ಮಡಿಕೇರಿ, ನ. 2 : ದೇಶ ಕಂಡ ವೀರಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮತ್ತು ಜನರಲ್ ಕೆ.ಎಸ್. ತಿಮ್ಮಯ್ಯ ಅವರ ಪ್ರತಿಮೆಗಳ ಅನಾವರಣಕ್ಕೆ ಗೋಣಿಕೊಪ್ಪ ಸಜ್ಜುಗೊಂಡಿದ್ದು, ತಾ. 4 ರಂದು ಭೂ ಸೇನೆಯ ಮಹಾದಂಡನಾಯಕರಾದ ಜನರಲ್ ಬಿಪಿನ್ ರಾವತ್ ಅವರು ಪ್ರತಿಮೆಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷ ಕರ್ನಲ್ ಕಂಡ್ರತಂಡ ಸಿ. ಸುಬ್ಬಯ್ಯ ಹಾಗೂ ಕಾರ್ಯದರ್ಶಿ ಉಳ್ಳಿಯಡ ಎಂ. ಪೂವಯ್ಯ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ನೀಡಿದರು. ತಾ. 4 ರಂದು ಬೆಳಿಗ್ಗೆ 10 ಗಂಟೆಗೆ ಗೋಣಿಕೊಪ್ಪ ಕಾವೇರಿ ಕಾಲೇಜು ಆವರಣದಲ್ಲಿ ಇಬ್ಬರು ಸೇನಾನಿಗಳ ಸುಮಾರು ಏಳೂವರೆ ಅಡಿ ಎತ್ತರದ ಕಂಚಿನ ಪ್ರತಿಮೆಗಳನ್ನು ಜನರಲ್ ಬಿಪಿನ್ ರಾವತ್ ಅವರು ಅನಾವರಣಗೊಳಿಸಲಿದ್ದಾರೆ. ಸೇನಾ ಮುಖ್ಯಸ್ಥರೊಂದಿಗೆ ಏರಿಯಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಆನಂದ್, ಸಬ್ ಏರಿಯಾ ಕಮಾಂಡರ್ ಮೇಜರ್ ಜನರಲ್ ಕೆ.ಎಸ್. ನಿಜ್ಜರ್, ಬೆಂಗಳೂರು ಎಂಇಜಿ ಕಮಾಂಡೆಂಟ್ ಬ್ರಿಗೇಡಿಯರ್ ಸಚ್‍ದೇವ್ ಮತ್ತಿತರ ಹಿರಿಯ ಸೇನಾಧಿಕಾರಿಗಳು ಹಾಜರಿರುವರು.

ಸೇನಾ ಮಹಾ ದಂಡನಾಯಕರಾದ ಬಿಪಿನ್ ರಾವತ್ ಅವರು, ಝೆಡ್ ಪ್ಲಸ್ ಭದ್ರತಾ ವರ್ಗಕ್ಕೆ ಸೇರಿರುವದರಿಂದ ಕಾರ್ಯಕ್ರಮದ ಸಂದರ್ಭ ವಿಶೇಷ ಭದ್ರತಾ ವ್ಯವಸ್ಥೆ ಇರುತ್ತದೆ. ಸಾರ್ವಜನಿಕರು ಅಂದು ಬೆಳಿಗ್ಗೆ 9.30ರ ಒಳಗೆ ಸ್ಥಳದಲ್ಲಿ ಹಾಜರಿರುವಂತೆ ಮನವಿ ಮಾಡಿದರು. ಭದ್ರತೆ ಹಾಗೂ ಸುವ್ಯವಸ್ಥೆಯ ದೃಷ್ಟಿಯಿಂದ ಶನಿವಾರ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 12.30 ಗಂಟೆಯವರೆಗೆ ಗೋಣಿಕೊಪ್ಪದ ವಾಹನ ಸಂಚಾರ

(ಮೊದಲ ಪುಟದಿಂದ) ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗುತ್ತದೆ. ಬದಲಿ ಮಾರ್ಗವಾಗಿ ವೀರಾಜಪೇಟೆ ಹಾತೂರು ಮೂಲಕ ಗೋಣಿಕೊಪ್ಪಕ್ಕೆ ತೆರಳುವವರು ಕೈಕೆÉೀರಿ ಕಾಲ್ಸ್ ಶಾಲೆಯ ಆವರಣದಲ್ಲಿ ತಮ್ಮ ವಾಹನವನ್ನು ನಿಲುಗÀಡೆಗೊಳಿಸಬೇಕು. ವಾಹನದಲ್ಲಿಯೆ ಗೋಣಿಕೊಪ್ಪಲಿನಿಂದ ಮುಂದಕ್ಕೆ ತೆರಳುವವರು ಹಾತೂರು, ಕುಂದ, ಪೆÀÇನ್ನಂಪೇಟೆ ಮಾರ್ಗದಲ್ಲಿ ಸಂಚರಿಸಬಹುದು.

ಪೆÀÇನ್ನಂಪೇಟೆ ಕಡೆಯಿಂದ ಗೋಣಿಕೊಪ್ಪಲಿಗೆ ಬರುವವರು ವಾಹನವನ್ನು ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಬಳಿಗೆ ತಂದು ಜಿಎಂಪಿ ಶಾಲೆಯ ಆವರಣದಲ್ಲಿ ನಿಲುಗಡೆಗೊಳಿಸಬಹುದು. ಗೋಣಿಕೊಪ್ಪಲು ಕಡೆಯಿಂದ ವೀರಾಜಪೇಟೆಗೆ ವಾಹನದಲ್ಲಿ ಸಂಚರಿಸುವವರು ಕಳತ್‍ಮಾಡು ಮಾರ್ಗವಾಗಿ ಸಾಗಿ ಕೈಕೇರಿಗಾಗಿ ವೀರಾಜಪೇಟೆಗೆ ತೆರಳಬಹುದು. ಸ್ಥಳೀಯ ಪೆÀÇಲೀಸರು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ವಾಹನ ಸಂಚಾರವನ್ನು ನಿರ್ಬಂಧಿಸಲಿದ್ದಾರೆ. ಹಿರಿಯ ನಾಗರಿಕರು ಹಾಗೂ ಮತ್ತಿತರ ಅಸಹಾಯಕರಿಗೆ ನೆರವಾಗಲು ವಾಹನ ನಿಲುಗಡೆ ಮಾಡಿದ ಸ್ಥಳದ ಎರಡೂ ದಿಕ್ಕಿನಿಂದ ಉಚಿತ ಶಾಲಾ ವಾಹನದ ಸೌಲಭ್ಯವನ್ನು ಮಾಡಲಾಗಿದೆ. ಇದರ ಪ್ರಯೋಜನವನ್ನು ಬೆಳಗ್ಗೆ 9 ಗಂಟೆಯಿಂದ 9.45ರವರೆಗೆ ಪಡೆದುಕೊಳ್ಳಬಹುದಾಗಿದೆ.

ಬೆಳಿಗ್ಗೆ 10 ಗಂಟೆಯಿಂದ ಸೇನೆಯ ಎಂಇಜಿ ತಂಡ ಕಾರ್ಯಕ್ರಮದ ಸ್ಥಳವನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳಲಿದ್ದಾರೆ. ಸೇನಾ ಮುಖ್ಯಸ್ಥರು ವೇದಿಕೆಯಲ್ಲಿ ಹಾಜರಾಗುವವರೆಗೆ ಸಾಮಾನ್ಯವಾಗಿ ನಡೆಯುವ ಸ್ವಾಗತ, ಪರಿಚಯ ಇತ್ಯಾದಿ ಪÀÇರ್ವಭಾವಿ ಕಾರ್ಯಕ್ರಮಗಳು ನಡೆಯುತ್ತದೆ. ನಂತರ ಸೇನಾ ಮುಖ್ಯಸ್ಥರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂನಿಂದ ಪ್ರತಿವರ್ಷ ಸಾಧಕರಿಗೆ ನೀಡಲಾಗುವ ಚಿನ್ನದ ಪದಕವನ್ನು (ಜೀವಮಾನದ ಸಾಧನೆ) ಸೇನಾ ಮುಖ್ಯಸ್ಥರು ಪ್ರಧಾನ ಮಾಡಲಿದ್ದಾರೆ. ವೀರ ಸೇನಾನಿಗಳಾದ ಕಾರ್ಯಪ್ಪ ಹಾಗೂ ತಿಮ್ಮಯ್ಯ ಅವರ ಬದುಕು, ಸೇವೆ, ಸಾಧನೆಗಳ ಫೋಟೋ ಪ್ರದರ್ಶನವನ್ನು ಕೂಡ ಆಯೋಜಿಸಲಾಗಿದ್ದು, ಬೆಳಗ್ಗೆ 9 ಗಂಟೆಯಿಂದ 9.45ರವರೆಗೆ ಸಾರ್ವಜನಿಕರು ವೀಕ್ಷಿಸಬಹುದಾಗಿದೆ ಎಂದು ಫೋರಂನ ಪ್ರಮುಖರು ಮಾಹಿತಿ ನೀಡಿದರು.

ವಿಶ್ವಮಟ್ಟದಲ್ಲಿ ಅದ್ವಿತೀಯ ಸಾಧನೆ ಮಾಡಿದ ಸಾಧಕರುಗಳ ನೆನಪÀÅ ಸಮಾಜದಲ್ಲಿ ಪ್ರತಿನಿತ್ಯ ಇರಬೇಕು. ನಿರಂತರ ಸ್ಮರಣೆ, ಚಿಂತನೆ ಮತ್ತು ಪ್ರೇರಣೆಯ ಮೂಲಕ ಯುವಜನರಿಗೆ ಸ್ಫೂರ್ತಿಯ ನೆಲೆಯಾಗಬೇಕು ಎನ್ನುವ ಉದ್ದೇಶವನ್ನು ಹೊಂದಿ ಇಬ್ಬರು ಸೇನಾನಿಗಳ ಪ್ರತಿಮೆಗಳನ್ನು ಅನಾವರಣಗೊಳಿಸಲಾಗುತ್ತಿದ್ದು, ಸೈನಿಕರ ನಾಡು ಎಂಬ ಪುಟ್ಟ ಕೊಡಗಿನ ಕೀರ್ತಿ ಪತಾಕೆ ಭವಿಷ್ಯದಲ್ಲಿ ಆಗಸದೆತ್ತರಕ್ಕೆ ಹಾರಾಡಬೇಕೆನ್ನುವದೆ ನಮ್ಮ ಗುರಿಯಾಗಿದೆಯೆಂದು ಕಂಡ್ರತಂಡ ಸಿ. ಸುಬ್ಬಯ್ಯ ತಿಳಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿದ್ದು, ಮಾಜಿ ಸೈನಿಕರು ತಮ್ಮ ಬಳಿ ಇರುವ ಪದಕಗಳನ್ನು ಧರಿಸಿಕೊಂಡು ಬರುವದು ಸೂಕ್ತವೆಂದರು. ಇತರ ಸಾರ್ವಜನಿಕರು ತಮ್ಮ ಪದ್ಧತಿಯ ಉಡುಪÀÅಗಳನ್ನು ಧರಿಸಿ ಸಮಾರಂಭಕ್ಕೆ ಆಗಮಿಸಬೇಕೆಂದು ಮನವಿ ಮಾಡಿದರು. ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಗೋಣಿಕೊಪ್ಪ ಮತ್ತು ಸಮೀಪದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸಮವಸ್ತ್ರದೊಂದಿಗೆ ಹಾಜರಾಗುವಂತೆ ಸುಬ್ಬಯ್ಯ ಮನವಿ ಮಾಡಿದರು.