ನಾಪೆÇೀಕ್ಲು, ನ. 2: ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಸರಕಾರ, ಸಂಘ ಸಂಸ್ಥೆಗಳು ಏನೇ ಕಸರತ್ತು ನಡೆಸಿದರೂ ಯುವ ಪೀಳಿಗೆ ಅದರ ಬಗ್ಗೆ ಕ್ಯಾರೆ ಎನ್ನುತ್ತಿಲ್ಲ ಎಂಬುದಕ್ಕೆ ಇದುವೇ ಸಾಕ್ಷಿ.

ಗಾಂಜಾ, ಅಫೀಮ್, ಚರಸ್, ಬ್ರೌನ್ ಶುಗರ್, ಮತ್ತಿತರ ಮಾದಕ ದ್ರವ್ಯ ವಸ್ತುಗಳ ಉಪಯೋಗ, ಕಳ್ಳ ಸಾಗಣೆ, ಮಾರಾಟದ ಬಗ್ಗೆ ಸರಕಾರ ನಿರ್ಬಂಧ ಹೇರಿದೆ. ಇವುಗಳ ಬೆಲೆಯೂ ದುಬಾರಿಯಾಗಿದೆ. ಅದಕ್ಕೆ ಬದಲಾಗಿ ಇತರ ಮತ್ತೇರಿಸುವ ವಸ್ತುಗಳ ಬಗ್ಗೆ ಯುವ ಜನಾಂಗ ಒಲವು ತೋರಿಸುತ್ತಿರುವದು ದುರದೃಷ್ಟಕರ ಎಂಬಂತಾಗಿದೆ.

ಮರಕೆಲಸದಲ್ಲಿ ಅಂಟಿಗಾಗಿ ಬಳಸುವ ಫೆವಿಕಾಲ್ ಅನ್ನು ಮಾದಕ ವಸ್ತುವಾಗಿ ಬಳಸುತ್ತಿರುವ ಆತಂಕಕಾರಿ ವಿಷಯ ಬಹಿರಂಗಗೊಂಡಿದೆ.

ನಾಪೆÇೀಕ್ಲು ಸಮೀಪದ ತೋಟ ಮಾಲಿಕರ ಖಾಲಿಯಿದ್ದ ಲೈನ್ ಮನೆ ಆವರಣದಲ್ಲಿ ಯುವಕರ ಗುಂಪೆÇಂದು ಫೆವಿಕಾಲ್ ಅನ್ನು ಸಣ್ಣ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಸೇವಿಸುತ್ತಿರುವ ಘಟನೆ ಸ್ಥಳೀಯರಿಗೆ ಗೋಚರಿಸಿದೆ. ಸ್ಥಳೀಯರು ಅವರನ್ನು ಹಿಡಿಯುವ ಪ್ರಯತ್ನ ನಡೆಸಿದರಾದರು ಅವರು ತಪ್ಪಿಸಿಕೊಂಡಿದ್ದಾರೆ. ಮುಂದೆ ಬಾಳಿ ಬದುಕಬೇಕಾದ 16-17 ವಯಸ್ಸಿನ ಯುವಕರು ಮಾದಕ ದ್ರವ್ಯದತ್ತ ಹೆಚ್ಚಿನ ಒಲವು ತೋರಿಸುತ್ತಿರುವ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದು, ಇದರ ತಡೆಗೆ ಪೆÇಲೀಸ್ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.