ಕರಿಕೆ, ನ. 1: ಸುಬ್ರಹ್ಮಣ್ಯ- ತೊಡಿಕಾನ-ಭಾಗಮಂಡಲ ರಸ್ತೆ ಅಭಿವೃದ್ಧಿಗಾಗಿ ತೊಡಿಕಾನದ ಪಟ್ಟಿ ಯಿಂದ ಭಾಗಮಂಡಲದ ತಾವೂರು ಗ್ರಾಮ ತನಕ 9 ಕಿ.ಮೀ. ರಸ್ತೆಯ ಸರ್ವೆ ಕಾರ್ಯ ಕೊಡಗು ಜಿಲ್ಲೆಯ ಲೋಕೋಪಯೋಗಿ ಇಲಾಖೆ ಯಿಂದ ನಡೆಯಿತು.

ತೊಡಿಕಾನದಿಂದ ಪಟ್ಟಿಯ ವರೆಗೆ ಹೋಗುವ 7 ಕಿ.ಮೀ. ರಸ್ತೆ ಯಲ್ಲಿ ತೊಡಿಕಾನದಿಂದ ಒಂದೂ ವರೆ ಕಿ.ಮೀ. ಮುಂದಕ್ಕೆ ಅಮೈ ತೋಟ ಎಂಬಲ್ಲಿಯ ತನಕ ಈಗಾಗಲೇ ರಸ್ತೆ ಡಾಮರೀಕರಣ ಗೊಂಡಿದೆ. ಪಟ್ಟಿಯಿಂದ ಮುಂದಕ್ಕೆ ಕೊಡಗು ಜಿಲ್ಲೆಗೆ ಸೇರುತ್ತಿದ್ದು, ಭಾಗಮಂಡಲ ತನಕ ಮಣ್ಣಿನ ಕಚ್ಚಾ ರಸ್ತೆ ಇದೆ. ತೀರ್ಥಕ್ಷೇತ್ರ ಸಂಪರ್ಕಿಸುವ ಈ ರಸ್ತೆಯನ್ನು ಮೇಲ್ದರ್ಜೆಗೇರಿಸಬೇಕೆಂದು ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಸರಕಾರದ ಅವಧಿಯಲ್ಲಿ ಯೋಜನೆ ಸಿದ್ಧ ಪಡಿಸಲಾಗಿತ್ತು. ಇದೀಗ ಈ ರಸ್ತೆ ಅಭಿವೃದ್ಧಿಗಾಗಿ ಸಿದ್ದರಾಮಯ್ಯ ಸರಕಾರ 5 ಕೋಟಿ ರೂ. ಮಂಜೂರುಗೊಳಿಸಿದೆ.

ತೊಡಿಕಾನ-ಭಾಗಮಂಡಲ ರಸ್ತೆ ದಟ್ಟ ಅರಣ್ಯದ ಮಧ್ಯೆ ಸಾಗುವದ ರಿಂದ ಇದಕ್ಕೆ ಅರಣ್ಯ ಇಲಾಖೆಯ ಅನುಮತಿ ಕಡ್ಡಾಯವಾಗಿದೆ. ಭಾಗಮಂಡಲದ ತಾವೂರು ಗ್ರಾಮ ದಿಂದ 7 ಕಿ.ಮೀ. ರಸ್ತೆ ಮೀಸಲು ಅರಣ್ಯದಲ್ಲಿ ಬರುತ್ತಿದ್ದು, ಕರಿಕೆ ಗ್ರಾಮದಿಂದ ಪಟ್ಟಿ ತನಕದ 2 ಕಿ.ಮೀ. ರಸ್ತೆಯಲ್ಲಿ 1 ಕಿ.ಮೀ. ವನ್ಯಜೀವಿ ಆರಣ್ಯ ಪ್ರದೇಶವಾಗಿದೆ. ರಸ್ತೆ ನಿರ್ಮಾಣ ಮಾಡ ಬೇಕಾದರೆ ಮೀಸಲು ಅರಣ್ಯ ಮತ್ತು ವನ್ಯಜೀವಿ ಅರಣ್ಯ ಇಲಾಖೆಗಳ ಅನುಮತಿ ಪಡೆದು ಕೊಳ್ಳಬೇಕಾಗಿದೆ. ಇದಕ್ಕಾಗಿ ಕೊಡಗು ಜಿಲ್ಲೆಯ ಲೋಕೋಪ ಯೋಗಿ ಇಲಾಖೆ ಸಹಾಯಕ ಅಭಿ ಯಂತರ ಸತ್ಯನಾರಾಯಣ ನೇತೃತ್ವದ ತಂಡ ಆ.1ರಂದು ತೊಡಿಕಾನದ ಪಟ್ಟಿ ಯಿಂದ ಭಾಗಮಂಡಲದ ತಾವೂರು ಗ್ರಾಮದ ತನಕ 9 ಕಿ.ಮೀ. ರಸ್ತೆಯನ್ನು ಜಿಪಿಎಸ್ ಸರ್ವೆ ನಡೆಸಿದರು.

ಪಿಡಬ್ಲ್ಯೂಡಿ ಇಲಾಖೆಯಿಂದ ಅಂದಾಜುಪಟ್ಟಿ ತಯಾರಿಸಿ ವನ್ಯಜೀವಿ ಇಲಾಖೆಯ ಅನು ಮೋದನೆಗಾಗಿ ಕೇಂದ್ರ ಸರಕಾರಕ್ಕೆ ಹಾಗೂ ಮೀಸಲು ಅರಣ್ಯ ಅನುಮೋದನೆಗಾಗಿ ರಾಜ್ಯ ಅರಣ್ಯ ಇಲಾಖೆಗೆ ಕಳುಹಿಸಿಕೊಡಲಿದ್ದಾರೆ. ರಸ್ತೆ ನಿರ್ಮಾ ಣದ ಸಂದರ್ಭ ಸುಮಾರು 7 ಹೆಕ್ಟೇರ್ ಅರಣ್ಯ ಪ್ರದೇಶ ನಷ್ಟವಾಗಲಿದ್ದು ಇಷ್ಟು ಜಾಗವನ್ನು ಜಿಲ್ಲಾಧಿಕಾರಿ ಜಿಲ್ಲೆಯ ಬೇರೆ ಕಡೆ ಇರುವ ಕಂದಾಯ ಇಲಾಖೆ ಜಾಗವನ್ನು ಅರಣ್ಯ ಇಲಾಖೆಗೆ ನೀಡಲಿದ್ದಾರೆ. ಸುಬ್ರಹ್ಮಣ್ಯ-ತೊಡಿಕಾನ-ಭಾಗಮಂಡಲ ರಸ್ತೆಯಲ್ಲಿ ಕಾನೂನು ತೊಡಕು ನಿವಾರಣೆಗೆ ಅರಣ್ಯ ಸಚಿವ ರಮಾನಾಥ ರೈ ಸ್ಪಂದಿಸಿದ್ದು, ಸಚಿವರು ಮತ್ತು ಮೈಸೂರು ಸಂಸದ ಪ್ರತಾಪ್ ಸಿಂಹ ಪ್ರಯತ್ನದಿಂದ ಸರ್ವೆ ಕಾರ್ಯ ಆರಂಭಗೊಂಡಿದ್ದು, ಅರಣ್ಯ ಇಲಾ ಖೆಯ ಅನುಮೋದನೆಯೊಂದಿಗೆ ರಸ್ತೆ ಅಭಿವೃದ್ಧಿಗೆ ಒಪ್ಪಿಗೆ ದೊರೆಯಲಿದೆ ಎಂದು ತಿಳಿದು ಬಂದಿದೆ. ಎರಡೂ ಜಿಲ್ಲೆಯ ಮುಖಂಡ, ಶಾಸಕ ಕೆ.ಜಿ. ಬೋಪಯ್ಯ ಅವರ ಆಸಕ್ತಿ ಮತ್ತು ಪ್ರಯತ್ನದಿಂದ ಈ ರಸ್ತೆಯ ಅಭಿವೃದ್ಧಿ ಯೋಜನೆ ಮಂಡಿಸಲ್ಪಟ್ಟಿತ್ತು.

-ಸುಧೀರ್.