ್ಕೇರಿ, ಕುಟ್ಟ ಸುತ್ತಮುತ್ತಲಿನ ಎಲ್ಲಾ ಸಂಘ ಸಂಸ್ಥೆಗಳು, ತಾ. 8 ರಂದು ಟಿ. ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ಟಿ, ಶೆಟ್ಟಿಗೇರಿ, ಶ್ರೀಮಂಗಲ, ಬಿರುನಾಣಿ ವ್ಯಾಪ್ತಿಯ ಜನರು ಸಭೆ ನಡೆಸಿ ಜಾಗೃತಿ ಮೂಡಿಸಲಿದ್ದಾರೆ.

ತಾ. 9 ರಂದು ಪೊನ್ನಂಪೇಟೆ ಕೊಡವ ಸಮಾಜದ ರಿಕ್ರಿಯೇಷನ್ ಕ್ಲಬ್ ಸಭಾಂಗಣದಲ್ಲಿ ಕಿರುಗೂರು, ಹುದಿಕೇರಿ, ಬಲ್ಯಮಂಡೂರು, ಕಾನೂರು, ಬಿ. ಶೆಟ್ಟಿಗೇರಿ, ನಾಗರಿಕ ವೇದಿಕೆ, ಕೊಡವ ಕೂಟ, ವರ್ತಕರ ಸಂಘದ ಸಹಯೋಗದಲ್ಲಿ ಸಭೆ ನಡೆಯಲಿದೆ. ತಾ. 13 ರಂದು ಪೊನ್ನಂಪೇಟೆ ಕೊಡವ ಸಮಾಜ ರಿಕ್ರಿಯೇಷನ್ ಸಭಾಂಗಣದಲ್ಲಿ ಎಲ್ಲಾ ಹೋಬಳಿಗಳ ಸಂಘ-ಸಂಸ್ಥೆಗಳು ಸೇರಿ ಸಾರ್ವಜನಿಕ ಸಭೆ ನಡೆಸಿ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸಲಿದೆ. ಇದೇ ರೀತಿ ಪೊನ್ನಂಪೇಟೆಯಲ್ಲಿ ನಡೆಯುತ್ತಿರುವ ನಿರಂತರ ಧರಣಿಯಲ್ಲಿ ಮುಂದಿನ 21 ದಿನಗಳ ಕಾಲ ಪ್ರತ್ಯೇಕ ಸಂಘ ಸಂಸ್ಥೆಗಳು ಪಾಲ್ಗೊಳ್ಳಲಿವೆ ಎಂದು ಪೊನ್ನಂಪೇಟೆ ತಾಲೂಕು ರಚನೆ ಹೋರಾಟ ಸಮಿತಿ ಪ್ರಕಟಣೆ ತಿಳಿಸಿದೆ.