ನಾಪೆÉÇೀಕ್ಲು, ನ. 4: ನಾಪೆÉÇೀಕ್ಲು ಗ್ರಾಮದ ಕಂಗಾಣಂಡ ಕೇರಿ ಅಭಿವೃದ್ಧಿ ಸಮಿತಿಯ ವಾರ್ಷಿಕ ಮಹಾಸಭೆ ನಾಪೆÇೀಕ್ಲು ಭಗವತಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕೇರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಸಭೆಯ ಅಧ್ಯಕ್ಷ ಹಾಗೂ ಕಂಗಾಣಂಡ ಕೇರಿಯ ಅಧ್ಯಕ್ಷ ಬೊಪ್ಪೇರ ಕಾವೇರಪ್ಪ ಯಾವದೇ ಒಂದು ಸಂಸ್ಥೆ ಅಭಿವೃದ್ಧಿ ಹೊಂದಬೇಕಾದರೆ ಎಲ್ಲಾ ಸದಸ್ಯರ ಸಹಕಾರ ಅಗತ್ಯ. ಈಗಾಗಲೇ ಸಂಘದ ಸದಸ್ಯರಿಗೆ ಸಾಲ ವಿತರಿಸಲಾಗಿದ್ದು, ಪ್ರತಿಯೊಬ್ಬರು ಸಂಘದ ನಿಯಮಕ್ಕೆ ಬದ್ಧವಾಗಿ ಕೆಲಸ ನಿರ್ವಹಿಸುತ್ತಿರುವ ಹಿನ್ನೆಲೆ ಸಂಘ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರು. ಸಂಘದ ಸದಸ್ಯರ ಮರಣ ನಿಧಿ ಮೊತ್ತವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರೂ. 500 ಬದಲು ರೂ. 1000 ಗಳಿಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಎಲ್ಲರೂ ಇದಕ್ಕೆ ಸಹಕಾರ ನೀಡಬೇಕು ಎಂದರು. 10ನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದ ಸಂಘದ ಸದಸ್ಯರ ಮಕ್ಕಳಿಗೆ ಪೆÇ್ರೀತ್ಸಾಹ ಧನ ನೀಡುತ್ತಾ ಬರಲಾಗಿದೆ. ಎಲ್ಲರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಸಭೆಯಲ್ಲಿ ಕಂಗಾಂಡ ಗಣೇಶ್ ಗಣಪತಿ, ಕೇಲೇಟಿರ ರುಕ್ಮಿಣಿ, ಅಜ್ಜೇಟಿರ ಮುತ್ತಪ್ಪ, ಅಜ್ಜೇಟಿರ ಸಬಿತಾ ಮುತ್ತಪ್ಪ, ಕೇಲೇಟಿರ ರತಿ, ರಾಷ್ಟ್ರೀಯ ಬಾಸ್ಕೆಟ್ ಬಾಲ್ ಆಟಗಾರ್ತಿ ಕೇಲೇಟಿರ ಹರ್ಷಿತಾ ಬೋಜಮ್ಮ ಅವರ ಅನುಪಸ್ಥಿತಿಯಲ್ಲಿ ತಂದೆ ಕೇಲೇಟಿರ ಬೋಪಯ್ಯ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕಂಗಾಣಂಡ ಕೇರಿಯ ಉಪಾಧ್ಯಕ್ಷ ಕಂಗಾಂಡ ಮಿಟ್ಟು, ಖಜಾಂಚಿ ಕೇಲೇಟಿರ ಬಸಪ್ಪ ಇದ್ದರು. ಕೇಲೇಟಿರ ಕಾವೇರಮ್ಮ ಪ್ರಾರ್ಥನೆ, ಸಂಘದ ಕಾರ್ಯದರ್ಶಿ ಕಂಗಾಂಡ ಜಾಲಿ ಪೂವಪ್ಪ ಸ್ವಾಗತಿಸಿ ಸದಸ್ಯ ಕೆ.ಎಂ. ರಮೇಶ್ ವಂದಿಸಿದರು.